For Quick Alerts
  ALLOW NOTIFICATIONS  
  For Daily Alerts

  ರಾಖಿ ಕಟ್ಟಿಯಾದರೂ ಪವಿತ್ರಾ ಅನ್ನು ಮನೆಯಲ್ಲೇ ಇರಿಸಿಕೊಳ್ಳುವೆ: ಸವಾಲು ಹಾಕಿದ ನರೇಶ್!?

  |

  ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗಿನ ನಟ ನರೇಶ್ ಮದುವೆ ವಿಚಾರ ಚಿತ್ರ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ.

  ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಈಗಾಗಲೇ ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ನಟ ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇಧನ ನೀಡದೆಯೇ ಪವಿತ್ರಾ ಲೋಕೇಶ್ ಅನ್ನು ವಿವಾಹವಾಗಿದ್ದಾರೆ ಎನ್ನಲಾಗಿದ್ದು, ವಿವಾದ ಬಳಿಕ ಈಗ ನರೇಶ್ ರಮ್ಯಾ ರಘುಪತಿ ಜೊತೆ ವಿಚ್ಛೇಧನಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ.

  ಪವಿತ್ರ ಲೋಕೇಶ್, ಸುಚೇಂದ್ರ ಪ್ರಸಾದ್ ನಡುವೆ ಆಗಿದಿದ್ದೇನು? ಯಾರು ಈ ನರೇಶ್!ಪವಿತ್ರ ಲೋಕೇಶ್, ಸುಚೇಂದ್ರ ಪ್ರಸಾದ್ ನಡುವೆ ಆಗಿದಿದ್ದೇನು? ಯಾರು ಈ ನರೇಶ್!

  ಕೋರ್ಟ್‌ನಲ್ಲಿ ಒಮ್ಮೆ ತನಗೆ ಹಿನ್ನಡೆ ಆದರೆ ಬಹಿರಂಗವಾಗಿ ಆಕೆಯಿಂದ (ಪವಿತ್ರಾ ಲೋಕೇಶ್) ರಾಖಿ ಕಟ್ಟಿಸಿಕೊಂಡು ಆಕೆಯನ್ನು ಮನೆಯಲ್ಲಿಯೇ ಇರಿಸಿಕೊಳ್ಳುತ್ತೇನೆ'' ಎಂದು ನರೇಶ್ ಸವಾಲು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  ಮಹಾಬಲೇಶ್ವರದಲ್ಲಿ ವಿವಾಹ!

  ಮಹಾಬಲೇಶ್ವರದಲ್ಲಿ ವಿವಾಹ!

  ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಒಟ್ಟಿಗೆ ಮಹಾಬಲೇಶ್ವರಕ್ಕೆ ತೆರಳಿದ್ದರು. ಅಲ್ಲಿ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಸ್ವಾಮೀಜಿಯ ಮುಂದೆಯೇ ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಸ್ತುತ ನರೇಶ್ ಆಗಲಿ ಪವಿತ್ರಾ ಲೋಕೇಶ್ ಆಗಲಿ ತಾವಿಬ್ಬರು ಮದುವೆ ಆಗಿರುವುದಾಗಿ ಒಪ್ಪಿಕೊಂಡಿಲ್ಲ. ನರೇಶ್‌ರ ಪಿಆರ್‌ ನವರು, ನರೇಶ್-ಪವಿತ್ರಾ ಇನ್ನೂ ಮದುವೆ ಆಗಿಲ್ಲವೆಂದೇ ಹೇಳುತ್ತಿದ್ದಾರೆ.

  ಮೂರು ಮದುವೆ ಆಗಿರುವ ನರೇಶ್!

  ಮೂರು ಮದುವೆ ಆಗಿರುವ ನರೇಶ್!

  ನರೇಶ್ ಈಗಾಗಲೇ ಮೂರು ಮದುವೆ ಆಗಿದ್ದು, ಈಗಿರುವ ನರೇಶ್‌ರ ಮೂರನೇ ಪತ್ನಿ ರಮ್ಯಾ ರಘುಪತಿ ಸಹ ಕರ್ನಾಟಕದವರೇ ಆಗಿದ್ದಾರೆ. ಇನ್ನು ನಟಿ ಪವಿತ್ರಾ ಲೋಕೇಶ್‌ ನರೇಶ್ ಅನ್ನು ವಿವಾಹವಾದರೆ ಇದು ಅವರಿಗೆ ಮೂರನೇ ಮದುವೆ ಆಗಲಿದೆ. ಪವಿತ್ರಾ ಲೋಕೇಶ್ ಹಾಗೂ ಕನ್ನಡದ ನಟ ಸುಚೇಂದ್ರ ಪ್ರಸಾದ್ 2007 ರಲ್ಲಿ ವಿವಾಹವಾದರು. ಆಗ ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು. ಇವರಿಬ್ಬರಿಗೂ ಇಬ್ಬರು ಮುದ್ದಾದ ಮಕ್ಕಳಿವೆ. ಆದರೆ ಬಹುದಿನಗಳಿಂದ ಈ ಇಬ್ಬರೂ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  ಮಹೇಶ್ ಬಾಬು ಅಣ್ಣ ನರೇಶ್

  ಮಹೇಶ್ ಬಾಬು ಅಣ್ಣ ನರೇಶ್

  ಪವಿತ್ರಾ ಲೋಕೇಶ್ ಜೊತೆ ಹೆಸರು ಕೇಳಿ ಬರುತ್ತಿರುವ ನರೇಶ್, ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು, ಅಣ್ಣನಾಗಿದ್ದಾರೆ. ಸೂಪರ್ ಸ್ಟಾರ್ ಕೃಷ್ಣರ ಮೊದಲ ಪತ್ನಿಯ ಮಗ ಮಹೇಶ್ ಬಾಬು. ಕೃಷ್ಣರ ಎರಡನೇ ಪತ್ನಿ ನಟಿ ವಿಜಯ್ ನಿರ್ಮಲಾರ ಮಗ ನರೇಶ್. ಆದರೆ ನರೇಶ್‌ರ ತಂದೆ ಸೂಪರ್ ಸ್ಟಾರ್ ಕೃಷ್ಣ ಅಲ್ಲ. ಕೃಷ್ಣ ಹಾಗೂ ವಿಜಯ್ ನಿರ್ಮಲಾ ಮದುವೆ ಆಗುವ ಮುಂಚೆಯೇ ನರೇಶ್ ಜನಿಸಿದ್ದರು. ನರೇಶ್ ತಂದೆಯ ಹೆಸರು ಕೆಎಸ್ ಮೂರ್ತಿ.

  ನರೇಶ್‌ನ ಮೂರನೇ ಪತ್ನಿಯೂ ಕನ್ನಡತಿಯೇ!

  ನರೇಶ್‌ನ ಮೂರನೇ ಪತ್ನಿಯೂ ಕನ್ನಡತಿಯೇ!

  ನರೇಶ್ ಈ ಹಿಂದೆ ತೆಲುಗು ಸಿನಿಮಾ ನಟರ ಸಂಘ ಮಾನ ಅಧ್ಯಕ್ಷರಾಗಿದ್ದರು. ವಾಚಾಳಿ ಪ್ರವೃತ್ತಿಯ ನರೇಶ್‌ ಬಹು ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಾ ಬಂದಿದ್ದಾರೆ. ಮಂಚು ಮೋಹನ್ ಬಾಬು ಕುಟುಂಬ ಹಾಗೂ ಬಾಲಕೃಷ್ಣ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನರೇಶ್‌ ಈಗ ವಿಚ್ಛೇಧನ ನೀಡಲು ಹೊರಟಿಸಿರುವ ಪತ್ನಿ ರಮ್ಯಾ ರಘುಪತಿ ಸಹ ಕನ್ನಡತಿಯೇ!

  English summary
  Actor Naresh married Pavithra Lokesh without giving divorce to his third wife. Naresh is not ready to break relation with Pavithra Lokesh.
  Thursday, June 23, 2022, 17:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X