For Quick Alerts
  ALLOW NOTIFICATIONS  
  For Daily Alerts

  'ಅಸುರನ್' ರೀಮೇಕ್ 'ನಾರಪ್ಪ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

  |

  ಸೌತ್ ಇಂಡಸ್ಟ್ರಿಯಲ್ಲಿ ಮತ್ತೊಂದು ನಿರೀಕ್ಷೆಯ ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾಗಿದೆ. ತೆಲುಗು ನಟ ವೆಂಕಟೇಶ್ ದಗ್ಗುಬಾಟಿ ನಟನೆಯ 'ನಾರಪ್ಪ' ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟಣೆಯಾಗಿದೆ.

  'ನಾರಪ್ಪ' ಚಿತ್ರವೂ ಮೇ 14 ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ರಿಲೀಸ್ ದಿನಾಂಕ ಅನೌನ್ಸ್ ಮಾಡುವುದರ ಜೊತೆಗೆ ಚಿತ್ರದ ಎರಡು ಹೊಸ ಪೋಸ್ಟರ್ ಸಹ ಹಂಚಿಕೊಂಡಿದೆ.

  ಟಾಲಿವುಡ್ ಸ್ಟಾರ್ ನಟನ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್!ಟಾಲಿವುಡ್ ಸ್ಟಾರ್ ನಟನ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್!

  ಅಂದ್ಹಾಗೆ, ನಾರಪ್ಪ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರದ ತೆಲುಗು ರೀಮೇಕ್. ತೆಲುಗಿನಲ್ಲಿ ಈ ಚಿತ್ರವನ್ನು ಶ್ರೀಕಾಂತ್ ಅಡ್ಡಾಲ ನಿರ್ದೇಶಿಸಿದ್ದಾರೆ. ಡಿ ಸುರೇಶ್ ಬಾಬು ಮತ್ತು ಕಲೈಪುಲಿ ಎಸ್ ತನು ನಿರ್ಮಾಣ ಮಾಡಿದ್ದಾರೆ.

  ಪ್ರಿಯಾಮಣಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ರಮೇಶ್ ರಾವ್, ರಾಜೀವ್ ಕನಕಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಮೇ 14 ರಂದು 'ನಾರಪ್ಪ' ತೆರೆಗೆ ಬರ್ತಿದೆ. ಈ ಕಡೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಇಂದು ಸುಳಿವು ನೀಡಿದ್ದಾರೆ. ನಿಖರವಾದ ದಿನಾಂಕ ಹೇಳದಿದ್ದರೂ ಬೇಸಿಗೆಯಲ್ಲಿ ಬರಲಿದ್ದೇವೆ ಎಂದು ಟೀಸರ್‌ನಲ್ಲಿ ತಿಳಿಸಿದ್ದಾರೆ.

  ಅಸುರನ್ ತೆಲುಗು ರೀಮೇಕ್‌ನಲ್ಲಿ ವೆಂಕಟೇಶ್ ಎದುರು ಕನ್ನಡಿಗ ವಿಲನ್ಅಸುರನ್ ತೆಲುಗು ರೀಮೇಕ್‌ನಲ್ಲಿ ವೆಂಕಟೇಶ್ ಎದುರು ಕನ್ನಡಿಗ ವಿಲನ್

  ಧನುಶ್ ನಟನೆಯ ಅಸುರನ್ ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು. ವೆಟ್ರಿಮಾರನ್ ಈ ಚಿತ್ರ ನಿರ್ದೇಶಿಸಿದ್ದರು. ಮಂಜು ವಾರಿಯರ್ ನಾಯಕಿಯಾಗಿ ನಟಿಸಿದ್ದರು. ತಮಿಳಿನಲ್ಲಿ ದೊಡ್ಡ ಹಿಟ್ ಆಗಿತ್ತು.

  English summary
  Telugu action drama movie Narappa starring Venkatesh Daggubati directed by Srikanth to be released on May 14th. This movie is a remake of the Tamil blockbuster movie Asuran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X