NBK 110: ಬಾಲಯ್ಯನ ಹೊಸ ಸಿನಿಮಾ ಪೋಸ್ಟರ್ ಲೀಕ್ ಆಯ್ತಾ? ಅಸಲಿ ಮ್ಯಾಟರ್ ಏನು?
ನಂದಮೂರಿ ಬಾಲಕೃಷ್ಣ ಸಿಕ್ಕಾಪಟ್ಟೆ ಸ್ಪೀಡ್‌ನಲ್ಲಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಟಾಲಿವುಡ್ 'ಲೆಜೆಂಡ್' ಲಕ್ 'ಅಖಂಡ' ಸಿನಿಮಾದಿಂದ ಬದಲಾಗಿತ್ತು. ಈ ಸಿನಿಮಾ ಗೆಲ್ಲುತ್ತಿದ್ದಂತೆ ಬಾಲಯ್ಯನ ವೇಗವನ್ನು ತಗ್ಗಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ.
ಇತ್ತೀಚೆಗೆ ದಸರಾ ಹಬ್ಬದ ಸಂಭ್ರಮದಲ್ಲಿ 'ಭಗವಂತ್ ಕೇಸರಿ' ರಿಲೀಸ್ ಆಗಿತ್ತು. ಈ ಸಿನಿಮಾದ ಖದರ್ ಇನ್ನು ಮುಗಿಯುವುದಕ್ಕೆ ಮುನ್ನವೇ ಬಾಲಯ್ಯನ ಹೊಸ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಬಾಲಯ್ಯನ 110ನೇ ಸಿನಿಮಾ ಅಂತಾನೂ ಹೇಳಲಾಗುತ್ತಿದೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಾಲಯ್ಯನ 110ನೇ ಸಿನಿಮಾದ ಪೋಸ್ಟರ್ ಬೇಜಾನ್ ಸದ್ದು ಮಾಡುತ್ತಿದೆ. ಕೆಲವರು ಬಾಲಯ್ಯನ 110ನೇ ಸಿನಿಮಾದ ಪೋಸ್ಟರ್ ಲೀಕ್ ಆಗಿದೆ ಅಂತನೂ ಸುದ್ದಿ ಹಬ್ಬಿಸುತ್ತಿದ್ದಾರೆ. ಅಂದ್ಹಾಗೆ ಇದು ಬಾಲಯ್ಯನ 110ನೇ ಸಿನಿಮಾದ ಅಸಲಿ ಪೋಸ್ಟರೇನಾ? ಇಲ್ಲ ಅಭಿಮಾನಿಗಳೇ ನಕಲು ಮಾಡಿ ಲೀಕ್ ಮಾಡಿದ್ದಾರಾ? ಈ ಪ್ರಶ್ನೆ ಅಂತೂ ಓಡಾಡುತ್ತಿದೆ.
ಬಾಲಕೃಷ್ಣ ನಟಿಸಿದ ಸಿನಿಮಾಗಳು ಇತ್ತೀಚೆಗೆ ಸೂಪರ್ ಹಿಟ್ ಆಗುತ್ತಿವೆ. 'ಅಖಂಡ' ಸಿನಿಮಾ ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸುತ್ತಲೇ ಇದ್ದಾರೆ. 'ಅಖಂಡ' ಬಳಿಕ ತೆರೆಕಂಡಿದ್ದ 'ವೀರ ಸಿಂಹ ರೆಡ್ಡಿ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಅಂತ ಸಾಬೀತಾಗಿತ್ತು. ಇನ್ನು ಇತ್ತೀಚೆಗಷ್ಟೇ ತೆರೆ ಕಂಡಿರೋ 'ಭಗವಂತ್ ಕೇಸರಿ' ಕೂಡ 100 ಕೋಟಿ ಕ್ಲಬ್ ಸೇರಿದೆ. ಹೀಗಾಗಿ ಮುಂದಿನ ಸಿನಿಮಾ ಬಗ್ಗೆ ಕುತೂಹಲ ದೊಡ್ಡದಿದೆ.
ಬಾಲಯ್ಯ ನಟಿಸುತ್ತಿರುವ 109ನೇ ಸಿನಿಮಾವನ್ನು ಬಾಬಿ ನಿರ್ದೇಶನ ಮಾಡುತ್ತಿದ್ದಾರೆ. ಈ ವಿಷಯ ರಹಸ್ಯವಾಗೇನು ಉಳಿದಿಲ್ಲ. ಈಗಾಗಲೇ ಅದು ಟಾಲಿವುಡ್‌ನಲ್ಲಿ ಜಗತ್‌ಜಾಹೀರಾಗಿದೆ. ಇತ್ತೀಚೆಗೆ ಸಿನಿಮಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ಬಾಲಕೃಷ್ಣ ಕ್ಲೀನ್ ಆಗಿ ಶೇವ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಇದೇ ಬೆನ್ನಲ್ಲೇ 110ನೇ ಸಿನಿಮಾ ಬಗ್ಗೆ ಟಾಕ್ ಶುರುವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಬಾಲಕೃಷ್ಣ ನಟನೆಯ 110 ಸಿನಿಮಾದ ಪೋಸ್ಟರ್ ಹರಿದಾಡುತ್ತಿದೆ. ಬಾಲಯ್ಯನ ಕಾಸ್ಟ್ಯೂಮ್, ಲುಕ್ ಎಲ್ಲವೂ ವಿಭಿನ್ನವಾಗಿದ್ದು, ಯುದ್ಧ ಭೂಮಿಯಲ್ಲಿ ಸೆಣಸಾಟಕ್ಕೆ ನಿಂತ ಯೋಧನಂತೆ ಕಾಣುತ್ತಿದ್ದಾರೆ. ಜೊತೆಗೆ 'ಬ್ಯಾಟಲ್ ಆಫ್ ಬ್ರೀತ್ಸ್' ಅನ್ನೋ ಟ್ಯಾಗ್ ಕೂಡ ಇಡಲಾಗಿದೆ. ಅದೇ ಫೋಟೊಯೀಗ ಎಲ್ಲೆಡೆ ವೈರಲ್ ಆಗಿದೆ.
ಅಸಲಿಗೆ NBK 110 ಸಿನಿಮಾದ ಪೋಸ್ಟರ್ ಲೀಕ್ ಆಗಿದ್ದಾ? ಇದು ಫ್ಯಾನ್ ಮೇಡಾ ಅನ್ನೋದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಇನ್ನೊಂದು ಕಡೆ ಇದು ಕ್ರಿಕೆಟ್‌ಗೆ ಸಂಬಂಧಿಸಿದ ಪೋಸ್ಟರ್ ಎಂದು ಕೆಲವರು ಹೇಳುತ್ತಿದ್ದಾರೆ. ಈ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಕೂಡ ಇದ್ದು, ಅದೂ ಕೂಡ ಸದ್ದು ಮಾಡುತ್ತಿದೆ. ಹೀಗಾಗಿ ಪೋಸ್ಟರ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ.


Click it and Unblock the Notifications











