ಹೊಸ ವಿಡಿಯೋ ಸಮೇತ ನರೇಶ್- ಪವಿತ್ರಾ ಲೋಕೇಶ್ ಪ್ರತ್ಯಕ್ಷ: ಇಷ್ಟು ದಿನ ಹೈಡ್ರಾಮಾಗೆ ಮೆಗಾ ಟ್ವಿಸ್ಟ್

ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೋಡಿಯ ಲಿಪ್‌ಲಾಕ್, ಮದುವೆ, ಹನಿಮೂನ್ ವಿಡಿಯೋಗಳು ಸಖತ್ ಸದ್ದು ಮಾಡಿದ್ದವು. ಇದೀಗ ನರೇಶ್ ಹೊಸ ವಿಡಿಯೋ ಜೊತೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಇಷ್ಟು ದಿನದ ಎಲ್ಲಾ ಹೈಡ್ರಾಮಾಗೆ ಬ್ರೇಕ್ ಬಿದ್ದಂತೆ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ.

ನರೇಶ್, ಪವಿತ್ರಾ ಲೋಕೇಶ್ ಹಾಗೂ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ನಡುವಿವ ಆರೋಪ ಪ್ರತ್ಯಾರೋಪಗಳು ಕಳೆದ ಕೆಲ ತಿಂಗಳುಗಳಿಂದ ಭಾರಿ ಚರ್ಚೆ ಹುಟ್ಟಾಕ್ಕಿತ್ತು. ನರೇಶ್- ಪವಿತ್ರಾ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ರಮ್ಯಾ ಆರೋಪಿಸಿದ್ದರು. ಪವಿತ್ರಾ ನಮ್ಮ ಸಂಸಾರದಲ್ಲಿ ಹುಳಿ ಹಿಂಡಿದ್ದಳು ಎಂದು ಗಂಭೀರ ಆರೋಪ ಮಾಡಿದ್ದರು. ಅದಕ್ಕೆ ತಕ್ಕಂತೆ ನರೇಶ್- ಪವಿತ್ರಾ ಕ್ಯಾಮರಾಗಳ ಮುಂದೆ ದರ್ಶನ ಕೊಟ್ಟಿದ್ದರು. ನರೇಶ್ 3ನೇ ಪತ್ನಿ ರಮ್ಯಾ ರಘುಪತಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟೇಲೇರಿದ್ದಾರೆ.

Naresh and Pavitra Lokesh starrer Malli Pelli directed by M S Raju to release this summer

ಪತಿ, ಪತ್ನಿ ಮತ್ತು ಅವಳು ರಿಯಲ್ ಲೈಫ್ ಸ್ಟೋರಿಗೆ ಹೊಸ ವರ್ಷದ ಸಂಭ್ರಮದಲ್ಲಿ ಲಿಪ್‌ಲಾಕ್ ವಿಡಿಯೋ ದೊಡ್ಡ ಟ್ವಿಸ್ಟ್ ಕೊಟ್ಟಿತ್ತು. ಇತ್ತೀಚೆಗೆ ಮದುವೆ, ಹನಿಮೂನ್ ವಿಡಿಯೋಗಳು ಬಂದಿತ್ತು. ಇದೀಗ ನರೇಶ್- ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದೆ. ಹೊಸ ಟೀಸರ್ ವಿಡಿಯೋ ಕೂಡ ಬಿಟ್ಟಿದ್ದು ಸಮ್ಮರ್‌ನಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ. ಇದೇ ಚಿತ್ರದ ಪಬ್ಲಿಸಿಟಿಗಾಗಿ ಇಷ್ಟು ದಿನ ನರೇಶ್- ಪವಿತ್ರಾ ಲೋಕೇಶ್ ಮದುವೆ ವಿಡಿಯೋ ನಾಟಕ ಮಾಡಿದರು ಎನ್ನುವುದು ಗೊತ್ತಾಗುತ್ತಿದೆ.

Naresh and Pavitra Lokesh starrer Malli Pelli directed by M S Raju to release this summer

'ಮಳ್ಳಿ ಪೆಳ್ಳಿ' ಸಿನಿಮಾ ಕನ್ನಡಕ್ಕೂ ಡಬ್ ಆಗಿ 'ಮತ್ತೆ ಮದುವೆ' ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ನರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಎಂ. ಎಸ್. ರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಕೆಲ ದಿನಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟಾಕ್ಕಿತ್ತು. ಈಗಾಲೇ ನರೇಶ್- ಪವಿತ್ರಾ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ ಈ ಸಿನಿಮಾ ತಮ್ಮದೇ ನಿಜ ಜೀವನದ ಕಥೆಯನ್ನು ನರೇಶ್ ತೆರೆಗೆ ತರುತ್ತಿದ್ದಾರಂತೆ. ಮದುವೆಯಾಗಿ ಡಿವೋರ್ಸ್ ಪಡೆದು ಒಂಟಿಯಾದ ಪುರುಷ ಹಾಗೂ ಮಹಿಳೆಯ ಕಥೆ ಚಿತ್ರದಲ್ಲಿದೆಯಂತೆ.

ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿರುವ 'ಮಳ್ಳಿ ಪೆಳ್ಳಿ' ಸಿನಿಮಾ ಏಪ್ರಿಲ್ ಅಥವಾ ಮೇ ನಲ್ಲಿ ತೆರೆ ಕಾಣಲಿದೆ. ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಆಗಿದ್ದು ಎಂ. ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ತಾರಾಗಣದಲ್ಲಿದ್ದಾರೆ. ಚಿತ್ರದ ಹಾಡುಗಳಿಗೆ ಸುರೇಶ್ ಬೊಬ್ಬಿಲಿ ಸಂಗೀತವಿದೆ.

ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಹೊಸ ವರ್ಷದ ಸಂಭ್ರಮದಲ್ಲಿ ಪವಿತ್ರಾ ಲೋಕೇಶ್ ಜೊತೆ ಲಿಪ್‌ಲಾಕ್ ಮಾಡಿ ವಿಡಿಯೋ ಶೇರ್ ಮಾಡಿದ್ದ ನರೇಶ್ ಶೀಘ್ರದಲ್ಲೇ ಮದುವೆ ಆಗುವುದಾಗಿ ಘೋಷಿಸಿದ್ದರು. ಆದರೆ ಆಗಲೇ ರಮ್ಯಾ ರಘುಪತಿ ಇದು ಸಿನಿಮಾ ವಿಡಿಯೋ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ನನಗೆ ಡಿವೋರ್ಸ್ ಕೊಡದೇ ನರೇಶ್ ಮತ್ತೊಂದು ಮದುವೆ ಆಗಲು ಸಾಧ್ಯವಿಲ್ಲ ಎಂದಿದ್ದರು.

ಇತ್ತೀಚೆಗೆ ಇಬ್ಬರು ಮದುವೆ ಆಗಿರುವಂತೆ ಮತ್ತೊಂದು ವಿಡಿಯೋ ಬಿಟ್ಟಿದ್ದರು. ನಂತರ ದುಬೈಗೆ ಹನಿಮೂನ್ ಹೋಗಿ ಬಂದಿರುವುದಾಗಿಯೂ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಇದೆಲ್ಲವೂ 'ಮಳ್ಳಿ ಪೆಳ್ಳಿ' ಸಿನಿಮಾ ಪ್ರಚಾರದ ಗಿಮ್ಮಿಕ್ಕು ಎನ್ನುವುದು ಇದೀಗ ಸ್ಪಷ್ಟವಾಗ್ತಿದೆ. ಹಾಟ್ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡುವುದರಲ್ಲಿ ಎಂ. ಎಸ್ ರಾಜು ನಿಸ್ಸೀಮರು. ಹಾಗಾಗಿ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಅವರಿಗೆ ಒಪ್ಪಿಸಿದ್ದಾರೆ ನರೇಶ್. ಇನ್ನು ಚಿತ್ರದಲ್ಲಿ ನರೇಶ್- ಪವಿತ್ರಾ ಹಸಿಬಿಸಿ ದೃಶ್ಯಗಳು ಇದೆ ಎನ್ನಲಾಗ್ತಿದೆ.

More from Filmibeat

English summary
Naresh and Pavitra Lokesh starrer Malli Pelli directed by M S Raju to release this summer. looks like the recently Released liplock, marriage videos is the promotional of the same Movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X