ಮತ್ತೆ ಐಟಂ ಸಾಂಗ್‌ಗೆ ಬಿಂದಾಸ್ ಡ್ಯಾನ್ಸ್ ಮಾಡಲು ಸೈ ಎಂದ ನಯನತಾರ
ಸ್ಟಾರ್ ನಟಿಯರು ಸ್ಪೆಷಲ್ ಸಾಂಗ್‌ಗೆ ಕುಣಿಯುವುದು ಹೊಸದೇನು ಅಲ್ಲ. ಬಾಲಿವುಡ್‌ನಲ್ಲಿ ಶುರುವಾದ ಈ ಟ್ರೆಂಡ್ ಸೌತ್ ಸಿನಿದುನಿಯಾಗೆ ಬಂದು ಬಹಳ ವರ್ಷಗಳಾಯಿತು. ಇತ್ತೀಚೆಗೆ ತಮನ್ನಾ ಹೆಚ್ಚು ಹೆಚ್ಚು ಐಟಂ ಸಾಂಗ್‌ಗಳಿಗೆ ಕುಣಿಯುತ್ತಿದ್ದಾರೆ. 'ಪುಷ್ಪ'-2 ಚಿತ್ರದಲ್ಲಿ ಶ್ರೀಲೀಲಾ 'ಕಿಸ್ಸಿಕ್' ಎಂದು ಕುಣಿದಿದ್ದು ಗೊತ್ತೇಯಿದೆ.
ಲೇಡಿ ಸೂಪರ್ ಸ್ಟಾರ್ ನಯನತಾರ ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಸ್ಪೆಷಲ್ ಸಾಂಗ್‌ಗಳಿಗೆ ಕುಣಿದರು. ಬಳಿಕ ನಾಯಕಿಯಾಗಿ ಸಕ್ಸಸ್ ಕಂಡ ಬಳಿಕ ಅದಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಿಂದಾಸ್ ಆಗಿ ಕುಣಿಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅಂದು ನಾಯಕಿಯಾಗಿ ಕುಣಿದಿದ್ದ ನಟನ ಜೊತೆಗೆ ಈ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ.

ಮದುವೆ ಬಳಿಕ ಕೂಡ ನಯನತಾರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ಗೂ ಅಡಿ ಇಟ್ಟಿದ್ದಾರೆ. ಸಾರೋಗಸಿ ಪದ್ಧತಿಯಲ್ಲಿ ವಿಘ್ನೇಶ್-ನಯನ್ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಪೋಷಣೆ ಜೊತೆ ಜೊತೆಗೆ ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಮದುವೆ ಬಳಿಕ ಇದೀಗ ಡ್ಯಾನ್ಸಿಂಗ್ ನಂಬರ್‌ಗೆ ಕುಣಿಯಲು ಒಪ್ಪಿದ್ದಾರೆ ಎನ್ನಲಾಗ್ತಿದೆ.
ಕಥೆಗೆ ಬೇಕೋ ಬೇಡವೋ ಕಮರ್ಷಿಯಲ್ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಬೇಕು ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಇದೀಗ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಹೆಜ್ಜೆ ಹಾಕುವ ಸುದ್ದಿ ಬಂದಿದೆ. ಮಾರುತಿ ನಿರ್ದೇಶನದ ಈ ಕಾಮಿಡಿ ಹಾರರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ 'ದಿ ರಾಜಾ ಸಾಬ್' ಚಿತ್ರಕ್ಕೆ ಹಣ ಹೂಡಿದೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಮಾಡುತ್ತಾ ಬರ್ತಿದೆ ಚಿತ್ರತಂಡ. ಚಿತ್ರದಲ್ಲಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಪ್ರಭಾಸ್ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ರಿಲೀಸ್ ಆಗಿ ಗಮನ ಸೆಳೆದಿದೆ. ಚಿತ್ರಕ್ಕೆ ಎಸ್. ತಮನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
'ದಿ ರಾಜಾ ಸಾಬ್' ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ ಮೋಹನನ್ ಹಾಗೂ ನಿಧಿ ಅಗರ್ವಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರಿದ್ದಿ ಕುಮಾರ್, ಸಂಜಯ್ ದತ್, ಮುರಳಿ ಶರ್ಮಾ, ಬ್ರಹ್ಮಾನಂದಂ, ಯೋಗಿ ಬಾಬು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇದೀಗ ಲೇಡಿ ಸೂಪರ್ ಸ್ಟಾರ್ ಸಹ ತಂಡ ಸೇರಿಕೊಳ್ಳುತ್ತಿದ್ದಾರೆ.
ಇದಕ್ಕೂ ಮುನ್ನ 'ಗಜಿನಿ' ಹಾಗೂ 'ಶಿವಾಜಿ' ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗಳಿಗೆ ನಯನತಾರ ಹೆಜ್ಜೆ ಹಾಕಿದ್ದರು. ಅಂದಹಾಗೆ ಪ್ರಭಾಸ್ ಜೊತೆ 'ಯೋಗಿ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಕನ್ನಡದ 'ಜೋಗಿ' ಚಿತ್ರದ ರೀಮೆಕ್ ಆಗಿದ್ದ ಆ ಚಿತ್ರ ತೆಲುಗಿನಲ್ಲಿ ಗೆಲ್ಲಲಿಲ್ಲ. ಇದೀಗ ಅದೇ ಪ್ರಭಾಸ್ ನಟನೆಯ ಚಿತ್ರದಲ್ಲಿ ಐಟಂ ಸಾಂಗ್‌ಗೆ ಕುಣಿಯುತ್ತಿದ್ದಾರೆ.
ಸದ್ಯ ನಟ ಪ್ರಭಾಸ್ ಕಾಲಿಗೆ ಪೆಟ್ಟಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ಸ್ಪೆಷಲ್ ಸಾಂಗ್ ಚಿತ್ರೀಕರಣ ನಡೆಯಲಿದೆ. ಇನ್ನು ಇದು ಮೈಮಾಟ ಪ್ರದರ್ಶನದ ಸಾಂಗ್ ಅಲ್ಲ, ಬದಲಿಗೆ ಒಂದು ಡ್ಯಾನ್ಸಿಂಗ್ ನಂಬರ್. ಅದೇ ಕಾರಣಕ್ಕೆ ನಯನ್ ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದ್ಧೂರಿ ಸೆಟ್ ಹಾಕಿ ಸಾಂಗ್ ಶೂಟ್ ಮಾಡುವ ತಯಾರಿ ಶುರುವಾಗಿದೆ. ಒಂದು ಹಾಡಿಗೆ ಹೆಜ್ಜೆ ಹಾಕಲು ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.
ಇತ್ತೀಚೆಗೆ ನಯನತಾರ ಡಾಕ್ಯುಮೆಂಟರಿ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿ ಸದ್ದು ಮಾಡಿತ್ತು. ಇನ್ನುಳಿದಂತೆ ಐದಾರು ಸಿನಿಮಾಗಳಲ್ಲಿ ನಯನ್ ಬಣ್ಣ ಹಚ್ಚಿದ್ದಾರೆ. ಕನ್ನಡದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರ ಮಾಡುತ್ತಿದ್ದಾರೆ.


Click it and Unblock the Notifications











