National Film Awards 2023: ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಅಲ್ಲು ಅರ್ಜುನ್ ಅಲ್ಲ ಈ ನಟ!
ನಿನ್ನೆ ( ಆಗಸ್ಟ್ 24 ) 69ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2021ರಲ್ಲಿ ತೆರೆಗೆ ಬಂದ ಹಾಗೂ ಇದೇ ವರ್ಷದಲ್ಲಿ ಸೆನ್ಸಾರ್ ಆಗಿದ್ದ ಚಿತ್ರಗಳ ಪೈಕಿ ಅತ್ಯುತ್ತಮ ಚಿತ್ರಗಳನ್ನು ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಕಲಾವಿದರನ್ನು ಗುರುತಿಸಿ ವಿಭಿನ್ನ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.
ವಿವಿಧ ಭಾಷೆಯ ಹಲವಾರು ಸಿನಿಮಾಗಳು ಹಾಗೂ ಕಲಾವಿದರು ಈ ಬಾರಿ ಪ್ರಶಸ್ತಿಯನ್ನು ಗೆದ್ದು ಬೀಗಿವೆ. ನಟ ಅಲ್ಲು ಅರ್ಜುನ್ ಪುಷ್ಪ ದ ರೈಸ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರೆ, ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಕೃತಿ ಸೆನನ್ ಮಿಮಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.

ಹೀಗೆ ವಿವಿಧ ಕೆಟಗರಿಗಳಿಗೆ ರಾಷ್ಟ್ರ ಪ್ರಶಸ್ತಿಯನ್ನು ಸಂಪೂರ್ಣವಾಗಿ ಪ್ರಕಟಿಸಿದ ನಂತರ ಎಂದಿನಂತೆ ಈ ಬಾರಿಯೂ ಸಹ ಪರ ವಿರೋಧ ಚರ್ಚೆಗಳು ಆರಂಭಗೊಂಡಿವೆ. ಕೆಲವರು ರಾಷ್ಟ್ರ ಪ್ರಶಸ್ತಿಯನ್ನು ಈ ಬಾರಿ ಸರಿಯಾಗಿ ಪ್ರಕಟಿಸಿಲ್ಲ, ಅನರ್ಹರಿಗೆ ಪ್ರಶಸ್ತಿಯನ್ನು ನೀಡಿ ಅವರಿಗಿಂತ ಉತ್ತಮ ನಟನೆ ಮಾಡಿದ್ದ ಕಲಾವಿದರನ್ನು ಕಡೆಗಣಿಸಲಾಗಿದೆ ಎಂಬ ಟ್ರೋಲ್‌ಗಳು ಕಂಡು ಬರುತ್ತಿವೆ.
ಅದರಲ್ಲಿಯೂ ಪುಷ್ಪ ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದದ್ದರ ಕುರಿತು ಹಲವಾರು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಅಲ್ಲು ಅರ್ಜುನ್‌ಗಿಂತ ಉತ್ತಮವಾಗಿ ನಟಿಸಿದ ಹಲವಾರು ನಟರಿದ್ದರು, ಅವರಿಗೆ ಪ್ರಶಸ್ತಿ ನೀಡಬಹುದಿತ್ತು ಎಂಬ ಕೂಗು ಕೇಳಿಬರುತ್ತಿದೆ. ಒಂದೆಡೆ ಈ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಅಲ್ಲು ಅರ್ಜುನ್‌ಗೆ ಪ್ರಶಸ್ತಿ ಬಂದದ್ದನ್ನು ತೆಲುಗು ಸಿನಿ ರಸಿಕರು ಸಂಭ್ರಮಿಸುತ್ತಿದ್ದಾರೆ.
ಇನ್ನು ಕೆಲವರು ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಮೊದಲ ನಟ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಆದರೆ ಸತ್ಯಾಂಶ ಬೇರೆಯದ್ದೇ ಇದೆ. ಏಕೆಂದರೆ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಮೊದಲ ತೆಲುಗು ನಟ ಅಲ್ಲ. 1998ರಲ್ಲಿ ನಡೆದ ರಾಷ್ಟ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತೆಲುಗು ನಟ ನಾಗಾರ್ಜುನ 'ಅನ್ನಮಯ್ಯ' ಚಿತ್ರಕ್ಕಾಗಿ ಸ್ಪೆಷಲ್ ಮೆನ್ಷನ್ ಕೆಟಗರಿ ಅಡಿಯಲ್ಲಿ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಮೊದಲ ತೆಲುಗು ನಟ ಎನಿಸಿಕೊಂಡಿದ್ದರು. ಈ ಅಂಶ ತಿಳಿಯದ ಅನೇಕರು ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ.


Click it and Unblock the Notifications











