For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ನರೇಶ್ ಒಟ್ಟು ಆಸ್ತಿಯ ಮೌಲ್ಯವೆಷ್ಟು? ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?

  |

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಎರಡರಲ್ಲೂ ಚರ್ಚೆಗಳು ನಡೆಯುತ್ತಲೇ ಇವೆ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ವಿವಾದಾತ್ಮಕ ಕಮೆಂಟ್‌ಗಳ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಪ್ರೇಮ ಪ್ರಕರಣದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬೆನ್ನಲೇ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅಲ್ಲಿಂದ ಈ ಚರ್ಚೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

  ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!

  ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾದ ತಾರಕ್ಕೇರುತ್ತಿದ್ದಂತೆ ಹಲವು ವಿಷಯಗಳು ಸೌಂಡ್ ಮಾಡುತ್ತಿವೆ. ನರೇಶ್ ಆಸ್ತಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ ಎಂದು ಮಾತುಗಳು ಕೂಡ ಕೇಳಿ ಬಂದಿವೆ. ಇದೇ ವೇಳೆ ತೆಲುಗು ನಟ ನರೇಶ್ ಆಸ್ತಿ ಹಾಗೂ ಸಂಭಾವನೆ ಬಗ್ಗೆನೂ ಸೌಂಡ್ ಮಾಡುತ್ತಿದೆ.

  ನರೇಶ್ ಸಂಭಾವನೆ ಎಷ್ಟು?

  ನರೇಶ್ ಸಂಭಾವನೆ ಎಷ್ಟು?

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಟಾಲಿವುಡ್‌ನಲ್ಲಿ ತುಂಬಾನೇ ಫೇಮಸ್. ಪೋಷಕ ಪಾತ್ರಗಳಲ್ಲಿ ನಟಿಸಿದ್ದರೂ, ಇವರಿಗೆ ಅವರದ್ದೇ ಆದ ಫ್ಯಾನ್ಸ್ ಫಾಲೋವಿಂಗ್ ಇದ್ದಾರೆ. ನರೇಶ್ ಹೀರೊ ಆಗಿ ವೃತ್ತಿ ಆರಂಭಿಸಿದ್ದರೂ, ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್‌ ಮೂಲಗಳ ಪ್ರಕಾರ, ನರೇಶ್ ದಿನಕ್ಕೆ ಲಕ್ಷಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ನರೇಶ್ ಒಂದು ಸಿನಿಮಾಗೆ ಸುಮಾರು 20 ಲಕ್ಷದಿಂದ 40 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

  ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ!ಮದುವೆ ಬಳಿಕ ಈಗ ನೆಕ್ಲೆಸ್ ಕಿತ್ತಾಟ: ಪವಿತ್ರಾ ಲೋಕೇಶ್, ರಮ್ಯಾ ರಘುಪತಿ ಆರೋಪ-ಪ್ರತ್ಯಾರೋಪ!

  ವಿಜಯ ನಿರ್ಮಲಾ ಆಸ್ತಿ ಎಷ್ಟು?

  ವಿಜಯ ನಿರ್ಮಲಾ ಆಸ್ತಿ ಎಷ್ಟು?

  ತೆಲುಗು ನಟ ನರೇಶ್ ಸುಮಾರು 6 ಸಾವಿರ ಕೋಟಿ ಆಸ್ತಿ ಒಡೆಯ ಎಂದು ಹೇಳಾಗಿತ್ತು. ನರೇಶ್ ದುಡಿದಿದ್ದಕ್ಕಿಂತ ಹೆಚ್ಚು ಆಸ್ತಿ ಅವರ ತಾಯಿ ವಿಜಯ ನಿರ್ಮಲಾ ಅವರಿಂದ ಬಂದಿದೆ ಎನ್ನಲಾಗಿದೆ. ವಿಜಯ್ ನಿರ್ಮಲಾ ಬಳಿ ನೂರಾರು ಕೋಟಿ ಬೆಲೆ ಬಾಳುವ ಜಮೀನು ಇದೆ ಎನ್ನಲಾಗಿದೆ. ಚೆನ್ನೈನಲ್ಲಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

  ನರೇಶ್ ಹೀರೊ ಆಗಿದ್ದ ಉತ್ತಮ ಆದಾಯ

  ನರೇಶ್ ಹೀರೊ ಆಗಿದ್ದ ಉತ್ತಮ ಆದಾಯ

  ತೆಲುಗು ನಟ ನರೇಶ್ ಆರಂಭದಲ್ಲಿ ನಾಯಕನಾಗಿ ಇಂಡಸ್ಟ್ರಿಗೆ ಮೊದಲ ಎಂಟ್ರಿ ಕೊಟ್ಟಿದ್ದರು. ಇವರು ಸೂಪರ್ ಹಿಟ್‌ಗಳನ್ನು ನೀಡಿದ್ದರು. ಈ ವೇಳೆ ನರೇಶ್ ಉತ್ತಮ ಸಂಭಾವನೆ ಪಡೆದಿದ್ದರು. ಆದರೆ, ಪೋಷಕ ನಟನಾದ ಮೇಲೆ ಸಂಭಾವನೆ ಕಡಿಮೆಯಾಗಿದ್ದರೂ, ಮೋಸವೇನಿಲ್ಲ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಪೋಷಕ ಪಾತ್ರಗಳಿಗೆ ನರೇಶ್‌ಗೆ ಇನ್ನೂ ಬೇಡಿಕೆ ಇದೆ. ಹೀಗಾಗಿ ದುಡಿಮೆ ಚೆನ್ನಾಗಿದೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.

  ನರೇಶ್ ಒಟ್ಟು ಆಸ್ತಿ ಎಷ್ಟು?

  ನರೇಶ್ ಒಟ್ಟು ಆಸ್ತಿ ಎಷ್ಟು?

  ತೆಲುಗು ನಟ ನರೇಶ್ ಹೈದರಾಬಾದ್‌ನ ಪತಿಸಾರಾ ಎಂಬಲ್ಲಿ ಕೆಲವು ಫ್ಲಾಟ್‌ಗಳನ್ನು ಖರೀದಿ ಮಾಡಿದ್ದಾರೆ. ತೋಟ ಹಾಗೂ ಮನೆಗಳು ಇವೆ. ಇದರೊಂದಿಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ಹೂಡಿಕೆ ಮಾಡಿ ಸಾಕಷ್ಟು ಸಂಪಾದಿಸಿದ್ದಾರೆ. ಮೂರು ದುಬಾರಿ ಕಾರುಗಳಿವೆ. ನರೇಶ್ ಅವರ ಒಟ್ಟು ಆಸ್ತಿ ಮೌಲ್ಯ ರೂ.300 ಕೋಟಿ ರೂ.ಗೂ ಹೆಚ್ಚು ಎಂದು ಟಾಲಿವುಡ್ ಮಾಧ್ಯಮ ವರದಿ ಮಾಡಿವೆ.

  English summary
  Naresh and Pavithra Lokesh Issue: Naresh Assets Value And Remuneration Per Movie Details, Know More.
  Saturday, July 9, 2022, 18:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X