ತೆಲುಗು ನಟ ನರೇಶ್- ಕನ್ನಡ ನಟಿ ಪವಿತ್ರಾ ಲೋಕೇಶ್ 'ಮತ್ತೆ ಮದುವೆ' ಯಾವಾಗಂದ್ರೆ?

ಲಿಪ್‌ಲಾಕ್ ಸೀನ್, ಮದುವೆ ಸೀನ್, ಹನಿಮೂನ್ ವಿಡಿಯೋ ಅಂತೆಲ್ಲಾ ಭಾರೀ ಸದ್ದು ಮಾಡಿದ ನರೇಶ್ ಇದೀಗ 'ಮತ್ತೆ ಮದುವೆ' ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ನರೇಶ್ ಹಾಗೂ ಪವಿತ್ರಾ ಲವ್ವಿಡವ್ವಿ ಗೊತ್ತಿರೋದೇ. ತಮ್ಮದೇ ನಿಜ ಜೀವನದ ಕತೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರ್ತಿದೆ ಈ ಜೋಡಿ. ತೆಲುಗು ಮತ್ತು ಕನ್ನಡದಲ್ಲಿ ಸಿನಿಮಾ ನಿರ್ಮಾಣ ಆಗಿದೆ.

ಈಗಾಗಲೇ 'ಮಳ್ಳಿ ಪೆಳ್ಳಿ' ಸಿನಿಮಾ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಚಿತ್ರದ ಲಿರಿಕಲ್ ಸಾಂಗ್‌ವೊಂದು ಕೂಡ ಹೊರ ಬಂದಿದೆ. ಎಂ. ಎಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ನರೇಶ್ ಹಾಗೂ ಪವಿತ್ರಾ ನಿಜಜೀವನದ ತಮ್ಮದೇ ಪಾತ್ರಗಳನ್ನು ತಾವೇ ನಿಬಾಯಿಸಿದ್ದಾರೆ. ಇನ್ನು ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಪಾತ್ರದಲ್ಲಿ ವನಿತಾ ವಿಜಯ್‌ ಕುಮಾರ್ ಕಾಣಿಸಿಕೊಂಡಿದ್ದಾರೆ. ಇನ್ನು ಮೈಸೂರಿನ ಹೋಟೆಲ್‌ನಲ್ಲಿ ನಡೆದ ಹೈಡ್ರಾಮಾದ ಝಲಕ್ ಕೂಡ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿದೆ.

Naresh and Pavitra lokesh Starrer Malli Pelli Releasing in Worldwide Theaters On May 26th

ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರನ್ನು ಟಾರ್ಗೆಟ್ ಮಾಡಿ ನರೇಶ್ ಈ ಸಿನಿಮಾ ಮಾಡಿರೋದು ಗೊತ್ತಾಗುತ್ತಿದೆ. ತಾನು ಯಾಕೆ ಆಕೆಯಿಂದ ದೂರಾಗಿದ್ಯಾಕೆ? ಪವಿತ್ರಾ ಲೋಕೇಶ್‌ಗೆ ಹೇಗೆ ಹತ್ತಿರವಾಗಿದ್ದು ಯಾಕೆ? ಅನ್ನುವುದನ್ನೆಲ್ಲಾ ತಮ್ಮ ದೃಷ್ಟಿಕೋನದಲ್ಲಿ ನರೇಶ್ ತೋರಿಸೋಕೆ ಹೊರಟಿದ್ದಾರೆ. ಈ ಸಿನಿಮಾ ಪ್ರಚಾರದ ಭಾಗವಾಗಿಯೇ ಲಿಪ್‌ಲಾಕ್‌, ಮದ್ವೆ, ಹನಿಮೂನ್ ವಿಡಿಯೋಗಳನ್ನು ರಿಲೀಸ್ ಮಾಡಿದ್ದರು ಎನ್ನುವುದು ರಿವೀಲ್ ಆಗಿದೆ. ನರೇಶ್ ತಮ್ಮ 3ನೇ ಪತ್ನಿಯಿಂದ ದೂರಾಗಿದ್ದು ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮಗುವಿನ ಕಾರಣಕ್ಕೆ ಡಿವೋರ್ಸ್ ಕೊಡೋಕೆ ಸಾಧ್ಯವಿಲ್ಲ ಎಂದು ರಮ್ಯಾ ರಘುಪತಿ ಹೇಳುತ್ತಾ ಬರ್ತಿದ್ದಾರೆ. ಪವಿತ್ರಾ ಲೋಕೇಶ್ ಕಾರಣದಿಂದಲೇ ನಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿತು ಎಂದು ಆರೋಪಿಸಿದ್ದರು. ಆದರೆ ನರೇಶ್- ಪವಿತ್ರಾ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ಆದರೆ ಮೈಸೂರಿನ ಹೋಟೆಲ್‌ವೊಂದರ ಕೋಣೆಯಲ್ಲಿ ಇಬ್ಬರು ರಮ್ಯಾ ರಘುಪತಿ ಕೈಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು ದೊಡ್ಡ ಸುದ್ದಿ ಆಗಿತ್ತು. ಇದನ್ನು ಕೂಡ ಸಿನಿಮಾದಲ್ಲಿ ತೋರಿಸಲಾಗ್ತಿದೆ.

Naresh and Pavitra lokesh Starrer Malli Pelli Releasing in Worldwide Theaters On May 26th

ಕೆಲ ಸಿನಿಮಾಗಳಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ನಟಿಸಿದ್ದಾರೆ. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಒಡನಾಟ ಬೆಳೆದಿತ್ತು. ಇನ್ನು ತಮ್ಮದೇ ಬ್ಯಾನರ್‌ನಲ್ಲಿ ನರೇಶ್ 'ಮಳ್ಳಿ ಪೆಳ್ಳಿ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜಯಸುಧಾ, ಶರತ್ ಬಾಬು, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಸುರೇಶ್ ಬೊಬ್ಬಿಲಿ ಸಂಗೀತ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ, ಅನಂತ ಶ್ರೀರಾಮ್ ಸಾಹಿತ್ಯ ಈ ಚಿತ್ರಕ್ಕಿದೆ.

ಪವಿತ್ರಾ ಲೋಕೇಶ್‌ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಅಲ್ಲದೇ ನರೇಶ್- ಪವಿತ್ರಾ ಹಾಗೂ ರಮ್ಯಾ ರಘುಪತಿ ರಗಳೆ ಕರ್ನಾಟಕದಲ್ಲೂ ಸದ್ದು ಮಾಡಿತ್ತು. ಹಾಗಾಗಿ ಚಿತ್ರವನ್ನು 'ಮತ್ತೆ ಮದುವೆ' ಹೆಸರಿನಲ್ಲಿ ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

Naresh and Pavitra lokesh Starrer Malli Pelli Releasing in Worldwide Theaters On May 26th

ಮೇ 26ರಂದು 'ಮಳ್ಳಿ ಪೆಳ್ಳಿ' ಸಿನಿಮಾ ಬಿಡುಗಡೆ ಮಾಡುವುದಾಗಿ ಇದೀಗ ಚಿತ್ರತಂಡ ಘೋಷಿಸಿದೆ. ಹೊಸ ಪೋಸ್ಟರ್ ಸಮೇತ ಈ ವಿಚಾರವನ್ನು ಬಹಿರಂಗಪಡಿಸಿದೆ. ನರೇಶ್- ಪವಿತ್ರಾ ಲೇಟ್ ಏಜ್ ಲವ್‌ಸ್ಟೋರಿಯನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಏಕಕಾಲಕ್ಕೆ 2 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಸಿನಿಮಾ ಬಗ್ಗೆ ರಮ್ಯಾ ರಘುಪತಿ ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Naresh and Pavitra lokesh Starrer Malli Pelli Releasing in Worldwide Theaters On May 26th. the film will be dubbed and simultaneously released in kannada with Mathe Madve title. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X