ಒಳ ಉಡುಪಿನ ಸೈಜ್ ಕೇಳಿದವನ ವಿರುದ್ಧ ದೂರು ನೀಡಿದ ನಟಿ

ಸಾಮಾಜಿಕ ಜಾಲತಾಣದಲ್ಲಿ ನಟಿಯರಿಗೆ ಕಿರುಕುಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೆಟ್ಟ ಕಮೆಂಟ್ ಮಾಡುವುದು, ಖಾಸಗಿ ಅಂಗಗಳ ವರ್ಣನೆ ಮಾಡುವುದು, ತೀರ ಖಾಸಗಿ ವಿಷಯ ಕೆದಕುವುದು, ಸುಳ್ಳು ಸುದ್ದಿಗಳನ್ನು ಹರಡಿಸುವುದು ಇಂಥಹವನ್ನು ಪ್ರತಿದಿನ ಎದುರಿಸುತ್ತಿದ್ದಾರೆ ನಟಿಯರು.

ಬಹುತೇಕ ನಟಿಯರು ಇಂಥಹಾ ಕೆಟ್ಟ ಕಮೆಂಟ್‌ಗಳನ್ನು, ಕಮೆಂಟ್ ಮಾಡುವವರನ್ನು ಅಲಕ್ಷಿಸುತ್ತಾರೆ. ಆದರೆ ಕೆಲವರು ಮಾತ್ರ ತಿರುಗಿ ಬಿದ್ದು ಟ್ರೋಲ್ ಮಾಡುವವರಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಇದೀಗ ತೆಲುಗಿನ ನಟಿ, ನಿರೂಪಕಿ ನೇಹಾ ಚೌದರಿ ಇಂಥಹಾ ಧೈರ್ಯ ಪ್ರದರ್ಶಿಸಿದ್ದಾರೆ.

ನಿರೂಪಕಿ ನೇಹಾ ಚೌದರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿರುವ ಸಾಯಿಕೃಷ್ಣ ಸುಗು ಹೆಸರಿನ ವ್ಯಕ್ತಿಯೊಬ್ಬ ನೇಹಾರ ಒಳ ಉಡುಪಿನ ಸೈಜ್ ಕೇಳಿದ್ದಾನೆ. ಆ ವ್ಯಕ್ತಿಯ ಸಂದೇಶದ ಸ್ಕ್ರೀನ್‌ ಶಾಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ನೇಹಾ ಆತನ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.

ಒಳ ಉಡುಪಿನ ಸೈಜ್ ಕೇಳಿದ 'ಅಭಿಮಾನಿ'

ಒಳ ಉಡುಪಿನ ಸೈಜ್ ಕೇಳಿದ 'ಅಭಿಮಾನಿ'

ನಾನು ನಿಮ್ಮ ಅಭಿಮಾನಿ ಎಂದು ಮೆಸೆಜ್ ಮಾಡಿದ ವ್ಯಕ್ತಿ ಆ ನಂತರ 'ನಿಮ್ಮ ದೇಹ ನನಗೆ ಇಷ್ಟ' ಎಂದಿದ್ದಾನೆ. ನಂತರ ಇನ್ನೂ ಮುಂದುವರೆದು ನಿಮ್ಮ ಒಳ ಉಡುಪಿನ ಸೈಜ್ ಏನು ಎಂದು ಕೇಳಿದ್ದಾನೆ. ಆ ನೆಟ್ಟಿಗನ ಸಂದೇಶದ ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡಿರುವ ನೇಹಾ, 'ನಿನಗೆ ಬೈಯಲು ಪದಗಳು ಸಹ ಸಿಗುತ್ತಿಲ್ಲ' ಎಂದಿದ್ದಾರೆ.

ಸಮಾಧಾನ ಹೇಳಿದವರಿಗೆ ಕ್ಲಾಸ್ ತೆಗೆದುಕೊಂಡ ನೇಹಾ

ಸಮಾಧಾನ ಹೇಳಿದವರಿಗೆ ಕ್ಲಾಸ್ ತೆಗೆದುಕೊಂಡ ನೇಹಾ

ಘಟನೆ ನಂತರ ನಂತರ ತಮಗೆ ಸಮಾಧಾನದ ಸಂದೇಶಗಳನ್ನು ಕಳುಹಿಸಿದ ಜನರನ್ನೂ ತರಾಟೆಗೆ ತೆಗೆದುಕೊಂಡಿರುವ ನೇಹಾ, 'ನೀವೆಲ್ಲ ಏಕೆ ನನಗೆ ಸಮಾಧಾನ ಹೇಳುತ್ತಿದ್ದೀರಿ? ನಾನು ಎಷ್ಟು ಬಾರಿ ಇಂಥಹಾ ಕಿರುಕುಳ ತಡೆದುಕೊಂಡಿರಬೇಕು? ಇಂಥಹಾ ಜನರನ್ನು ಸುಮ್ಮನೆ ಬಿಟ್ಟರೆ ಇವರು ಇನ್ನೂ ಮುಂದಿನ ಹಂತಕ್ಕೆ ಹೋಗುತ್ತಾರೆ. ನಿಮಗೆ ನಿಜಕ್ಕೂ ನನ್ನ ಮೇಲೆ ಕಾಳಜಿ ಇದ್ದರೆ ಜವಾಬ್ದಾರಿಯಿಂದ ವರ್ತಿಸಿ ಇಂಥಹಾ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ. ಮಹಿಳೆಯರಿಗೆ ಸಮಾಧಾನದಿಂದ ಇರುವಂತೆ ಪಾಠ ಮಾಡಬೇಡಿ' ಎಂದಿದ್ದಾರೆ.

ಪೊಲೀಸರಿಗೆ ದೂರು ನೀಡಿದ್ದೇನೆ: ನೇಹಾ

ಪೊಲೀಸರಿಗೆ ದೂರು ನೀಡಿದ್ದೇನೆ: ನೇಹಾ

ತಮ್ಮ ಮುಂದಿನ ಪೋಸ್ಟ್‌ನಲ್ಲಿ 'ನನ್ನ ಪರ ವಹಿಸಿದ, ನನ್ನ ಬಗ್ಗೆ ಕಾಳಜಿವಹಿಸಿದ ಎಲ್ಲರಿಗೂ ಧನ್ಯವಾದ. ನನಗೆ ಮೆಸೇಜ್ ಮಾಡಿದ ವ್ಯಕ್ತಿ ತನ್ನ ಖಾತೆ ಡಿಲೀಟ್ ಮಾಡಿದ್ದಾನೆ. ಆದರೆ ನಾನೂ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದ್ದೇನೆ. ಕೂಡಲೇ ಅವರು ಸ್ಪಂದಿಸಿದ್ದಾರೆ' ಎಂದಿದ್ದಾರೆ.

Recommended Video

ಮಕ್ಕಳ ಜವಾಬ್ದಾರಿ ಏನು ಅನ್ನೋದನ್ನ ತೋರಿಸಿಕೊಟ್ರು Duniya Vijay | Filmibeat Kannada
ಕ್ರೀಡಾಪಟು ಆಗಿರುವ ನೇಹಾ

ಕ್ರೀಡಾಪಟು ಆಗಿರುವ ನೇಹಾ

ತೆಲುಗಿನ ಬಹಳ ಖ್ಯಾತ ನಿರೂಪಕಿಯರಲ್ಲಿ ಒಬ್ಬರು ನೇಹಾ ಚೌದರಿ. ಸ್ವತಃ ಅಥ್ಲೀಟ್ ಆಗಿರುವ ನೇಹಾ, ಕ್ರೀಡೆಗೆ ಸಂಬಂಧಿಸಿದ ಶೋಗಳಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಇತರೆ ಹಲವು ಶೋಗಳನ್ನೂ ನಿರೂಪಣೆ ಮಾಡಿರುವ ನೇಹಾ ಬಹಳ ಬೋಲ್ಡ್ ಹಾಗೂ ಧೈರ್ಯಶಾಲಿ ನಿರೂಪಕಿ.

More from Filmibeat

English summary
A man asked vulgar question to Anchor Neha Chowdary on social media. Neha gave police complaint against him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X