For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಆಯ್ತು ಮತ್ತೋರ್ವ ಸ್ಟಾರ್ ನಟನ ಸಿನಿಮಾದಲ್ಲಿ ನಯನತಾರಾ

  |

  ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ನಯನತಾರಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಸದ್ದು ಮಾಡುತ್ತಿದ್ದೆ.

  ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್‌ಗೆ ನಾಯಕಿಯಾಗುವ ಮೂಲಕ ನಯನತಾರಾ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಮೊದಲ ಬಾರಿಗೆ ಶಾರುಖ್ ಖಾನ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದು, ಅಟ್ಲೀ ಮತ್ತು ಶಾರುಖ್ ಸಿನಿಮಾಗೆ ನಯನತಾರಾ ನಾಯಕಿ ಎನ್ನುವ ಮಾತು ಕೇಳಿಬರುತ್ತಿದೆ.

  ಶಾರುಖ್-ಅಟ್ಲೀ ಸಿನಿಮಾಗೆ ನಾಯಕಿಯಾಗ್ತಾರಾ ದಕ್ಷಿಣದ ಈ ಸ್ಟಾರ್ ನಟಿ?ಶಾರುಖ್-ಅಟ್ಲೀ ಸಿನಿಮಾಗೆ ನಾಯಕಿಯಾಗ್ತಾರಾ ದಕ್ಷಿಣದ ಈ ಸ್ಟಾರ್ ನಟಿ?

  ಈ ಸುದ್ದಿ ಬೆನ್ನಲ್ಲೇ ಈಗ ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ದಕ್ಷಿಣ ಭಾರತದ ಸ್ಟಾರ್ ನಟನ ಸಿನಿಮಾಗೂ ನಯನತಾರಾ ನಾಯಕಿ ಎನ್ನಲಾಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ ಲೂಸಿಫರ್ ತೆಲುಗು ರಿಮೇಕ್ ನಲ್ಲಿ ನಯನತಾರಾ ಮೆಗಾಸ್ಟಾರ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ನಿರ್ದೇಶಕ ಮೋಹನ್ ರಾಜ ಲೂಸಿಫರ್ ರಿಮೇಕ್‌ನಲ್ಲಿ ಭಾರಿ ಬದಲಾವಣೆ ಮಾಡಿದ್ದಾರಂತೆ. ರಿಮೇಕ್ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ತಂದಿರುವ ಮೋಹನ್ ರಾಜ ಫ್ಲ್ಯಾಷ್ ಬ್ಯಾಕ್ ಕಥೆಯನ್ನು ಸೇರಿಸಿದ್ದಾರಂತೆ. ಅಲ್ಲಿ ಚಿರಂಜೀವಿ ಜೊತೆ ಅವರ ರೊಮ್ಯಾಂಟಿಕ್ ದೃಶ್ಯಗಳನ್ನು ಸೇರಿಸಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುವ ಹಾಗೆ ಕಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಪೊಲಿಟಿಕಲ್ ಥ್ರಿಲ್ಲರ್ ಜೊತೆಗೆ ಲವ್ ಆಂಗಲ್ ಟಚ್ ನೀಡಿದ್ದಾರೆ ಮೋಹನ್ ರಾಜ.

  ಫ್ಲ್ಯಾಷ್ ಬ್ಯಾಕ್‌ನಲ್ಲಿ ಬರುವ ನಯನತಾರಾ ಪಾತ್ರದ ಮಹತ್ವ ಹೆಚ್ಚಿಸಲಾಗಿದೆಯಂತೆ. ಇನ್ನು ಏನೆಲ್ಲ ಬದಲಾವಣೆ ಮಾಡಲಾಗಿದೆ ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಅಂದಹಾಗೆ ಚಿರಂಜೀವಿ ಎರಡನೇ ಬಾರಿ ನಯನತಾರಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಮೊದಲು ಸೈರಾ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಲೂಸಿಫರ್ ರಿಮೇಕ್ ಮೂಲಕ ಮತ್ತೆ ಒಟ್ಟಿಗೆ ಎಂಟ್ರಿ ಕೊಡ್ತಿರೋದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ನಯನತಾರ ಮದುವೆ ವಿಳಂಬಕ್ಕೆ ಕಾರಣ ಕೊಟ್ಟ ಬಾಯ್ ಫ್ರೆಂಡ್ | Filmibeat Kannada

  ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟಿ ನಯನತಾರಾ ಲೂಸಿಫರ್ ರಿಮೇಕ್‌ನಲ್ಲಿ ನಟಿಸಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಸಿ ಆಗಸ್ಟ್ ನಿಂದ ಲೂಸಿಫರ್ ರಿಮೇಕ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಇನ್ನು ನಯನತಾರಾ ಶಾರುಖ್ ಜೊತೆ ನಟಿಸುವ ಮೊದಲೇ ಚಿರಂಜೀವಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  English summary
  Actress Nayanatara to romance Megha star Chiranjeevi in Mohan Raja's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X