"ನನ್ನ, ರಮ್ಯಾ ಡಿವೋರ್ಸ್ ಹಾದಿ ಸುಗಮ.. ಪವಿತ್ರಾ ಜೊತೆ ಪ್ರಶಾಂತವಾಗಿ ಜೀವಿಸಬಹುದು": ನರೇಶ್
ತೆಲುಗು ನಟ ನರೇಶ್ ಹಾಗೂ 3ನೇ ಪತ್ನಿ ರಮ್ಯಾ ರಘುಪತಿ ಕೌಟುಂಬಿಕ ಕಲಹ ಪದೇ ಪದೆ ಸುದ್ದಿ ಆಗುತ್ತಿದೆ. ಈಗಾಗಲೇ ನರೇಶ್ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ರಮ್ಯಾ ಇದಕ್ಕೆ ಒಪ್ಪುತ್ತಿಲ್ಲ. ಮತ್ತೊಂದು ಕಡೆ ನರೇಶ್, ನಟಿ ಪವಿತ್ರಾ ಲೋಕೇಶ್ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಇದೀಗ ರಮ್ಯಾಗೆ ಕೋರ್ಟ್ ಶಾಕ್ ನೀಡಿದೆ.
ನಿನ್ನೆಯಷ್ಟೆ(ಆಗಸ್ಟ್ 3) ಬೆಂಗಳೂರು ಕೋರ್ಟ್‌ನಲ್ಲಿ 2 ಪ್ರಕರಣಗಳಲ್ಲಿ ನರೇಶ್ ಕೈ ಮೇಲಾಗಿತ್ತು. ತಮ್ಮನ್ನು ಟಾರ್ಗೆಟ್ ಮಾಡಿ ನಿರ್ಮಿಸಿರುವ 'ಮಳ್ಳಿ ಪೆಳ್ಳಿ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ನಿಲ್ಲಿಸುವಂತೆ ರಮ್ಯಾ ರಘುಪತಿ ಪಿಟಿಷನ್ ದಾಖಲಿದ್ದರು. ಮತ್ತೊಂದು ಕಡೆ ನಮ್ಮ ಮನೆಗೆ ರಮ್ಯಾ ರಘುಪತಿ ಪದೇ ಪದೆ ಬರುವುದರಿಂದ ನಮ್ಮ ಕುಟುಂಬಸ್ಥರಿಗೆ ಅಕ್ಕಪಕ್ಕದ ಮನೆಯವರಿಗೆ ಸಮಸ್ಯೆ ಆಗಿದೆ ಎಂದು ನರೇಶ್ ಕೋರ್ಟ್ ಮೊರೆ ಹೋಗಿದ್ದರು.

'ಮಳ್ಳಿ ಪೆಳ್ಳಿ' ಕೇವಲ ಕಾಲ್ಪನಿಕ ಸಿನಿಮಾ ಎಂದು ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡಿದೆ. ಹಾಗಾಗಿ ಈ ಸಿನಿಮಾ ಪ್ರದರ್ಶನ ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. ನರೇಶ್ ವಿರುದ್ಧ ರಮ್ಯಾ ರಘುಪತಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ನರೇಶ್ ಮತ್ತು ಆತನ ಕುಟುಂಬಸ್ಥರು ರಮ್ಯಾ ವಿರುದ್ಧ ಗೃಹ ನಿಷೇಧ ಪಿಟಿಷನ್ ದಾಖಲಿಸಿದ್ದರು. ಇದರ ವಿಚಾರಣೆಯನ್ನು ನಡೆಸಿದ್ದ ಕೋರ್ಟ್ ನಾನಕ್‌ರಾಮ್‌ಗುಡದಲ್ಲಿರುವ ನರೇಶ್ ಮನೆಗೆ ರಮ್ಯಾ ರಘುಪತಿ ಹೋಗಬಾರದು ಎಂದು ಆದೇಶ ನೀಡಿದೆ.
ನರೇಶ್ ಪ್ರತಿಕ್ರಿಯೆ
2 ವಿಚಾರಗಳಲ್ಲಿ ತಮಗೆ ರಿಲೀಫ್ ಸಿಕ್ಕ ಬಗ್ಗೆ ನರೇಶ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. "ಅವಳು (ರಮ್ಯಾ) ಸಾಕಷ್ಟು ಸಾಲ ಮಾಡಿದ್ದಾಳೆ. ಸಾಲ ವಸೂಲಿ ಮಾಡುವವರು ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಕುಟುಂಬದವರಿಗೆ ಹಾಗೂ ನಮ್ಮ ಸುತ್ತಮುತ್ತಲಿನವರಿಗೆ ತೊಂದರೆ ಕೊಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗ ಮನೆ ಪ್ರವೇಶಿಸದಂತೆ ಸ್ಪಷ್ಟ ಆದೇಶ ನೀಡಿದೆ. ನಾನು ಕುಕಟ್‌ಪಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಚ್ಛೇದನ ಪ್ರಕರಣಕ್ಕೂ ಈ ಪ್ರಕರಣದ ತೀರ್ಪು ಉಪಯುಕ್ತವಾಗಲಿದೆ ಎಂದು ನಾನು ಭಾವಿಸುತ್ತೇನೆ.
ವಿಚ್ಛೇದನ ಹಾದಿ ಸುಗಮ
"ನಾನು ಆದಷ್ಟು ಬೇಗ ರಮ್ಯಾಗೆ ವಿಚ್ಛೇದನ ನೀಡಲು ಬಯಸುತ್ತೇನೆ. ಮುಂದೆ ಪವಿತ್ರಾ ಜೊತೆ ಶಾಂತಿಯುತ ಜೀವನ ನಡೆಸುವ ಅವಕಾಶ ಸಿಗುತ್ತದೆ ಎಂದು ಭಾವಿಸುತ್ತೇನೆ. ಈಗ ನ್ಯಾಯಾಲಯದ ತೀರ್ಪು ಅನುಕೂಲಕರವಾಗಿದ್ದರೂ ಈ ರಾದ್ದಾಂತದಿಂದ ನನ್ನ ಕುಟುಂಬಸ್ಥರು ಇನ್ನು ನೋವು ಅನುಭವಿಸುತ್ತಿದ್ದಾರೆ" ಎಂದು ನರೇಶ್ ಹೇಳಿದ್ದಾರೆ.

6 ವರ್ಷಗಳಿಂದ ದೂರಾಗಿದ್ದಾರೆ
ವಿಚ್ಛೇದನಕ್ಕೆ ಸಂಬಂಧಿಸಿದಂತೆ ಈಗಾಗಲೇ ಕುಕಟ್ ಪಲ್ಲಿ ನ್ಯಾಯಾಲಯದಲ್ಲಿ ನರೇಶ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಈಗ ನ್ಯಾಲಯ ನೀಡಿರುವ ತೀರ್ಪು ಇದಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ. ನರೇಶ್ 2023ರ ಆರಂಭದಲ್ಲಿ ಡಿವೋರ್ಸ್ ಕೋರಿ ಅರ್ನ್ನು ಸಲ್ಲಿಸಿದರು. "ನಾವಿಬ್ಬರು 6 ವರ್ಷಗಳಿಂದ ದೂರಾಗಿದ್ದೇವೆ ಎಂದು ಕೋರ್ಟ್ ಹೇಳಿದೆ. ಅರ್ಜಿದಾರರು (ನರೇಶ್ ಮತ್ತು ರಮ್ಯಾ) 6 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ ಎಂದು ಆದೇಶ ಪ್ರತಿಯಲ್ಲಿ ಹೇಳಲಾಗಿದೆ"
ನನ್ನ- ಪವಿತ್ರಾ ಪ್ರಶಾಂತ ಜೀವನ
"ನಾನು ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಜೀವನ ನಡೆಸುತ್ತಿರುವುದರ ಬಗ್ಗೆ ಕೆಲವರು ಮನಸ್ಸಿಗೆ ಬಂದಂತೆ ಮಾತಾನಾಡಿದರು. ನನ್ನ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಜನ ಊಹಾಪೋಹ ಹಬ್ಬಿಸಿದಾಗ ನಾನು ಎಂತಹ ನರಕ ಅನುಭವಿಸಿದೆ ಎನ್ನುವುದು ನನಗೆ ಗೊತ್ತು. ಇನ್ನಾದರೂ ನಾನು ಪ್ರಶಾಂತವಾದ ಜೀವನ ಸಾಗಿಸಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಈ ತೀರ್ಪಿನಿಂದ ರಿವೋರ್ಸ್ ಕೇಸ್ ಮುಂದಕ್ಕೆ ಕೊಂಡೊಯ್ಯಲು ಸಹಾಯವಾಗುತ್ತದೆ ಎಂದುಕೊಂಡಿದ್ದೇನೆ" ಎಂದು ನರೇಶ್ ವಿವರಿಸಿದ್ದಾರೆ.


Click it and Unblock the Notifications











