Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಮದ್ವೆಗೂ ಮೊದ್ಲೆ ಪಲ್ಲಂಗ ಎಂದ ನರೇಶ್: ಆತ ಪೋರ್ನ್ ನೋಡುವುದನ್ನು ಮಗ ಬಂದು ಹೇಳಿದ್ದ": ರಮ್ಯಾ
ಹೊಸ ವರ್ಷದ ಸಂಭ್ರಮದಲ್ಲೇ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಲಿಪ್‌ಲಾಕ್ ವಿಡಿಯೋ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ತಿರುಗಿ ಬಿದ್ದಿದ್ದಾರೆ. ಡಿವೋರ್ಸ್ ಪಡೆಯದೇ ಅದು ಹೇಗೆ ಇಬ್ಬರು ಮದುವೆ ಆಗ್ತಾರೆ? ನಾನು ನೋಡ್ತೀನಿ ಎಂದು ಸವಾಲು ಹಾಕಿದ್ದಾರೆ.
'ಮಳ್ಳಿ ಪೆಳ್ಳಿ' ಸಿನಿಮಾ ಪ್ರಮೋಷನ್‌ಗಾಗಿ ನರೇಶ್ ಹಾಗೂ ಪವಿತ್ರಾ ಲಿಪ್‌ಲಾಕ್ ವಿಡಿಯೋ ಗಿಮಿಕ್ ಮಾಡಿದ್ರು ಎನ್ನಲಾಗ್ತಿದೆ. ಮತ್ತೊಂದು ಕಡೆ ರಮ್ಯಾ ರಘುಪತಿ ಸಾಲು ಸಾಲು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಪತಿ ನರೇಶ್ ಕರ್ಮಕಾಂಡ ಬಯಲು ಮಾಡುತ್ತಿದ್ದಾರೆ. ಪತೊಯ ವಿರುದ್ಧ್ ಸಾಕಷ್ಟು ಆರೋಪಗಳನ್ನು ಮಾಡ್ತಿದ್ದು, ಆಕೆಯ ಕಾಮೆಂಟ್ಸ್ ಸಖತ್ ವೈರಲ್ ಆಗ್ತಿದೆ. ನರೇಶ್ - ಪವಿತ್ರಾ ಲಿಪ್‌ಲಾಕ್ ವಿಡಿಯೋಗೆ ಆರಂಭದಲ್ಲಿ ರಮ್ಯಾ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ನಿಧಾನವಾಗಿ ನರೇಶ್ ಜನ್ಮ ಜಾಲಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನನಗೇನು ಅನ್ನಿಸಲಿಲ್ಲ. ಆತನ ಇಂತಹ ರಾಸಲೀಲೆ ಸಾಕಷ್ಟು ನೋಡಿದ್ದೀನಿ ಎನ್ನುತ್ತಿದ್ದಾರೆ.
ನರೇಶ್-ಪವಿತ್ರಾ
ಮದುವೆಯಾಗಲು
ಬಿಡೆನು:
ಗುಡುಗಿದ
ಮಾಜಿ
ಪತ್ನಿ
ರಮ್ಯಾ
ಸಂದರ್ಶನಗಳಲ್ಲಿ ನರೇಶ್ ನಿಜ ಸ್ವರೂಪ ಏನು ಗೊತ್ತಾ? ಎಂದು ಆರೋಪಗಳನ್ನು ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ನಟ ಅಂದರೆ ನರೇಶ್ ತಂದೆ ಕೃಷ್ಣ ನಿಧನರಾದಾಗ ನರೇಶ್ ನಡೆದುಕೊಂಡ ರೀತಿ ಹೇಗಿತ್ತು? ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದು. ಹೀಗೆ ಹಲವು ಸಂಗತಿಗಳ ಬಗ್ಗೆ ಮಾತನಾಡುತ್ತಿದ್ದಾರೆ.

21 ವರ್ಷ ವಯಸ್ಸಿನ ಅಂತರ
ತೆಲುಗು ಯೂಟ್ಯೂಬ್ ಸಂದರ್ಶನವೊಂದರಲ್ಲಿ ರಮ್ಯಾ ರಘುಪತಿ ಬ್ಲಾಸ್ಟ್ ಆಗಿದ್ದಾರೆ. ತಮ್ಮಿಬ್ಬರ ಮದುವೆ ನಡೆದಿದ್ದು ಹೇಗೆ? ಏನೆಲ್ಲಾ ಸುಳ್ಳು ಹೇಳಿ ನರೇಶ್ ಮದುವೆಗೆ ಒಪ್ಪಿಸಿದರು ಎಂದು ಹೇಳಿದ್ದಾರೆ. "ವಯಸ್ಸಿನ ವಿಚಾರದಲ್ಲೂ ನರೇಶ್ ನನ್ನ ಬಳಿ ಸುಳ್ಳು ಹೇಳಿದ್ದರು. ನಾನು ನಿನಗಿಂತ ಕೇವಲ 12 ವರ್ಷ ದೊಡ್ಡವನು, ಅದು ದೊಡ್ಡ ವಿಷಯವೇ ಅಲ್ಲ ಎಂದಿದ್ದರು. ಆದರೆ ಅಸಲಿಗೆ ನಮ್ಮಿಬ್ಬರ ನಡುವೆ 21 ವರ್ಷಗಳ ವ್ಯತ್ಯಾಸ ಇತ್ತು.

ಹಾಸಿಗೆ ಹಂಚಿಕೊಳ್ಳೋಣ ಎಂದ
"ಪೋಷಕರು ನಮ್ಮ ಮದುವೆಗೆ ಒಪ್ಪುವುದಿಲ್ಲ. ಓಡಿ ಹೋಗಿ ಮದುವೆ ಆಗೋಣ ಎಂದಿದ್ದರು. ಮದುವೆಗೂ ಮೊದಲೇ ಹಾಸಿಗೆ ಹಂಚಿಕೊಳ್ಳೋಣ ಎಂದು ಬಲವಂತ ಮಾಡುತ್ತಿದ್ದರು. ಕೆಲವೊಮ್ಮೆ ಮದುವೆ ಬೇಗ ಸಹಜೀವನ ನಡೆಸೋಣ ಎನ್ನುತ್ತಿದ್ದ. ಎಷ್ಟು ಹೇಳಿದರೂ ಮದುವೆಗೆ, ಆತನ ಜೊತೆಗೆ ಬಂಧಕ್ಕೆ ನಾನು ಕನ್ವಿನ್ಸ್ ಆಗಿರಲಿಲ್ಲ. ನೀನು ಇಲ್ಲದೇ ನಾನು ಬಹಳ ಮಿಸ್ ಆಗುತ್ತೇನೆ. ನೀನು ಮಡದಿಯಾಗಿ ಬರಬೇಕು ಎಂದು ಎಮೋಷನಲ್ ಬ್ಲಾಕ್‌ಮೇಲ್ ಮಾಡಿದ್ದ. ಅದನ್ನು ನಂಬಿ ಆತನನ್ನು ಮದುವೆ ಆಗಿದ್ದೆ" ಎಂದು ರಮ್ಯಾ ರಘುಪತಿ ವಿವರಿಸಿದ್ದಾರೆ.

ಮಗನ ಬಗ್ಗೆ ಗಮನ ಇರಲಿಲ್ಲ
ನರೇಶ್ ಬಿಹೇವಿಯರ್ ಬಗ್ಗೆಯೂ ರಮ್ಯಾ ರಘುಪತಿ ಮಾತನಾಡಿದ್ದಾರೆ. ಮಗನ ಬಗ್ಗೆ ಅವರಿಗೆ ಅಕ್ಕರೆ ಇರಲಿಲ್ಲ. ಮಗನ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. "ಅಸಹ್ಯಕರ ವಿಚಾರ ಏನು ಅಂದರೆ ನರೇಶ್ ಐಪ್ಯಾಡ್‌ನಲ್ಲಿ ಪೋರ್ನ್ ವಿಡಿಯೋ ನೋಡುವುದನ್ನು ಮಗ ನೋಡಿದ್ದಾನೆ.
ಐ ಪ್ಯಾಡ್‌ನಲ್ಲಿ ಅಪ್ಪ ಗಲೀಜು ಗಲೀಜು ಏನೋ ನೋಡುತ್ತಿದ್ದಾರೆ ಎಂದು ಮಗ ಬಂದು ಒಮ್ಮೆ ಹೇಳಿದ. ಅರೇ ಏನೋ ಗಲೀಜು ಎಂದು ಕೇಳಿದರೆ, ಅಯ್ಯೋ ಆ ಹೆಂಗಸರ ಮೈಮೇಲೆ ಬಟ್ಟೆ ಇರಲಿಲ್ಲ, ಏನೋ ಗಲೀಜು" ಎಂದು ಮಗ ಬಂದು ಹೇಳಿದ್ದ. ಅದನ್ನು ಕೇಳಿ ಶಾಕ್ ಆಗಿತ್ತು ಎಂದು ರಮ್ಯಾ ರಘುಪತಿ ಸಂದರ್ಶನದಲ್ಲಿ ಹೇಳಿದ್ದಾರೆ.

ಅಕ್ರಮ ಸಂಬಂಧಗಳನ್ನು ಕಟ್ಟಿದ
ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಆತನಿಗೆ ಪವಿತ್ರಾ ಲೋಕೇಶ್ ಪರಿಚಯ ಆದಮೇಲೆ ಕಿರುಕುಳ ಕೊಡಲು ಆರಂಭಿಸಿದ. ನನ್ನನ್ನು ಹೇಗಾದರೂ ಮಾಡಿ ಬಿಡಿಸಿಕೊಳ್ಳಬೇಕು ಎಂದುಕೊಂಡಿದ್ದ. ಅದಕ್ಕಾಗಿ ಅಕ್ರಮ ಸಂಬಂಧಗಳನ್ನು ಕಟ್ಟಿದ್ದ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದ. ಏನೇ ಆದರೂ ನರೇಶ್‌ಗೆ ಡಿವೋರ್ಸ್ ಕೊಡಲ್ಲ. ನನ್ನ ಮಗ ತಂದೆ ಬೇಕು ಎನ್ನುತ್ತಿದ್ದಾನೆ. ಅವನಿಗಾಗಿ ನಾನು ನರೇಶ್‌ನ ಬಿಡುವುದಿಲ್ಲ" ಎಂದಿದ್ದಾರೆ. ಆದರೆ ರಮ್ಯಾ ರಘುಪತಿ ಆರೋಪಗಳಿಗೆ ನಟ ನರೇಶ್ ಮೌನವಾಗಿದ್ದಾರೆ.