ನಯನತಾರ ಹಾಗೂ ವಿಘ್ನೇಶ್ ಮದುವೆ ಆಮಂತ್ರಣ ಪತ್ರಿಕೆ ವೈರಲ್

ಟಾಲಿವುಡ್‌ ಸೂಪರ್ ಸ್ಟಾರ್ ನಯನತಾರ ಮದುವೆಯ ವಿಚಾರದ ಬಗ್ಗೆ ಕಳೆದ ಕೆಲ ವರ್ಷಗಳಿಂದ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ವಿಘ್ನೇಶ್ ಹಾಗೂ ನಯನತಾರ ಮದುವೆ ಯಾವಾಗ ಆಗುತ್ತೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.

ಟಾಲಿವುಡ್‌ನಲ್ಲಿ ಮದುವೆ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುವ ಜೋಡಿ ಅಂದರೆ, ಅದು ನಯನತಾರ ಹಾಗೂ ವಿಘ್ನೇಶ್ ಜೋಡಿ. ಈ ಜೋಡಿ ಕೂಡ ಆಗಾಗ ಹಲವು ವಿಚಾರಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿರ್ತಾರೆ. ಹೀಗಾಗಿ ಈ ಜೋಡಿ ಅಪ್‌ಡೇಟ್ ವಿಚಾರಗಳ ಬಗ್ಗೆ ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ.

ಸದ್ಯ ಈ ಮುದ್ದಾದ ಜೋಡಿಯ ಬಗ್ಗೆ ಅಪ್‌ಡೇಟ್ ಸುದ್ದಿಯೊಂದು ಸಿಕ್ಕಿದೆ. ಅದೆನಪ್ಪಾ ಅಂದರೆ, ಈ ಜೋಡಿ ಇನ್ನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ. ಇದಕ್ಕಾಗಿ ಸಕಲ ಸಿದ್ದತೆಯನ್ನು ಕೂಡ ಮಾಡಿಕೊಳ್ಳಲಾಗಿದೆ. ಜೂನ್ ಮೊದಲನೆ ವಾರದಲ್ಲಿ ಈ ಜೋಡಿ ಮದುವೆಯಾಗಲಿದೆ. ಈ ಕುರಿತಾಗಿ ಮದುವೆಯ ಆಮಂತ್ರಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು ಸಖತ್ ಯುನೀಕ್ ಅಂಡ್ ಟ್ರೆಂಡಿಯಾಗಿದೆ.

ನಯನ ಮತ್ತು ವಿಘ್ನೇಶ್ ವೆಡ್ಡಿಂಗ್ ಕಾರ್ಡ್ ವೈರಲ್

ನಯನ ಮತ್ತು ವಿಘ್ನೇಶ್ ವೆಡ್ಡಿಂಗ್ ಕಾರ್ಡ್ ವೈರಲ್

ಜೂನ್ 9 ರಂದು ನಯನತಾರ ಹಾಗೂ ವಿಘ್ನೇಶ್ ಶಿವನ್ ಮದುವೆ ನಿಗದಿಯಾಗಿದೆ. ಈ ಹಿನ್ನಲೆ ಈ ಮುದ್ದಾದ ಜೋಡಿಯ ಮದುವೆಯ ಆಮಂತ್ರಣವನ್ನು ಪ್ರಿಂಟ್ ಮಾಡಿಸಲಾಗಿದೆ. ವಿನುತೂನವಾಗಿ ಮಾಡಿರುವ ಈ ವೆಡ್ಡಿಂಗ್ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಹೇಗಿದೆ ನಯನ ಮತ್ತು ವಿಘ್ನೇಶ್ ವೆಡ್ಡಿಗ್ ಕಾರ್ಡ್

ಟಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡ್ತಿದ್ದ ಜೋಡಿ ಅಂದರೆ , ಅದು ನಯನತಾರ ಮತ್ತು ವಿಘ್ನೇಶ್ ಜೋಡಿ ಈ ಜೋಡಿ ಯಾವಾಗ ಮದುವೆಯಾಗುತ್ತಾರೆ ಎಂಬ ಚರ್ಚೆಗಳು ಕಳೆದ ಎರಡೂ ಮೂರು ವರ್ಷಗಳಲ್ಲಿ ಭಾರೀ ಸುದ್ದಿಯಾಗಿತ್ತು. ಕೊನೆಗೂ ಈ ಜೋಡಿ ಮದುವೆ ನಿಗದಿ ಆಗಿದೆ. ಸದ್ಯ ಈ ಮುದ್ದಾದ ಜೋಡಿ ವೆಡ್ಡಿಂಗ್ ಕಾರ್ಡ್ ಮಾಡಿಸಿದ್ದು, ಬಹಳ ವಿನೂತನವಾಗಿದೆ. ಪತ್ರಿಕೆಯಲ್ಲಿ ದಿನಾಂಕವನ್ನು ಸೇವ್ ಮಾಡಿಕೊಳ್ಳಿ ನಯನ ಮತ್ತು ವಿಕ್ಕಿ ಮದುವೆ ಇದೇ ಜೂನ್ 9 ರಂದು ನಡೆಯಲಿದೆ ಎಲ್ಲರೂ ಆಗಮಿಸಿ ಹಾರೈಸಿ ಎಂದು ಬರೆಯಲಾಗಿದೆ. ಹೂಗಳು ಕಾರ್ಡ್‌ ಮೇಲ ಸುರಿಯುತ್ತಿರುವಂತೆ ಗ್ರಾಫಿಕ್‌ ಸೆಟ್‌ ಮಾಡಿದ್ದು, ಅದ್ದೂರಿಯಾಗಿಯೇ ವೆಡ್ಡಿಂಗ್ ಕಾರ್ಡ್ ಮಾಡಿಸಲಾಗಿದೆ.

 ಕೊನೆಗೂ ನಯನಾಗೆ ಕಂಕಣ ಭಾಗ್ಯ ಕೂಡಿ ಬಂತು

ಕೊನೆಗೂ ನಯನಾಗೆ ಕಂಕಣ ಭಾಗ್ಯ ಕೂಡಿ ಬಂತು

ನಯನ ಹಾಗೂ ವಿಘ್ನೇಶ್ ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಆಗಾಗ ಇಬ್ಬರ ಪ್ರೀತಿಯ ಅಪ್‌ಡೇಟ್‌ಗಳನ್ನು ಅಭಿಮಾಗಳ ಜೊತೆ ಹಂಚಿಕೊಳ್ಳುತ್ತಿದ್ದರು. ಇಬ್ಬರು ಒಟ್ಟಿಗೆ ಡೇಟಿಂಗ್ ಮಾಡುತ್ತಾ, ಸಿನಿಮಾ ಮಾಡುತ್ತಾ ಲವ್ ಬರ್ಡ್ಸ್‌ ರೀತಿ ತಿರುಗಾಡುತ್ತಿದ್ದರು. ಸದ್ಯ ಈಗ ಈ ಜೋಡಿ ಕೊನೆಗೂ ಮದುವೆಯಾಗುತ್ತಿದ್ದು, ತಮ್ಮ ಪ್ರೀತಿಗೆ ಮದುವೆಯ ಮುದ್ರಣ ಒತ್ತಲು ಸಜ್ಜಾಗಿದ್ದಾರೆ. ನಯನತಾರಗೆ ಹಲವು ವರ್ಷಗಳಿಂದ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಅಲ್ಲದೆ ನಯನತಾರ ಬಗ್ಗೆ ಟಾಲಿವುಡ್‌ನಲ್ಲಿ ಸಾಕಷ್ಟು ಗಾಸಿಪ್‌ಗಳು ಓಡಾಡುತ್ತಿದ್ದವು. ಹಲವು ನಟರ ಜೊತೆ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಸದ್ಯ ಕೊನೆಗೂ ಈಗ ವಿಘ್ನೇಶ್ ಜೊತೆ ಮದುವೆಯಾಗುತ್ತಿದ್ದು, ನಯನತಾರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

 ಒಟ್ಟಿಗೆ ದೇವರ ದರ್ಶನ ಪಡೆಯುತ್ತಿರೋ ನಯನ-ವಿಘ್ನೇಶ್

ಒಟ್ಟಿಗೆ ದೇವರ ದರ್ಶನ ಪಡೆಯುತ್ತಿರೋ ನಯನ-ವಿಘ್ನೇಶ್

ಈ ಮುದ್ದಾದ ಜೋಡಿ ತಮ್ಮ ಮದುವೆ ವಿಚಾರ ಟಾಲಿವುಡ್‌ನಲ್ಲಿ ಹರಿದಾಡಲು ಶುರುವಾದ ಬೆನ್ನಲ್ಲೇ. ಇದಕ್ಕೆ ಪುಷ್ಟಿ ನೀಡಯವಂತೆ ಇಬ್ಬರು ಒಟ್ಟಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ಈ ಜೋಡಿ ಶಿರಡಿಯಲ್ಲಿ ಕಾಣಿಸಿಕೊಂಡು ಸಾಯುಬಾಬಾ ದರ್ಶನ ಪಡೆದುಕೊಂಡಿದ್ದರು. ಇದಾದ ಬಳಿಕ ತಿರುಪತಿ ತಿಮ್ಮಪ್ಪನ ದರ್ಶನವನ್ನು ಕೂಡ ಪಡೆದುಕೊಂಡಿದ್ದರು. ಅಲ್ಲದೆ ತಿಮ್ಮಪ್ಪನ ಗುಡಿಯಲ್ಲಿ ಒಟ್ಟಿಗೆ ಪೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಒಟ್ಟಿನಲ್ಲಿ ಈ ಜೋಡಿ ತಮ್ಮ ಜೀವನದ ಹೊಸ ಅಧ್ಯಾಯ ಶುರು ಮಾಡಲು ದೇವರ ಆರ್ಶಿವಾದದ ಮೊರೆ ಹೋಗಿದ್ದಾರೆ.

More from Filmibeat

English summary
Nayanthara and Vignesh Wedding Card Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X