ಪವಿತ್ರಾ ಲೋಕೇಶ್ ಮೇಲೆ ಪ್ರೀತಿಯ ಅಮಲು ಹೆಚ್ಚಾದ್ರೆ ಏನಂತ ಕರೀತ್ತಾರೆ ನರೇಶ್?
ಟಾಲಿವುಡ್ ಅಂಗಳದಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಈ ಚಿತ್ರದಲ್ಲಿ ನರೇಶ್ ತಮ್ಮ ಹಾಗೂ ಪವಿತ್ರಾ ಲೋಕೇಶ್ ನಡುವಿನ ರಿಯಲ್ ಲೈಫ್ ಪ್ರೇಮ್ ಕಹಾನಿಯನ್ನು ತೆರೆಗೆ ತರುತ್ತಿದ್ದಾರೆ. ಮೇಲ್ನೋಟಕ್ಕೆ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರನ್ನು ಟಾರ್ಗೆಟ್ ಮಾಡಿ ಈ ಸಿನಿಮಾ ಮಾಡಿದ್ದಾರೆ. ಮೇ 26ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.
ನರೇಶ್- ಪವಿತ್ರಾ ಲೋಕೇಶ್ ಇಬ್ಬರೂ ಈಗ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಟ್ರೈಲರ್ ಲಾಂಚ್ ಮಾಡಿ ಗಮನ ಸೆಳೆದಿತ್ತು 'ಮಳ್ಳಿ ಪೆಳ್ಳಿ' ಚಿತ್ರತಂಡ. ಇನ್ನು ತೆಲುಗು ಕಿರುತೆರೆಯ 'ಸಿಕ್ಸ್ತ್ ಸೆನ್ಸ್' ಜೋಡಿ ಭಾಗಿ ಆಗಿದೆ. ಈ ವೇಳೆ ತಮ್ಮಿಬ್ಬರ ರಿಲೇಷನ್‌ಶಿಪ್ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಇಬ್ಬರು ಭಾಗಿ ಆಗಿದ್ದು ವೇದಿಕೆಯಲ್ಲೇ ಇಬ್ಬರು ಮುತ್ತಿನ ಮಳೆಗರೆದಿದ್ದಾರೆ. ಸದ್ಯ ಕಾರ್ಯಕ್ರಮದ ಪ್ರೋಮೊ ರಿಲೀಸ್ ಆಗಿ ವೈರಲ್ ಆಗಿದೆ.

ನಿರೂಪಕ ಓಂಕಾರ್ ನಿಮ್ಮಿಬ್ಬರ ರಿಲೇಷನ್‌ಶಿಪ್‌ನ ಸದ್ಯದ ಸ್ಟೇಟಸ್ ಏನು ಎನ್ನುವ ಪ್ರಶ್ನೆಗೆ "ಆಕಾಶ ಮೇಲೆ ಬಿದ್ರು ಭೂಮಿ ಬಾಯಿ ಬಿಟ್ರು ಒಟ್ಟಿಗಿರ್ತೀವಿ" ಎಂದು ನರೇಶ್ ಹೇಳಿದ್ದಾರೆ. ಅದೇ ರೀತಿ ನೀವು ಪ್ರೀತಿಯಿಂದ ಪವಿತ್ರಾ ಲೋಕೇಶ್ ಅವರನ್ನು ಏನೆಂದು ಕರೆಯುತ್ತೀರಾ ಎನ್ನುವ ಪ್ರಶ್ನೆಗೆ "ಮುದ್ದಾಗಿ ಅಮ್ಮುಲು ಎಂದು ಕರೆಯುತ್ತೇನೆ. ಪ್ರೀತಿ ಹೆಚ್ಚಾದರೆ ಅಮ್ಮು ಎಂದು ಕರೆಯುವುದಾಗಿ ನರೇಶ್ ಹೇಳಿದ್ದಾರೆ. ಅದಕ್ಕಿಂತ ಪ್ರೀತಿ ಹೆಚ್ಚಾದರೆ.. ಏನೆಂದು ಕರೀತಿನಿ ಅಂತ ಹೇಳೋದು ಬೇಡ ಬಿಡಿ" ಎಂದು ನಕ್ಕಿದ್ದಾರೆ. ಇದಕ್ಕೆ ಪವಿತ್ರಾ ನಾಚಿ ನೀರಾಗಿದ್ದಾರೆ.
ಎಂ. ಎಸ್ ರಾಜು 'ಮಳ್ಳಿ ಪೆಳ್ಳಿ' ಚಿತ್ರ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಮೈಸೂರಿನ ಹೋಟೆಲ್‌ನಲ್ಲಿ ನಡೆದ ಹೈಡ್ರಾಮಾವನ್ನು ರೀ ಕ್ರಿಯೇಟ್ ಮಾಡಲಾಗಿದೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ನಾವಿಬ್ಬರು ಬರೀ ಫ್ರೆಂಡ್ಸ್ ಎಂದು ಹೇಳಿದ್ದರು. ಆದರೆ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಇವಬ್ಬರ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಕೊನೆಗೆ ಮೈಸೂರಿನ ಹೋಟೆಲ್ ಕೋಣೆಯೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರೀ ಸುದ್ದಿ ಆಗಿತ್ತು.
ಇನ್ನು ಟ್ರೈಲರ್ ಲಾಂಚ್ ವೇದಿಕೆಯಲ್ಲಿ ನಿಮ್ಮಿಬ್ಬರಿಗೂ ಮದ್ವೆ ಆಗಿದ್ಯಾ? ಆಗುತ್ತಾ? ಯಾವಾಗ? ಎನ್ನುವ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ್ದ ನರೇಶ್ "ಕೆಲವರು ತಾಳಿ ಹಾಕಿಕೊಳ್ಳುತ್ತಾರೆ. ಮತ್ತೆ ಕೆಲವರು ಉಂಗುರ ಹಾಕಿ ಕೊಳ್ಳುತ್ತಾರೆ. ಇನ್ನೊಂದು ಮತದಲ್ಲಿ ಮತ್ತೊಂದು ರೀತಿ ಮದುವೆ ಆಗುತ್ತಾರೆ. ಮದುವೆ ಅಂದ್ರೆ ನಿಜವಾದ ಅರ್ಥ, ಎರಡು ಹೃದಯಗಳು ಒಂದಾಗುವುದು. ಮದುವೆ ಅಂದ್ರೆ ಹೃದಯಗಳು ಒಂದಾಗುವುದು ಎಂದಮೇಲೆ ನಾವು ಮದುವೆ ಆದಂತೆನಾ? ಆಗಿಲ್ಲಾ ಅಂತಾನಾ?" ಎಂದು ನರೇಶ್ ಮರುಪ್ರಶ್ನೆ ಹಾಕಿದ್ದರು..

ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾ ಮಾಡಿರುವುದಾಗಿ ನರೇಶ್ ಹೇಳಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸುರೇಶ್ ಬೊಬ್ಬಿಲಿ ಮ್ಯೂಸಿಕ್, ಎಂ.ಎನ್ ಬಾಲ್ ರೆಡ್ಡಿ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಜಯಸುಧಾ, ಶರತ್ ಬಾಬು, ವನಿತಾ ವಿಜಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.


Click it and Unblock the Notifications











