"ನಮ್ಮ ವಯಸ್ಸಿನಲ್ಲಿ ನಾವು ಈಗ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಇದೆ": ಆದರೆ..

ನರೇಶ್, ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದು ಕಡೆ ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇಬ್ಬರು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ತೆಲುಗು ಸಂದರ್ಶನವೊಂದರಲ್ಲಿ ಇಬ್ಬರಿಗೂ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಇದ್ಯಾ? ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಇಬ್ಬರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಪವಿತ್ರಾ ಲೋಕೇಶ್ ನಮ್ಮ ಸಂಸಾರದಲ್ಲಿ ಹುಳಿ ಹಿಂಡಿದಳು ಎಂದು ಆರೋಪಿಸಿದ್ದರು. ಅಲ್ಲಿಂದ ಮುಂದೆ ನರೇಶ್ ಮನೆ ಜಗಳ ಬೀದಿಗೆ ಬಂದಿತ್ತು. ಇತ್ತೀಚೆಗೆ ನರೇಶ್- ಪವಿತ್ರಾ ಲಿವ್ ಇನ್‌ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ತಮ್ಮದೇ ಲವ್‌ಸ್ಟೋರಿಯಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾ ಮೂಲಕ ತೆರೆಗೆ ತಂದಿದ್ದಾರೆ. ತಮ್ಮ ತಮ್ಮ ಪಾತ್ರಗಳಲ್ಲಿ ತಾವೇ ಅಭಿನಯಿಸಿದ್ದಾರೆ.

Naresh and Pavitra Lokesh Gives Clarity On Children

ಇದೊಂದು ಬೋಲ್ಡ್ ಲವ್‌ಸ್ಟೋರಿ ಎಂದು 'ಮಳ್ಳಿ ಪೆಳ್ಳಿ' ಚಿತ್ರಕ್ಕೆ ಟ್ಯಾಗ್‌ಲೈನ್‌ ಕೊಟ್ಟಿದ್ದಾರೆ. ಸದ್ಯ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ನರೇಶ್- ಪವಿತ್ರಾ ಲವ್‌ಸ್ಟೋರಿಯಲ್ಲಿ ನಿರ್ದೇಶಕ ಎಂ. ಎಸ್ ರಾಜು ತೆರೆಗೆ ತಂದಿದ್ದಾರೆ. ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನರೇಶ್ ಹೇಳಿದ್ದಾರೆ. ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರನ್ನು ಟಾರ್ಗೆಟ್ ಮಾಡಿ 'ಮಳ್ಳಿ ಪೆಳ್ಳಿ' ಸಿನಿಮಾ ಮಾಡಿರುವುದು ಗೊತ್ತಾಗುತ್ತಿದೆ.

ಮಕ್ಕಳು ಮಾಡಿಕೊಳ್ಳುವ ಆಲೋಚನೆ ಇದ್ಯಾ?

ತೆಲುಗಿನ ಐಡಿ ಟಾಕೀಸ್ ಯೂಟ್ಯೂಬ್‌ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ನಿಮಗೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಇದ್ಯಾ? ಎನ್ನುವ ಪ್ರಶ್ನೆ ಎದುರಾಗಿದೆ. ಮೊದಲಿಗೆ ಈ ಪ್ರಶ್ನೆಗೆ ಉತ್ತರಿಸಲ್ಲ ಎಂದ ಪವಿತ್ರಾ ನಂತರ ಮಾಡನಾಡಿದ್ದಾರೆ. "ನೀವು ಬಹಳ ಸೀಮಿತ ವಿಚಾರದ ಬಗ್ಗೆ ಮಾತನಾಡುತ್ತಿದ್ದೀರಾ. ಸಾಕಷ್ಟು ಮಕ್ಕಳಿಗೆ ಪ್ರಪಂಚದಲ್ಲಿ ಪೋಷಕರು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮಕ್ಕಳನ್ನು ಪಡೆಯುವ, ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ? ಎಂದಿದ್ದಾರೆ. ನಾವು ಜೋಡಿಯಾಗಿ ಮಾಡೋಕೆ ಸಾಕಷ್ಟು ವಿಷಯಗಳಿವೆ ಎಂದು ವಿವರಿಸಿದ್ದಾರೆ.

Naresh and Pavitra Lokesh Gives Clarity On Children

ನನಗೆ ಪವಿತ್ರಾ ಒಳ್ಳೆ ಜೊತೆಗಾತಿ

ನರೇಶ್ ಮಾತನಾಡಿ "ತಮ್ಮ ತಂದೆ ಕೃಷ್ಣ ಹಾಗೂ ವಿಜಯ ನಿರ್ಮಲಾ ರೀತಿಯಲ್ಲೇ ನಾವಿಬ್ಬರು ಭೇಟಿ ಆದೆವು. ಪವಿತ್ರಾ ಹೇಳಿದಂತೆ ನಾವು ನಮ್ಮ ಜೀವನವನ್ನು ಮೊದಲು ಸರಿ ಮಾಡಿಕೊಳ್ಳಬೇಕು. ಈಗ ಇರುವ ಮಕ್ಕಳೆಲ್ಲಾ ನಮ್ಮ ಮಕ್ಕಳೇ. ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಬಹಳ ದೊಡ್ಡದು. ನಮ್ಮ ತಂದೆ, ತಾಯಿ ಅಗಲಿಕೆ ನಂತರ ತುಂಬ ಭಯಪಟ್ಟಿದ್ದೆ. ನಮ್ಮ ತಾಯಿ ಹೇಳುತ್ತಿದ್ದರು, ನಾನು ನಿನಗೆ ಎಲ್ಲಾ ಕೊಟ್ಟೆ. ಆದರೆ ನನ್ನಂತ ಒಬ್ಬ ಮಡದಿಯನ್ನು, ಜೊತೆಗಾತಿಯನ್ನು ಕೊಡೊಕೆ ಸಾಧ್ಯವಾಗಲಿಲ್ಲ ಎನ್ನುತ್ತಿದ್ದರು.ಅಂತಹ ನಮ್ಮ ತಾಯಿ ಅವರಂತಹ ಮತ್ತೊಬ್ಬ ತಾಯಿಯನ್ನು ಪವಿತ್ರಾ ರೂಪದಲ್ಲಿ ಕೊಟ್ಟಿದ್ದಾರೆ."

ಮಗು ಪಡೆಯಲು ದೈಹಿಕವಾಗಿ ಅರ್ಹರಾಗಿದ್ದೇವೆ

"ನನಗೆ ಪವಿತ್ರಾ ಮಗು, ನಾನು ಪವಿತ್ರಾಗೆ ಮಗು. ನಮಗೆ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ" ಎಂದಿದ್ದಾರೆ. ಈ ಮಾತುಗಳನ್ನು ಕೇಳಿ ಪವಿತ್ರಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ. ಇನ್ನು "ಮಗು ಪಡೆಯಲು ನಾವು ದೈಹಿಕವಾಗಿ ಅರ್ಹರಾಗಿದ್ದೇವೆ" ಎಂದು ನರೇಶ್ ಹೇಳುತ್ತಿದ್ದಂತೆ ಪವಿತ್ರಾ ತಡೆದು ಮುಂದಿನ ಪ್ರಶ್ನೆ ಕೇಳಲು ಹೇಳಿದ್ದಾರೆ.

Naresh and Pavitra Lokesh Gives Clarity On Children

ನಾವು ಮಕ್ಕಳು ಪಡೆಯಬಹುದು

"ನಾವು ಈ ವಿಚಾರಗಳ ಬಗ್ಗೆ ಈ ಐದಾರು ವರ್ಷಗಳಲ್ಲಿ ಸಾಕಷ್ಟು ಮಾತನಾಡಿದ್ದೇವೆ. ವೈದ್ಯಕೀಯವಾಗಿ ನಮ್ಮ ವಯಸ್ಸಿನಲ್ಲಿ ನಾವು ಮಕ್ಕಳನ್ನು ಪಡೆಯುವ ಸಾಮರ್ಥ್ಯ ಇದೆ. ಆದರೆ ನಾವು ಈಗ ಮಕ್ಕಳನ್ನು ಪಡೆದು ಬೆಳೆಸಿದರೆ, ಅವರಿಗೆ 20 ವರ್ಷ ಆಗುವಷ್ಟರಲ್ಲಿ ನಮಗೆ 60 ವರ್ಷ ವಯಸ್ಸಾಗಿರುತ್ತದೆ. ಅದೆಲ್ಲಾ ದೈಹಿಕ ವಿಚಾರಗಳು. ಅದನ್ನು ಮೀರಿ ಹೋಗಬೇಕು" ಎಂದು ನರೇಶ್ ತಿಳಿಸಿದ್ದಾರೆ.

ಪವಿತ್ರಾ ದೇವತೆಯಂತೆ ಕಾಣುತ್ತಾರೆ

"ನನಗೆ ಪವಿತ್ರಾ ದೇವತೆಯಂತೆ, ತಾಯಿಯಂತೆ, ಮಡದಿಯಂತೆ, ಮಗಳಂತೆ, ಸ್ನೇಹಿತೆಯಂತೆ ಕಾಣಿಸುತ್ತಾರೆ. ಆಕೆ ಬಂದ ಮೇಲೆ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ. ನಮ್ಮ ಆಸ್ತಿ ಪಾಸ್ತಿ ಬಗ್ಗೆ ಮಾತಾಡಲ್ಲ. ಆಕೆಗೆ ನನ್ನ ಬ್ಯಾಂಕ್ ಅಕೌಂಟ್ ನಂಬರ್ ಕೂಡ ಗೊತ್ತಿಲ್ಲ" ಎಂದು ನರೇಶ್ ಹೇಳಿದ್ದಾರೆ.

More from Filmibeat

English summary
Naresh and Pavitra Lokesh Gives Clarity On Children. They are in a live-in relationship since 2020. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X