'ಅಸುರನ್' ರೀಮೇಕ್ 'ನಾರಪ್ಪ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಸೌತ್ ಇಂಡಸ್ಟ್ರಿಯಲ್ಲಿ ಮತ್ತೊಂದು ನಿರೀಕ್ಷೆಯ ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾಗಿದೆ. ತೆಲುಗು ನಟ ವೆಂಕಟೇಶ್ ದಗ್ಗುಬಾಟಿ ನಟನೆಯ 'ನಾರಪ್ಪ' ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟಣೆಯಾಗಿದೆ.

'ನಾರಪ್ಪ' ಚಿತ್ರವೂ ಮೇ 14 ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ರಿಲೀಸ್ ದಿನಾಂಕ ಅನೌನ್ಸ್ ಮಾಡುವುದರ ಜೊತೆಗೆ ಚಿತ್ರದ ಎರಡು ಹೊಸ ಪೋಸ್ಟರ್ ಸಹ ಹಂಚಿಕೊಂಡಿದೆ.

ಅಂದ್ಹಾಗೆ, ನಾರಪ್ಪ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರದ ತೆಲುಗು ರೀಮೇಕ್. ತೆಲುಗಿನಲ್ಲಿ ಈ ಚಿತ್ರವನ್ನು ಶ್ರೀಕಾಂತ್ ಅಡ್ಡಾಲ ನಿರ್ದೇಶಿಸಿದ್ದಾರೆ. ಡಿ ಸುರೇಶ್ ಬಾಬು ಮತ್ತು ಕಲೈಪುಲಿ ಎಸ್ ತನು ನಿರ್ಮಾಣ ಮಾಡಿದ್ದಾರೆ.

Narappa starring Venkatesh Daggubati to be released on May 14th

ಪ್ರಿಯಾಮಣಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ರಮೇಶ್ ರಾವ್, ರಾಜೀವ್ ಕನಕಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೇ 14 ರಂದು 'ನಾರಪ್ಪ' ತೆರೆಗೆ ಬರ್ತಿದೆ. ಈ ಕಡೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಇಂದು ಸುಳಿವು ನೀಡಿದ್ದಾರೆ. ನಿಖರವಾದ ದಿನಾಂಕ ಹೇಳದಿದ್ದರೂ ಬೇಸಿಗೆಯಲ್ಲಿ ಬರಲಿದ್ದೇವೆ ಎಂದು ಟೀಸರ್‌ನಲ್ಲಿ ತಿಳಿಸಿದ್ದಾರೆ.

ಧನುಶ್ ನಟನೆಯ ಅಸುರನ್ ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು. ವೆಟ್ರಿಮಾರನ್ ಈ ಚಿತ್ರ ನಿರ್ದೇಶಿಸಿದ್ದರು. ಮಂಜು ವಾರಿಯರ್ ನಾಯಕಿಯಾಗಿ ನಟಿಸಿದ್ದರು. ತಮಿಳಿನಲ್ಲಿ ದೊಡ್ಡ ಹಿಟ್ ಆಗಿತ್ತು.

More from Filmibeat

English summary
Telugu action drama movie Narappa starring Venkatesh Daggubati directed by Srikanth to be released on May 14th. This movie is a remake of the Tamil blockbuster movie Asuran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X