ಮತ್ತೆ ಬರ್ತಿದ್ದಾರೆ ಪವಿತ್ರಾ ಲೋಕೇಶ್- ನರೇಶ್: ಈ ಬಾರಿ ಅದೆಂಥಾ ಬಾಂಬ್ ಸಿಡಿಸ್ತಾರೋ?
ತೆಲುಗು ನಟ ನರೇಶ್- ಪವಿತ್ರಾ ಲೋಕೇಶ್ ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಲಿಪ್‌ಲಾಕ್, ಮದುವೆ, ಹನಿಮೂನ್ ಅಂತೆಲ್ಲಾ ವಿಡಿಯೋಗಳನ್ನು ರಿಲೀಸ್ ಮಾಡಿ ಜೋಡಿ ಚರ್ಚೆ ಹುಟ್ಟಾಕ್ಕಿತ್ತು. ಕೊನೆಗೆ ಇದೆಲ್ಲಾ 'ಮಳ್ಳಿ ಪೆಳ್ಳಿ' ಅನ್ನೋ ಸಿನಿಮಾ ಪಬ್ಲಿಸಿಟಿ ಗಿಮಿಕ್ ಅನ್ನೋದು ಗೊತ್ತಾಯಿತು. ಇದೀಗ ಈ ಜೋಡಿ ಮತ್ತೊಂದು ಬಿಗ್ ಅಪ್‌ಡೇಟ್ ಜೊತೆ ಬಂದಿದೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ವಲ್ಲಿ ಬಿದ್ದಿರೋದು ಗೊತ್ತೇಯಿದೆ. ಶೀಘ್ರದಲ್ಲೇ ಇಬ್ಬರು ಮದುವೆ ಆಗಲು ನಿರ್ಧರಿಸಿದ್ದಾರೆ. ಆದರೆ ಡಿವೋರ್ಸ್ ಸಮಸ್ಯೆ ಬಗೆಹರಿಯದ ಕಾರಣ ಜೋಡಿ ಸದ್ಯ ಸಹಜೀವನ ನಡೆಸ್ತಿದೆ ಎನ್ನಲಾಗ್ತಿದೆ. ಸದ್ಯ ಇವರಿಬ್ಬರು ಎಂ. ಎಸ್ ರಾಜು ನಿರ್ದೇಶನದ 'ಮಳ್ಳಿ ಪೆಳ್ಳಿ' ಸಿನಿಮಾದಲ್ಲಿ ನಟಿಸಿದ್ದಾರೆ. 50 ವರ್ಷ ದಾಟಿದ ಜೋಡಿಯ ಪ್ರೀತಿ, ಮದುವೆಯ ಸುತ್ತಾ ಈ ಸಿನಿಮಾ ಕತೆ ಸುತ್ತಲಿದೆ. ಸದ್ಯ ಈ ಸಿನಿಮಾ ಕುರಿತ ಮತ್ತೊಂದು ಅಪ್‌ಡೇಟ್ ಬಂದಿದೆ.

ಏಪ್ರಿಲ್ 13ಕ್ಕೆ 'ಮಳ್ಳಿ ಪೆಳ್ಳಿ' ಚಿತ್ರದ ಟೀಸರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಈ ಸಿನಿಮಾ 'ಮತ್ತೆ ಮದುವೆ' ಹೆಸರಿನಲ್ಲಿ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗ್ತಿದೆ. ಹೊಸ ಪೋಸ್ಟರ್ ಸಮೇತ ಈ ವಿಚಾರವನ್ನು ಘೋಷಿಸಲಾಗಿದೆ. ಪೋಸ್ಟರ್‌ನಲ್ಲಿ ನರೇಶ್ ಸೂಟ್ ಧರಿಸಿದ್ದರೆ ಪವಿತ್ರಾ ಲೋಕೇಶ್ ಸೀರೆಯಲ್ಲಿ ಮಿಂಚಿದ್ದಾರೆ. ಪೋಸ್ಟರ್ ಬ್ಯಾಕ್‌ಗ್ರೌಂಡ್, ಟೈಟಲ್ ಕಲರ್, ಜೋಡಿಯ ಕಾಸ್ಟ್ಯೂಮ್ ಕಲರ್ ಮ್ಯಾಚಿಂಗ್ ಆಗಿರೋದು ವಿಶೇಷ.
ಇಬ್ಬರೂ ಕೈಯಲ್ಲಿ ಲವ್ ಸಿಂಬಲ್ ತೋರಿಸುತ್ತಾ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಿಪ್‌ಲಾಕ್, ಹನಿಮೂನ್ ಅಂತೆಲ್ಲಾ ಸಿನಿಮಾ ಪಬ್ಲಿಸಿಟಿ ಮಾಡಿದ್ದ ಜೋಡಿ ಸಿನಿಮಾದಲ್ಲಿ ಹೇಗೆಲ್ಲಾ ಕಾಣಿಸಿಕೊಂಡಿದ್ದಾರೋ? ಟೀಸರ್ ಏನೆಲ್ಲಾ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೋ ಎನ್ನುವ ಕುತೂಹಲ ಕೆಲವರಲ್ಲಿದೆ. ಪ್ರಮೋಷನ್‌ಗೆ ಅಷ್ಟೆಲ್ಲಾ ಹಂಗಾಮ ಮಾಡಿದವರು ಸಿನಿಮಾದಲ್ಲಿ ಇನ್ನು ಏನೇನ್ ಮಾಡಿದ್ದಾರೋ ಅಂತ ಟಾಲಿವುಡ್ ಮಂದಿ ತಲೆಕೆಡಿಸಿಕೊಂಡಿದ್ದಾರೆ.

ವಿಜಯ್ ಕೃಷ್ಣ ಮೂವೀಸ್ ಬ್ಯಾನರ್‌ನಲ್ಲಿ ಸ್ವತಃ ನರೇಶ್ 'ಮಳ್ಳಿ ಪೆಳ್ಳಿ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪವಿತ್ರಾ ಲೋಕೇಶ್ ಕನ್ನಡ ಸಿನಿರಸಿಕರಿಗೂ ಪರಿಚಿತರಾಗಿರುವುದರಿಂದ ಚಿತ್ರವನ್ನು 2 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ತರಲಾಗುತ್ತಿದೆ. ಜಯಸುಧಾ, ಶರತ್ ಬಾಬು, ವಿನಿತಾ ವಿಜಯ್ ಕುಮಾರ್, ಅನನ್ಯಾ ನಗಲ್ಲ, ರೋಷನ್, ರವಿವರ್ಮಾ, ಅನ್ನಪೂರ್ಣ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದಲ್ಲಿದೆ.
ಸುರೇಶ್ ಬೊಬ್ಬಿಲಿ ಸಂಗೀತ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ. ಎನ್ ಬಾಲ್‌ರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ. ಸಮ್ಮರ್ ಸ್ಪೆಷಲ್ ಆಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಕೆಲ ದಿನಗಳ ಹಿಂದೆ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ, ಪವಿತ್ರಾ ಲೋಕೇಶ್ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಆಕೆಯಿಂದಲೇ ತಮ್ಮ ಸಂಸಾರದಲ್ಲಿ ಬಿರುಕು ಮೂಡಿತು ಎಂದು ಹೇಳಿದ್ದರು. ಆದರೆ ಪವಿತ್ರಾ, ನರೇಶ್ ನಾವಿಬ್ಬರು ಬರೀ ಫ್ರೆಂಡ್ಸ್ ಮಾತ್ರ ಎಂದು ಹೇಳಿದ್ದರು.
ಮೈಸೂರಿನ ಹೋಟೆಲ್ ಕೋಣೆವೊಂದರಲ್ಲಿ ನರೇಶ್- ಪವಿತ್ರಾ ರೆಡ್ ಹ್ಯಾಂಡಾಗಿ ರಮ್ಯಾ ಕೈಗೆ ಸಿಕ್ಕಿಬಿದ್ದಿದ್ದರು. ಅಂದು ಹೋಟೆಲ್‌ನಲ್ಲಿ ದೊಡ್ಡ ಹೈಡ್ರಾಮಾ ನಡೆದು ಹೋಗಿತ್ತು. ನಂತರ ನರೇಶ್, ರಮ್ಯಾ ಆರೋಪ ಪ್ರತ್ಯಾರೋಪಗಳು ಮುಂದುವರೆದಿತ್ತು. ಈಗಾಗಲೇ ನರೇಶ್, ರಮ್ಯಾ ರಘುಪತಿಯಿಂದ ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಗನ ಭವಿಷ್ಯದ ದೃಷ್ಟಿಯಿಂದ ನಾನು ಡಿವೋರ್ಸ್ ಕೊಡಲ್ಲ ಎಂದು ಆಕೆ ಹೇಳುತ್ತಾ ಬರ್ತಿದ್ದಾರೆ. ಲಿಪ್‌ಲಾಕ್, ಮದುವೆ ವಿಡಿಯೋಗಳ ಬಗ್ಗೆ ಪ್ರತಿಕ್ರಿಯಿಸಿದ್ದ ರಮ್ಯಾ ಇದೆಲ್ಲಾ ಸಿನಿಮಾ ಪಬ್ಲಿಸಿಟಿ ಗಿಮಿಕ್ ಎನಿಸುತ್ತಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು.


Click it and Unblock the Notifications











