ಈ ಮಧುರ ಕ್ಷಣಗಳನ್ನು ಮರೆಯೋಕೆ ಸಾಧ್ಯವಿಲ್ಲ: ಫಿಲಿಫೈನ್ಸ್‌ನಲ್ಲಿ ನರೇಶ್-ಪವಿತ್ರಾ ಲೋಕೇಶ್ ಸಾಹಸ
ನರೇಶ್ ಹಾಗೂ ಪವಿತ್ರಾ ಲೋಕೇಶ್ ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಾಗಿದ್ದರು. ನರೇಶ್ ಫ್ಯಾಮಿಲಿ ವಿಚಾರ ಬೀದಿಗೆ ಬಂದು ರಂಪಾ ರಾಮಾಯಣವಾಗಿತ್ತು. ಪವಿತ್ರಾ ಲೋಕೇಶ್ ನಮ್ಮ ದಾಂಪತ್ಯದಲ್ಲಿ ಹುಳಿ ಹಿಂಡಿದ್ದಾರೆ ಎಂದು ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು.
ನರೇಶ್, ಪವಿತ್ರಾ ವಿರುದ್ಧ ರಮ್ಯಾ ರಘುಪತಿ ಆರೋಪ, ಪ್ರತ್ಯಾರೋಪ ಭಾರೀ ಚರ್ಚೆ ಹುಟ್ಟಾಕ್ಕಿದ್ದು ಸುಳ್ಳಲ್ಲ. ಮೈಸೂರಿನಲ್ಲಿ ಖಾಸಗಿ ಹೋಟೆಲ್ ಕೋಣೆಯಲ್ಲಿ ನರೇಶ್- ಪವಿತ್ರಾ ರೆಡ್ ಹ್ಯಾಂಡ್ ಆಗಿ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದರು. ಹೋಟೆಲ್‌ನಲ್ಲಿ ನಡೆದ ಹೈಡ್ರಾಮಾ ಭಾರೀ ವೈರಲ್ ಆಗಿತ್ತು. ಬಳಿಕ ತಾವಿಬ್ಬರು ಸಹಜೀವನ ನಡೆಸುತ್ತಿರುವುದಾಗಿ ನರೇಶ್-ಪವಿತ್ರಾ ಘೋಷಿಸಿದ್ದರು.

ತಮ್ಮದೇ ನಿಜ ಜೀವನದ ಘಟನೆಗಳನ್ನು ಸೇರಿಸಿ ನರೇಶ್ 'ಮಳ್ಳಿ ಪೆಳ್ಳಿ' ಎನ್ನುವ ಸಿನಿಮಾ ನಿರ್ಮಿಸಿ ನಟಿಸಿದರು. ಪವಿತ್ರಾ ಲೋಕೇಶ್ ನಾಯಕಿಯಾಗಿ ನಟಿಸಿದ್ದರು. ತಮ್ಮ 3ನೇ ಪತ್ನಿ ರಮ್ಯಾ ರಘುಪತಿಯವರನ್ನು ಟಾರ್ಗೆಟ್ ಮಾಡಿ ನರೇಶ್ ಈ ಸಿನಿಮಾ ಮಾಡಿದ್ದು ಸ್ಪಷ್ಟವಾಗಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಹೀನಾಯವಾಗಿ ಸೋಲುಂಡಿತ್ತು. ಈ ಸಿನಿಮಾ ಪ್ರದರ್ಶನ ತಡೆಯಲು ರಮ್ಯಾ ರಘುಪತಿ ಎಷ್ಟೇ ಪ್ರಯತ್ನಿಸಿದರೂ ತಡೆಯಲು ಸಾಧ್ಯವಾಗಲಿಲ್ಲ.
ರಮ್ಯಾ ರಘುಪತಿಯಿಂದ ಡಿವೋರ್ಸ್ ಕೋರಿ ನರೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ರಮ್ಯಾ ಇದಕ್ಕೆ ಒಪ್ಪುತ್ತಿಲ್ಲ. ಇದೆಲ್ಲದರ ನಡುವೆ ಸಹ ಜೀವನ ನಡೆಸುತ್ತಿರುವ ನರೇಶ್- ಪವಿತ್ರಾ ಊರೂರು ಸುತ್ತಾಡುತ್ತಿದ್ದಾರೆ. ಸದ್ಯ ಜೋಡಿ ಫಿಲಿಫೈನ್ಸ್ ಪ್ರವಾಸ ಕೈಗೊಂಡಿದ್ದರು ಸಾಹಸ ಕ್ರೀಡೆಗಳನ್ನು ಆಡುತ್ತಾ ಇಬ್ಬರು ಎಂಜಾಯ್ ಮಾಡುತ್ತಿದ್ದಾರೆ.
"ಹೆಲಿಕಾಪ್ಟರ್ ಐಲ್ಯಾಂಡ್‌ನ ಅದ್ಭುತಗಳನ್ನು ನೋಡಿ ಖುಷಿಯಾಯಿತು. ಫಿಲಿಪ್ಪೀನ್ಸ್ ಸಮುದ್ರದಲ್ಲಿ ಪವಿತ್ರ ಜೊತೆಗೂಡಿ ಮಾಡಿದ ಸಾಹಸ ಯಾತ್ರೆಯಲ್ಲಿ ಆ ಸಮುದ್ರದಲ್ಲಿ ಹುದುಗಿರುವ ರತ್ನ ಸಿಕ್ಕಿತು. ಅದೇ ರೀತಿ ಎಲ್ ನಿಡೋ ಐಲ್ಯಾಂಡ್ ಸುತ್ತಾಡಿದೆವು. ಲಗೂನ್ ಬೀಚ್ ಸೌಂದರ್ಯದ ಹಿಂದಿರುವ ರಹಸ್ಯವನ್ನು ತಿಳಿದುಕೊಂಡಿದ್ದೇವೆ. ನಮ್ಮಿಬ್ಬರ ಪ್ರಯಾಣದಲ್ಲಿ ಹೆಚ್ಚಿನ ನೆನಪುಗಳನ್ನು ಶೇಖರಿಸಿದ್ದೇವೆ. ಈ ನೆನಪುಗಳಿಗೆ ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು ನರೇಶ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ನರೇಶ್ ತಮ್ಮಿಬ್ಬರ ಲವ್ ಸ್ಟೋರಿ ಹಂಚಿಕೊಂಡಿದ್ದರು. "ಬಹಳ ವರ್ಷಗಳ ಹಿಂದೆ 'ಆಲಯಂ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿ ಭೇಟಿ ಆಗಿದ್ದೆವು. ಆ ಸಮಯದಲ್ಲಿ ಆಕೆ ನನ್ನೊಟ್ಟಿಗೆ ಮಾತನಾಡಲಿಲ್ಲ. ಈ ಹುಡುಗಿಗೆ ಅಹಂಕಾರ ಎಂದುಕೊಂಡು ಸುಮ್ಮನಾಗಿದ್ದೆ. ಆ ನಂತರ 10 ವರ್ಷಗಳ ನಂತರ 'ಹ್ಯಾಪಿ ವೆಡ್ಡಿಂಗ್' ಸಿನಿಮಾ ಚಿತ್ರೀಕರಣದ ಭೇಟಿ ಆಗಿದ್ದೆವು. ಆಗ ನನ್ನೊಟ್ಟಿಗೆ ಚೆನ್ನಾಗಿ ಮಾತನಾಡಿದರು. ಮತ್ತೆ 'ಸಮ್ಮೋಹನಂ' ಸಿನಿಮಾ ಚಿತ್ರೀಕರಣದಲ್ಲಿ ಭೇಟಿ. ಆ ಸಮಯದಲ್ಲಿ ಆಕೆಯನ್ನು ನೋಡಿದಾಗ ಈಕೆ ನನ್ನ ಅಡುಗೆ ಮನೆಯಲ್ಲಿದ್ದರೆ ಚೆಂದ ಎನಿಸಿತು"
ಕೆಲ ದಿನಗಳ ಬಳಿಕ ಪವಿತ್ರಾ ಲೋಕೇಶ್ ಅವರನ್ನು ಡಿನ್ನರ್‌ಗೆ ಕರೆದುಕೊಂಡು ಹೋಗಿ ತಮ್ಮ ಪ್ರೀತಿಯನ್ನು ನರೇಶ್ ಹೇಳಿದ್ದರಂತೆ. ಆದರೆ ಪವಿತ್ರಾ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ನನಗೆ ನಡುಕ ಶುರುವಾಯಿತು. ಇರುವ ಫ್ರೆಂಡ್‌ಶಿಪ್ ಕೂಡ ಹೋಗುತ್ತೆ ಎನ್ನಿಸಿತ್ತು. ಕಾರು ಹತ್ತಿದ ಮೇಲೆ ಕೂಡ ಸೈಲೆಂಟ್ ಆಗಿ ಇದ್ದಳು. ಕಾರ್ ಇಳಿದು ಹೋಟೆಲ್ ಒಳಗೆ ಹೋಗುವಾಗ ಕೂಡ ಉತ್ತರ ಬರಲಿಲ್ಲ. ಕೊನೆಗೆ ನಾನೇ ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ ಎಂದು ಕೇಳಿದ್ದರು. ಆಕೆ ವಾಪಸ್ ಬಂದು 'ಕೀಪ್ ಲವಿಂಗ್ ಮೀ' ಎಂದು ಹೇಳಿ ಹೋದಳು. ಬಹಳ ದಿನಗಳ ಬಳಿಕ ಹೊಸ ವರ್ಷದ ದಿನ ಶುಭಾಶಯ ಕೋರಲು ಹೋದಾಗ ಪವಿತ್ರಾ 'ಐ ಲವ್ ಯು' ಹೇಳಿದ್ದಾಗಿ ನರೇಶ್ ಹೇಳಿಕೊಂಡಿದ್ದರು.


Click it and Unblock the Notifications











