ಕೋರ್ಟ್ ಮೆಟ್ಟಿಲೇರಿದ ರಮ್ಯಾ ರಘುಪತಿ: 'ಮತ್ತೆ ಮದುವೆ' ರಿಲೀಸ್ ಹೊಸ್ತಿಲಲ್ಲಿ ನರೇಶ್- ಪವಿತ್ರಾಗೆ ಶಾಕ್

ಕನ್ನಡ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಸಹಜೀವನ ನಡೆಸುತ್ತಿದ್ದಾರೆ. ತಮ್ಮದೇ ಲವ್ ಸ್ಟೋರಿಯನ್ನು ಸಿನಿಮಾ ಮಾಡಿದ್ದಾರೆ. 'ಮಳ್ಳಿ ಪೆಳ್ಳಿ' ಸಿನಿಮಾ ನಾಳೆ ರಿಲೀಸ್ ಆಗಬೇಕಿದೆ. ಈ ಹೊತ್ತಲ್ಲೇ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಕೋರ್ಟ್‌ನಲ್ಲಿ ಪಿಟಿಷನ್ ಹಾಕಿದ್ದಾರೆ.

ಎಂ. ಎಸ್ ರಾಜು ನಿರ್ದೇಶನದಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾ ಮೂಡಿ ಬಂದಿದೆ. 'ಮತ್ತೆ ಮದುವೆ' ಹೆಸರಿನಲ್ಲಿ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗ್ತಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗ ರಮ್ಯಾ ರಘುಪತಿ ಹೈದರಾಬಾದ್ ಕುಕಟ್‌ಪಲ್ಲಿ ಫ್ಯಾಮಿಲಿ ಕೋರ್ಟ್‌ನಲ್ಲಿ ಪಿಟಿಷನ್ ದಾಖಲಿಸಿದ್ದಾರೆ. ತಮ್ಮ ಗೌರವಕ್ಕೆ ಧಕ್ಕೆ ಬರುವಂತೆ ಚಿತ್ರದಲ್ಲಿ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ತಮ್ಮ ಕುರಿತು ಇಲ್ಲ ಸಲ್ಲದನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಹಾಗಾಗಿ ಈ ಸಿನಿಮಾ ರಿಲೀಸ್ ಮಾಡಲು ಬಿಡಬಾರದು ಎಂದು ಆಗ್ರಹಿಸಿದ್ದಾರೆ.

Naresh 3rd wife Ramya Raghupathi moves kukatpally Family court to stop release of Malli Pelli

"ನನ್ನ ಹಾಗೂ ನರೇಶ್ ನಡುವೆ ನಡೆದ ಒಂದಷ್ಟು ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅದರಲ್ಲಿ ನನಗೆ ಅವಮಾನವಾಗುವಂತಹ ಸನ್ನಿವೇಶಗಳಿವೆ" ಎಂದು ರಮ್ಯಾ ರಘುಪತಿ ಹೇಳಿದ್ದಾರೆ. ಈಗಾಗಲೇ ಸಿನಿಮಾ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿದ್ದು ಇದೀಗ ಸಿನಿಮಾ ರಿಲೀಸ್ ಆಗುತ್ತಾ ಇಲ್ವಾ? ಎನ್ನುವ ಪ್ರಶ್ನೆ ಉದ್ಭವಿಸಿದೆ.

More from Filmibeat

English summary
Naresh 3rd wife Ramya Raghupathi moves kukatpally Family court to stop release of Malli Pelli. the film also dubbed and simultaneously released in kannada with Mathe Madve title. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X