"ಪವಿತ್ರಾಳಂತ ಸುಂದ್ರಿ ನನ್ನ ಬೆಡ್‌ರೂಮ್‌ನಲ್ಲಿ ಇರ್ಬೇಕು ಅನ್ನಿಸ್ಲಿಲ್ಲ.. ಪ್ರಪೋಸ್ ಮಾಡಿದ ದಿನ ಮೈ ನಡುಕ ಬಂದಿತ್ತು"

ನರೇಶ್ ಹಾಗೂ ಪವಿತ್ರಾ ಲೋಕೇಶ್ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಪ್ರೇಮಕಥೆಯನ್ನು ಸಿನಿಮಾ ಮಾಡಿ ತಾವಿಬ್ಬರು ನಟಿಸ್ತಿದ್ದಾರೆ. ಈ ವಾರವೇ 'ಮಳ್ಳಿ ಪೆಳ್ಳಿ' ಸಿನಿಮಾ ರಿಲೀಸ್ ಆಗ್ತಿದೆ. ಸಿನಿಮಾ ಪ್ರಮೋಷನ್ ವೇಳೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದೀಗ ತಮ್ಮ ಲವ್ ಸ್ಟೋರಿ ಹೇಗೆ ಶುರುವಾಯಿತು ಎಂದು ಹೇಳಿದ್ದಾರೆ.

ನರೇಶ್ ಇಬ್ಬರಿಗೆ ಡಿವೋರ್ಸ್ ಕೊಟ್ಟು 3ನೇ ಮದುವೆ ಆಗಿದ್ದಾರೆ. 3ನೇ ಪತ್ನಿ ರಮ್ಯಾ ರಘುಪತಿಯಿಂದಲೂ ದೂರಾಗಿ ಈಗ ಪವಿತ್ರಾ ಲೋಕೇಶ್‌ ಜೊತೆಗಿದ್ದಾರೆ. ಇತ್ತ ಪವಿತ್ರಾ ಲೋಕೇಶ್ ಕೂಡ ಇಬ್ಬರಿಂದ ದೂರಾಗಿ ನರೇಶ್ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಈ ವಯಸ್ಸಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದೇಗೆ ಎನ್ನುವ ಕಥೆಯನ್ನೇ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ಹೇಳ್ತಿದ್ದಾರೆ. ಜೊತೆಗೆ ರಮ್ಯಾರಘುಪತಿ ಅವರನ್ನು ಕೂಡ ಟಾರ್ಗೆಟ್ ಮಾಡಿರೋದು ಗೊತ್ತಾಗುತ್ತಿದೆ. ಚಿತ್ರದ ಅಸಲಿ ಕಥೆ ಇನ್ನೆರಡು ದಿನಗಳಲ್ಲಿ ಬಹಿರಂಗವಾಗಲಿದೆ.

Naresh opens up about his love story with Pavitra Lokesh and reveled who proposed first

ಹಲವು ವರ್ಷಗಳಿಂದ ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ವೇಳೆಯೇ ಇಬ್ಬರ ನಡುವೆ ಪರಿಚಯ, ಸ್ನೇಹ ಶುರುವಾಯಿತು. ನಂತರ ಅದು ಪ್ರೀತಿಯಾಗಿ ಬದಲಾಯಿತು. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಬಂದಮೇಲೆ ಒಂದಾದೆವು. ನಮ್ಮಿಬ್ಬರ ಹೃದಯಗಳ ಒಂದಾಗಿದೆ. ಅದು ಕೂಡ ಮದುವೆ ಅಲ್ಲವೇ ಎಂದಿದ್ದಾರೆ. ಇಬ್ಬರು ಮುಂದೆ ಮದುವೆ ಆಗುವುದಾಗಿಯೂ ತಿಳಿಸಿದ್ದಾರೆ.

ಪರಿಚಯ ಶುರುವಾಗಿದ್ದೇಗೆ?

ತೆಲುಗು ಸಂದರ್ಶನವೊಂದರಲ್ಲಿ ತಮ್ಮ ಲವ್‌ ಸ್ಟೋರಿಯನ್ನು ನರೇಶ್ ಸಂಪೂರ್ಣವಾಗಿ ಬಿಚ್ಚಿಟ್ಟಿದ್ದಾರೆ. " ಬಹಳ ವರ್ಷಗಳ ಹಿಂದೆ 'ಆಲಯಂ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿ ಭೇಟಿ ಆಗಿದ್ದಂತೆ. ಆ ಸಮಯದಲ್ಲಿ ಪವಿತ್ರ ನನ್ನೊಟ್ಟಿಗೆ ಮಾತನಾಡಲಿಲ್ಲ. ಈ ಹುಡುಗಿಗೆ ಅಹಂಕಾರ ಎಂದುಕೊಂಡು ಸುಮ್ಮನಾಗಿದ್ದೆ. ಆ ನಂತರ 10 ವರ್ಷಗಳ ನಂತರ 'ಹ್ಯಾಪಿ ವೆಡ್ಡಿಂಗ್‌' ಸಿನಿಮಾ ಚಿತ್ರೀಕರಣದ ಭೇಟಿ ಆಗಿದ್ದೆವು. ಆಗ ನನ್ನೊಟ್ಟಿಗೆ ಚೆನ್ನಾಗಿ ಮಾತನಾಡಿದರು. ನನ್ನ ಬಗ್ಗೆ ಸಾಕಷ್ಟು ವಿಚಾರ ತಿಳಿದುಕೊಂಡರು. ನನಗೆ ಆಶ್ಚರ್ಯವಾಯಿತು. ಆ ಸಮಯದಲ್ಲಿ ಹುಡುಗಿ ಚೆನ್ನಾಗಿದ್ದಾಳೆ. ಸುಂದರವಾಗಿ ಇದ್ದಾಳೆ. ಪಾಸಿಟಿವ್ ಎನರ್ಜಿ ಅನ್ನಿಸ್ತು. ಆ ನಂತರ ಮತ್ತೆ ಮಾತನಾಡಲಿಲ್ಲ. ಮತ್ತೆ 'ಸಮ್ಮೋಹನಂ' ಸಿನಿಮಾ ಚಿತ್ರೀಕರಣದಲ್ಲಿ ಭೇಟಿ.

Naresh opens up about his love story with Pavitra Lokesh and reveled who proposed first

ನಿನ್ನ ಸ್ಮೈಲ್ ಚೆನ್ನಾಗಿದೆ ಎಂದೆ

ಶೂಟಿಂಗ್‌ ಸಮಯದಲ್ಲಿಯೇ ಆಕೆ ಚಿಕ್ಕ ಫ್ಯಾನ್ ಹಿಡಿದು ಕೂತಿದ್ದಳು. ನಿನ್ನ ನಗು ಚೆನ್ನಾಗಿದೆ ಎಂದು ಓಪನ್ ಆಗಿ ಹೇಳಿದ್ದೆ. ಆಕೆ ತನ್ನ ಪರ್ಫ್ಯೂಮ್ ಹೆಸರು ಹೇಳಿದಳು. ಆದರೆ ನಾನು ಅದಲ್ಲ ನಿಮ್ಮ ಸ್ಮೈಲ್ ಚೆನ್ನಾಗಿದೆ ಎಂದು ಹೇಳಿದ್ದೆ. ಆ ನಂತರ ಇನ್ನೊಂದು ದಿನ ಕಿಚನ್‌ನಲ್ಲಿ ಶೂಟಿಂಗ್ ನಡೆಯುತ್ತಿರುವಾಗ ಆಕೆಯ ಒಳ್ಳೆತನ, ನಡವಡಿಕೆ ನೋಡಿ ಇಂತಹ ಹುಡುಗಿ ನನ್ನ ಅಡುಗೆ ಮನೆಯಲ್ಲಿ ಇದ್ದರೆ ಚೆನ್ನಾಗಿರುತ್ತದೆ ಎಂದುಕೊಂಡೆ. ಸಾಮಾನ್ಯವಾಗಿ ಅಂತಹ ಸುಂದರ ಹುಡುಗಿಯನ್ನು ನೋಡಿದರೆ ತನ್ನ ಬೆಡ್‌ರೂಮ್‌ನಲ್ಲಿ ಇದ್ದರೆ ಚೆನ್ನಾಗಿರುತ್ತದೆ ಎಂದು ಅನಿಸುತ್ತದೆ. ಆದರೆ ನನಗೆ ಮಾತ್ರ ಹಾಗೆ ಅನ್ನಿಸಲಿಲ್ಲ. ಅಡುಗೆ ಮನೆಯಲ್ಲಿದ್ದರೆ ಚೆಂದ ಎನಿಸಿತು.

ಆ ದಿನ ಕನೆಕ್ಟ್ ಆಗಿದ್ವಿ

"ಅದೇ ಸಮಯದಲ್ಲಿ ನಾನು ನನ್ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿದ್ದೆ. ಇಂತಹ ಹುಡುಗಿ ತನ್ನ ಮನೆಯಲ್ಲಿ ಇದ್ದರೆ ಚೆನ್ನಾಗಿರುತ್ತೆ ಎನ್ನುವ ಫೀಲಿಂಗ್‌ ಇತ್ತು. ಜೊತೆಗೆ ಆಕೆ ತುಂಬಾ ಚೆನ್ನಾಗಿ ಅಡುಗೆ ಮಾಡ್ತೀನಿ ಅಂತ ಕೂಡ ಹೇಳಿದ್ದಳು.ಆ ನಂತರ ಒಂದು ದಿನ ಒಂದು ಮೆಸೇಜ್‌ ಮಾಡಿದ್ದೆ. ರಿಪ್ಲೇ ಮಾಡಲಿಲ್ಲ. ಇದ್ಯಾಕೋ ಬಹಳ ವಿಚಿತ್ರ ಅನ್ನಿಸಿತು. ಮತ್ತೆ 6 ತಿಂಗಳ ಗ್ಯಾಪ್ ನಂತರ ಬೆಂಗಳೂರಿನಲ್ಲಿ ಭೇಟಿ ಆಗಿದ್ದೆವು. ಶೂಟಿಂಗ್‌ಗಾಗಿ ಬಂದಿದ್ದೇನೆ, ಭೇಟಿ ಆಗೋಣ ಅಂದರೆ ಓಕೆ ಅಂದಳು. ಆ ದಿನ ಕಾಫಿ ಶಾಪ್‌ನಲ್ಲಿ ಭೇಟಿ ಆಗಿದ್ವಿ. ಮಧ್ಯಾಹ್ನದಿಂದ ಸಂಜೆಯವರೆಗೆ ಮಾತನಾಡಿದ್ದೆವು. ಆ ದಿನ ಕನೆಕ್ಟ್ ಆದ್ವಿ"

ಡಿನ್ನರ್‌ ಹೋಗಿದ್ದಾಗ ಪ್ರಪೋಸ್

"ಮತ್ತೆ ಚಿತ್ರೀಕರಣದಲ್ಲಿ ಭೇಟಿ ಆಗಿದ್ದೆವು. ಆಗಲೇ ನನಗೆ ಲವ್‌ ಹುಟ್ಟಿತ್ತು, ಈಕೆ ಸರಿಯಾದ ಜೋಡಿ ಎನಿಸಿತು. ಡಿನ್ನರ್‌ಗೆ ಕರೆದುಕೊಂಡಿ ಹೋಗಿ ಊಟ ಮಾಡಿದ ಮೇಲೆ ನರೇಶ್ ಐ ಲವ್‌ ಯು ಹೇಳಿದ್ದರಂತೆ. ಆದರೆ ಪವಿತ್ರಾ ಪ್ರತಿಕ್ರಿಯೆ ನೀಡಲಿಲ್ಲವಂತೆ. ಇದರಿಂದ ನನಗೆ ನಡುಕ ಶುರುವಾಯಿತು. ಇರುವ ಫ್ರೆಂಡ್‌ಶಿಪ್‌ ಕೂಡ ಹೋಗುತ್ತೆ ಎನ್ನಿಸಿತ್ತು. ಕಾರು ಹತ್ತಿದ ಮೇಲೆ ಕೂಡ ಸೈಲೆಂಟ್ ಆಗಿ ಇದ್ದಳು. ಕಾರ್ ಇಳಿದು ಹೋಟೆಲ್‌ ಒಳಗೆ ಹೋಗುವಾಗ ಕೂಡ ಉತ್ತರ ಬರಲಿಲ್ಲ."

'ಕೀಪ್‌ ಲವಿಂಗ್‌ ಮೀ' ಎಂದಿದ್ದ ಪವಿತ್ರಾ

"ಕೊನೆಗೆ ನಾನೇ ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ ಎಂದು ಕೇಳಿದ್ದರು. ಆಕೆ ವಾಪಸ್ ಬಂದು 'ಕೀಪ್‌ ಲವಿಂಗ್‌ ಮೀ' ಎಂದು ಹೇಳಿ ಹೋದಳು. ನನಗೆ ಆ ಇಡೀ ದಿನ ನಿದ್ರೆ ಬರಲಿಲ್ಲ. ಆಕೆ ಹೇಳಿದ ಮಾತಿಗೆ ಅರ್ಥ ಏನು ಎನ್ನುವುದೇ ಗೊತ್ತಾಗಲಿಲ್ಲ. ಬೆಳಗ್ಗೆ ಮತ್ತೆ ಚಿತ್ರೀಕರಣಕ್ಕೆ ಬಂದರೆ ಏನು ಗೊತ್ತೇಯಿಲ್ಲ ಎನ್ನುವಂತೆ ಮಾತನಾಡಿದ್ದಳು. ಕೊನೆಗೆ ಇಂಗ್ಲೀಷ್‌ನಲ್ಲಿ ಒಂದು ಕವನ ಬರೆದೆ. ಅದನ್ನು ಕೇಳಿ ಕೋಪದಿಂದ ನೋಡಿದ್ದಳು."

ಹೊಸ ವರ್ಷ 'ಐ ಲವ್‌ ಯು'

ಕೊನೆಗೆ ಅದೇ ದಿನ ಸೆಟ್‌ನಲ್ಲಿ ಇಂದ್ರಗಂಟಿ ಮೋಹನಕೃಷ್ಣ ಉಪಸ್ಥಿತಿಯಲ್ಲಿ ಎಲ್ಲರೂ ಸೆಟ್‌ನಲ್ಲಿ ಇರುವಾಗ ಪವಿತ್ರಾ ಲೋಕೇಶ್ ಕೈ ಹಿಡಿದು ಕೇಳಿದೆ. ಆಗ ಕೂಡ ರಿಯಾಕ್ಟ್ ಮಾಡಲಿಲ್ಲ. ನಂತರ ಡಿಸೆಂಬರ್ 31ರಂದು ಹೊಸ ವರ್ಷದ ಶುಭಾಶಯ ಕೋರೋಣ ಅಂತ ಕೇಕ್, ಬೊಕ್ಕೆ ತೆಗೆದುಕೊಂಡು ಹೋಗಿದ್ದೆ. ಈಗಲಾದರೂ ಹೇಳು ಎಂದು ಕೇಳಿದ್ದಾಗ ಆಗ ಪವಿತ್ರಾ ಲೋಕೇಶ್ ತಮಗೆ 'ಐ ಲವ್‌ ಯು' ಹೇಳಿದ್ದಾಗಿ ನರೇಶ್ ವಿವರಿಸಿದ್ದಾರೆ.

More from Filmibeat

English summary
Naresh opens up about his love story with Pavitra Lokesh and reveled who proposed first. Malli Pelli film is scheduled to be theatrically released on 26th May 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X