For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸಿನಿಮಾ ಮೂಲಕ ತೆಲುಗಿಗೆ ಕಾಲಿಡುತ್ತಿದ್ದಾರೆ ಬಾಲಿವುಡ್ ಸ್ಟಾರ್

  |

  ಬಾಲಿವುಡ್ ನಟರು ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಅಮಿತಾಬ್ ಬಚ್ಚನ್ ಇಂದ ಹಿಡಿದು ಹಲವು ಸ್ಟಾರ್ ನಟರು ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಸುತ್ತಲೂ ಇದ್ದಾರೆ. ಕೆಲವು ಸ್ಟಾರ್ ನಟ-ನಟಿಯರಂತೂ ದಕ್ಷಿಣ ಭಾರತದ ಸಿನಿಮಾಗಳಿಂದಲೇ ತಮ್ಮ ವೃತ್ತಿ ಆರಂಭಿಸಿದ್ದೂ ಇದೆ.

  ಇದೀಗ ಹಿಂದಿ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟರಾಗಿರುವ ನವಾಜುದ್ಧೀನ್ ಸಿದ್ಧಿಕಿ ಅವರನ್ನು ತೆಲುಗಿಗೆ ಕರೆತರಲಾಗುತ್ತಿದೆ. ಅದೂ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಮೂಲಕ.

  ಹೌದು, ನವಾಜುದ್ಧೀನ್ ಸಿದ್ಧಿಕಿ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾದಲ್ಲಿ. ಆ ಸಿನಿಮಾದ ಒಂದು ಪ್ರಮುಖ ಪಾತ್ರಕ್ಕೆ ನವಾಜುದ್ಧೀನ್ ಬಣ್ಣ ಹಚ್ಚಲಿದ್ದಾರೆ.

  ನವಾಜುದ್ಧೀನ್ ಈ ಹಿಂದೆ ತಮಿಳಿನ 'ಪೆಟ್ಟಾ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ರಜನೀಕಾಂತ್ ನಾಯಕ ನಟ. ಇದೀಗ ದಕ್ಷಿಣದ ಮತ್ತೊಬ್ಬ ಸ್ಟಾರ್ ನಟ ಚಿರಂಜೀವಿ ಅವರೊಟ್ಟಿಗೆ ಪಾತ್ರ ಮಾಡುತ್ತಿದ್ದಾರೆ ನವಾಜುದ್ಧೀನ್.

  ಚಿರಂಜೀವಿ ನಟಿಸಿದ್ದ ಈ ಹಿಂದಿನ ಸಿನಿಮಾ 'ಸೈರಾ ನರಸಿಂಹಾ ರೆಡ್ಡಿ'ಯಲ್ಲಿ ಹಿಂದಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಸಿನಿಮಾದಲ್ಲಿ ಸುದೀಪ್ ಸಹ ಮುಖ್ಯ ಪಾತ್ರದಲ್ಲಿದ್ದರು.

  KGF 2 ನ ಎಲ್ಲಾ ಭಾಷೆಯ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ | Filmibeat Kannada

  'ಆಚಾರ್ಯ' ಸಿನಿಮಾದಲ್ಲಿ ಹಲವು ಅತ್ಯುತ್ತಮ ನಟರು ಒಟ್ಟಿಗೆ ನಟಿಸುತ್ತಿದ್ದಾರೆ. ಚಿರಂಜೀವಿ, ರಾಮ್ ಚರಣ್ ತೇಜ, ಸೋನು ಸೂದ್, ಕಾಜಲ್, ಪೂಜಾ ಹೆಗ್ಡೆ ಇದೀಗ ನವಾಜುದ್ಧೀನ್ ಸಿದ್ಧಿಕಿ ಸಹ ಅವರಿಗೆ ಜೊತೆಯಾಗಿದ್ದಾರೆ.

  English summary
  Nawazuddin Siddiqui to act in Chiranjeevi's Acharya movie. This is his second south Indian movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X