ಹೆಣ್ಣಿಗೆ ಹೆಣ್ಣೇ ಶತ್ರು ; 'ನಟಸಾರ್ವಭೌಮ' ನಟಿ ಅನುಪಮಾ ಪರಮೇಶ್ವರನ್‌ಗೆ 20 ವರ್ಷದ ಹುಡುಗಿಯಿಂದ ಕಿರುಕುಳ

ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗಾಗುತ್ತಿರುವ ಹಿಂಸೆಗಳು ಒಂದೆರಡಲ್ಲ. ಹೆಸರೇ ಗೊತ್ತಾಗದಂತೆ ಅದೆಲ್ಲಿಯೋ ಕುಳಿತುಕೊಂಡು ಅಶ್ಲೀಲವಾದ ಮೆಸೇಜ್‌ಗಳನ್ನು ಮಾಡುವ ಅನೇಕರು ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಕಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೊಫೈಲ್ ಫೋಟೊಗಳನ್ನೂ ಬೇರೆ ಯಾವದ್ದೋ ಖಾತೆಯಲ್ಲಿ ಹಂಚಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತು ಅನೇಕರು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ.

ಇನ್ನೂ ಈ ಸಾಮಾಜಿಕ ಜಾಲತಾಣದ ವೇದಿಕೆಯ ಮೂಲಕವೇ ಚಿತ್ರರಂಗದ ತಾರೆಯರು ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಜೊತೆಗೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಾಧನವನ್ನಾಗಿಯೂ ಕೂಡ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.

Natasaarvabhowma Actress Anupama Parameswaran Files Case Against 20-Year-Old Girl Morphed Images

ಆದರೆ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಸಾಕಷ್ಟು ಮಂದಿ ಒಂದು ಕಡೆಯಿಂದ ಚಿತ್ರರಂಗದಲ್ಲಿನ ಮಹಿಳೆಯರಿಗೆ, ನಟಿಯರಿಗೆ, ಲೈಂಗಿಕ ಶೋಷಣೆ, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಸ್ತ್ರೀಯರ ಬಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ. ಇದಕ್ಕೆ ಅನುಪಮಾ ಪರಮೇಶ್ವರನ್ ಅವರಿಗಾದ ಅನುಭವ ಮತ್ತೊಂದು ಉದಾಹರಣೆ.

ಹೌದು, ಅನುಪಮಾ ಪರಮೇಶ್ವರನ್.. ದಕ್ಷಿಣದ ಚಂದ್ರ ಚಕೋರಿ. ಕಳೆದೊಂದು ದಶಕದಲ್ಲಿ 25ಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಅನುಪಮಾ ಪರಮೇಶ್ವರನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ''ನಟಸಾರ್ವಭೌಮ'' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದವರು. ತನ್ನ ಮುದ್ದು ಮುದ್ದಾದ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದರು.

ಇಂಥಾ ಅನುಪಮಾ ಪರಮೇಶ್ವರನ್‌ ಅವರಿಗ 20 ವರ್ಷದ ಯುವತಿಯೊಬ್ಬಳು ಮಾನಸಿಕ ಕಿರುಕುಳ ನೀಡಿದ್ದಾಳೆ. ಅನುಪಮಾ ಅವರ ಫೋಟೊಗಳನ್ನು ಮಾರ್ಫ್‌ ಮಾಡಿ, ಅಸಹ್ಯ-ಅಶ್ಲೀಲವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನುಪಮಾ ಕುರಿತು ಸುಳ್ಳು ಮಾಹಿತಿಯನ್ನು ಕೂಡ ಹಬ್ಬಿಸಿದ್ದಾಳೆ. ಯುವತಿಯ ಈ ಕಿರುಕುಳದಿಂದ ಹೈರಾಣಾದ ಅನುಪಮಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ. ದೂರನ್ನು ಕೂಡ ದಾಖಲಿಸಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಅನುಪಮಾ ಪರಮೇಶ್ವರನ್, ನನ್ನ ಕುರಿತು ತಪ್ಪು ಮಾಹಿತಿಗಳನ್ನು, ಸುಳ್ಳು ವಿಷಯಗಳನ್ನು ಹರಡುವುದಲ್ಲದೇ ಮಾರ್ಫ್ ಮಾಡಿದ ನನ್ನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ವಿಚಾರ ಇತ್ತೀಚೆಗೆ ನನ್ನ ಗಮನಕ್ಕೆ ಬಂತು. ನನ್ನ ಸ್ನೇಹಿತರರಿಗೆ.. ನನ್ನ ಕುಟುಂಬದವರಿಗೆ.. ನನ್ನ ಸಹ ನಟರಿಗೆ ಈ ಪೋಸ್ಟ್‌ಗಳಲ್ಲಿ ಟ್ಯಾಗ್ ಮಾಡಲಾಗುತ್ತಿತ್ತು. ಈ ಉದ್ದೇಶ ಪೂರ್ವಕವಾದ ಕಿರುಕುಳದಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

Natasaarvabhowma Actress Anupama Parameswaran Files Case Against 20-Year-Old Girl Morphed Images

ಈ ಬಗ್ಗೆ ತನಿಖೆ ಮಾಡಿದಾಗ ನನ್ನ ಬಗ್ಗೆ ದ್ವೇಷ ಹರಡುವ ಏಕೈಕ ಉದ್ದೇಶದಿಂದ ಮತ್ತು ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಬೇಕೆಂದು ಒಬ್ಬರೇ ವ್ಯಕ್ತಿ ಹಲವು ಫೇಕ್ ಅಕೌಂಟ್ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ನನಗೆ ಗೊತ್ತಾಯ್ತು. ಹೀಗಾಗಿ ನಾನು ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ. ಈ ಕೃತ್ಯದ ಹಿಂದೆ ಇರುವ ವ್ಯಕ್ತಿ ಯಾರು ಎಂಬುದು ಪೊಲೀಸರ ಸಹಕಾರದಿಂದ ತಿಳಿಯಿತು ಎಂದು ಅನುಪಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಕೃತ್ಯ ಮಾಡಿರುವುದು ತಮಿಳುನಾಡಿನ 20 ವರ್ಷದ ಹುಡುಗಿ ಎನ್ನುವ ವಿಚಾರ ಗೊತ್ತಾದಾಗ ನನಗೆ ನಿಜಕ್ಕೂ ಆಶ್ಚರ್ಯವಾಯ್ತು. ಆಕೆಯ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು ನಾನು ಆಕೆಯ ಗುರುತನ್ನು ಇಲ್ಲಿ ಬಹಿರಂಗ ಮಾಡುತ್ತಿಲ್ಲ. ಯಾಕೆಂದರೆ, ಆಕೆಯ ಭವಿಷ್ಯ ಮತ್ತು ಮನಶಾಂತಿಗೆ ತೊಂದರೆ ಆಗಬಾರದು ಎನ್ನುವುದು ನನ್ನ ಉದ್ದೇಶ ಎಂದು ಅನುಪಮಾ ಪರಮೇಶ್ವರನ್ ಹೇಳಿದ್ದಾರೆ.

ಮುಂದುವರೆದು ಮೊಬೈಲ್ ಫೋನ್ ಮತ್ತು ಸೋಶಿಯಲ್ ಮೀಡಿಯಾ ಇದೆ ಎಂದ ಮಾತ್ರಕ್ಕೆ ಬೇರೆಯವರ ಘನತೆಗೆ ಧಕ್ಕೆ ತರುವ ಅಧಿಕಾರ ಯಾರಿಗೂ ಇಲ್ಲ. ಆನ್​​ಲೈನ್​​ನಲ್ಲಿ ಮಾಡುವ ಎಲ್ಲ ಕೆಲಸಕ್ಕೂ ಹೆಜ್ಜೆ ಗುರುತು ಇರುತ್ತದೆ. ಎಲ್ಲದಕ್ಕೂ ಉತ್ತರ ಕೊಡಬೇಕಾದ ಸಮಯ ಕೂಡ ಬರುತ್ತದೆ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆಕೆ ಈ ಕೃತ್ಯದ ಪರಿಣಾಮ ಎದುರಿಸುತ್ತಾಳೆ ಎಂದು ಹೇಳಿರುವ ಅನುಪಮಾ ಸೆಲೆಬ್ರೇಟಿ ಆದ ಮಾತ್ರಕ್ಕೆ ನಮ್ಮ ಮೂಲಭೂತ ಹಕ್ಕು ಮರೆಯಾಗಲ್ಲ. ಸೈಬರ್ ಅಪರಾಧಕ್ಕೆ ತಕ್ಕ ಶಿಕ್ಷೆಯಾಗುತ್ತೆ ಎಂದು ಹೇಳಿದ್ದಾರೆ.

ಸದ್ಯ ಹಲವಾರು ಜನ ಅನುಪಮಾ ಪರಮೇಶ್ವರನ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಹುಡುಗಿಯ ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿದ್ದಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದಕ್ಕೆ ಇದೇ ಒಂದು ನಿದರ್ಶನ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Shocking turn in Anupama Parameswaran's cyber harassment case: The actress reveals the perpetrator behind the morphed photos and malicious content is a 20-year-old girl. Find out what action the Natasaarvabhowma star is taking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X