Neha Shetty: ಸ್ವಿಮ್ಮಿಂಗ್ ಪೂಲ್ ಸೀನ್: ನೇಹಾ ಶೆಟ್ಟಿ-ನಿರ್ದೇಶಕನ ಜೊತೆ ಕಿರಿಕ್: ಕಾರಾವಾನ್‌ನಲ್ಲಿ ನಟಿ ಕಣ್ಣೀರು

'ಮುಂಗಾರು ಮಳೆ-2' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ನೇಹಾ ಶೆಟ್ಟಿ ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಂದ, ಅಭಿನಯ ಜೊತೆಗಿದ್ದರು ಒಳ್ಳೆ ಬ್ರೇಕ್ ಮಾತ್ರ ಈಕೆಗೆ ಸಿಕ್ತಿಲ್ಲ. ತೆಲುಗಿನಲ್ಲಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ನೇಹಾ ನಟಿಸುತ್ತಿದ್ದಾರೆ. 'ರೂಲ್ಸ್ ರಂಜನ್' ಎನ್ನುವ ಚಿತ್ರದಲ್ಲಿ ಮಂಗಳೂರು ಚೆಲುವೆ ನಟಿಸಿದ್ದು ಹಾಡೊಂದು ಸಖತ್ ಸದ್ದು ಮಾಡ್ತಿದೆ.

ರತ್ನಂ ಕೃಷ್ಣ ಆಕ್ಷನ್ ಕಟ್ ಹೇಳಿರುವ 'ರೂಲ್ಸ್ ರಂಜನ್' ಚಿತ್ರದಲ್ಲಿ ಕಿರಣ್ ಅಬ್ಬವರಂ ಜೋಡಿಯಾಗಿ ನೇಹಾ ಶೆಟ್ಟಿ ಮಿಂಚಿದ್ದಾರೆ. ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿರುವ ಚಿತ್ರದ 'ಸಮ್ಮೋಹನುಡು' ಸಾಂಗ್ ಸಖತ್ ವೈರಲ್ ಆಗ್ತಿದೆ. ಸಿನಿಮಾ ಪ್ರಮೋಷನ್‌ಗಾಗಿ ಚಿತ್ರತಂಡ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡ್ತಿದೆ. 'ಸಮ್ಮೋಹನುಡು' ಸಾಂಗ್ ಶೂಟಿಂಗ್ ಬಗ್ಗೆ ನಿರ್ದೇಶಕ ರತ್ನಂ ಕೃಷ್ಣ ಹಾಗೂ ನೇಹಾ ಶೆಟ್ಟಿ ಮಾತುಗಳು ವೈರಲ್ ಆಗುತ್ತಿದೆ.

Neha shetty and director Rathinam Krishna fougt while Sammohanuda song shooting

ಸ್ವಿಮ್ಮಿಂಗ್ ಪೂಲ್, ಬಾತ್‌ ಟಬ್, ಶವರ್, ಮಳೆ ಹೀಗೆ ಬೇರೆ ಬೇರೆ ಜಾಗದಲ್ಲಿ ಶೂಟ್ ಮಾಡಿದ್ದಾರೆ. ಒಂದು ಸಿನಿಮಾ ಶೂಟಿಂಗ್ ಅಂದಮೇಲೆ ನೂರಾರು ಜನ ಒಂದೆಡೆ ಸೇರಿ ಕೆಲಸ ಮಾಡುತ್ತಾರೆ. ಈ ವೇಳೆ ಸಣ್ಣ ಸಣ್ಣ ಜಗಳ, ವೈಮನಸ್ಸು ಸರ್ವೇಸಾಮಾನ್ಯ. ಈ ಸಾಂಗ್‌ ಶೂಟಿಂಗ್ ವೇಳೆ ಕೂಡ ಇಂತಹ ಘಟನೆ ನಡೆದಿದ್ದಂತೆ. ಅದನ್ನು ಚಿತ್ರತಂಡವೇ ರಿವೀಲ್ ಮಾಡಿದೆ. ಈ ಸಾಂಗ್ ಶೂಟಿಂಗ್ ಅನುಭವದ ಬಗ್ಗೆ ಸಂದರ್ಶನವೊಂದರಲ್ಲಿ ನಿರ್ದೇಶಕ ಹಾಗೂ ನಾಯಕಿ ಮಾತನಾಡಿರುವ ಮಾತುಗಳು ಚರ್ಚೆ ಹುಟ್ಟಾಕ್ಕಿದೆ.

'ಸಮ್ಮೋಹನುಡು' ಹಾಡಿನ ಕೆಲವು ಶಾಟ್ಸ್‌ ಉಳಿದುಬಿಟ್ಟಿತ್ತಂತೆ. ಹಾಡಿನ ಆರಂಭದಲ್ಲಿರುವ ಸ್ವಿಮ್ಮಿಂಹ್ ಪೂಲ್ ಶಾಟ್‌ಗಳನ್ನು ಕೊನೆಯಲ್ಲಿ ಸೆರೆ ಹಿಡಿದರಂತೆ. ಅದಕ್ಕಾಗಿ ನಿರ್ದೇಶಕ ರಿವರ್ಸ್ ಪ್ಲಾನ್ ಮಾಡಿದ್ದರಂತೆ. ಮೈನಸ್‌ 15 ಡಿಗ್ರಿ ಟೆಂಪ್ರೇಚರ್ ನೀರಿನಲ್ಲಿ ಹೀರೋಯಿನ್ ನಟಿಸ್ತಾರೋ ಇಲ್ಲವೋ ಎಂದುಕೊಂಡಿದ್ದರಂತೆ ನಿರ್ದೇಶಕರು. ನನಗೆ ಆ ದೃಶ್ಯಗಳು ಬೇಡ ಮೇಡಂ.. ತುಂಬಾ ಕಷ್ಟ.. ಸಾಂಗ್‌ ಶೂಟಿಂಗ್‌ಗೆ ಎಲ್ಲವನ್ನು ಸಿದ್ಧಮಾಡಿ ಬೇಡ ಮೇಡಂ, ಆ ಜಾಗದಲ್ಲಿ ಬೇರೆ ಶಾಟ್ಸ್ ಬಳಸುತ್ತೇನೆ ಎಂದು ಸುಳ್ಳು ಹೇಳಿದ್ದರಂತೆ. ಆದರೆ ಆಕೆ ಇಲ್ಲ ನಾನೇ ಮಾಡ್ತೀನಿ ಎಂದು ಹಠ ಮಾಡಿ ನಟಿಸಿದ್ದರಂತೆ.

ನಿರ್ದೇಶಕರು ಬೇಡ ಎಂದರೂ ನೇಹಾ ಅಷ್ಟು ತಣ್ಣನೆಯ ನೀರಿನಲ್ಲಿ ನಟಿಸೋಕೆ ಒಪ್ಪಿದರಂತೆ. ನೇಹಾ ಸಿನಿಮಾ ಪ್ಯಾಷನ್ ನೋಡಿ ನಿರ್ದೇಶಕರು ಬೇಡ ಬೇಡ ಎಂದು ಸುಮ್ಮನೆ ಹೇಳುತ್ತಿದ್ದಂತೆ. "ಆದರೆ ಸ್ವಿಮ್ಮಿಂಗ್ ಪೂಲ್‌ನಲ್ಲಿದ್ದ ದೃಶ್ಯ ಐದಾರು ನಿಮಿಷದಲ್ಲಿ ಶೂಟ್ ಮಾಡಬಹುದು ಎಂದುಕೊಂಡಿದ್ದರಂತೆ.

Neha shetty and director Rathinam Krishna fougt while Sammohanuda song shooting

ಆದರೆ ಅದು ಸಾಧ್ಯವಾಗದೇ ಸುಮಾರು ಒಂದು ಗಂಟೆ ಕಾಲ ಮುಂದುವರೆಯಿತು. ಅಲ್ಲಿಯವರೆಗೆ, ನಾಯಕಿ ಸಹಿಸಿಕೊಳ್ಳುತ್ತಲೇ ಇದ್ದಳು. ಆಕೆಯ ಮೊಣಕಾಲುಗಳಿಗೂ ಪೆಟ್ಟಾಯಿತು. ಆದ್ರೂ ಅಲ್ಲಿಯವರೆಗೂ ತಾಳ್ಮೆಯಿಂದ ಕಾದಿದ್ದಳು. ಇನ್ನೂ ಎರಡು ಶಾಟ್‌ ಬಾಕಿ ಇದ್ದಾಗ ತಾಳ್ಮೆ ಕಳೆದುಕೊಂಡ ನೇಹಾ ಶೆಟ್ಟಿ ಹೊರಗೆ ಬಂದರು. ಆ ಎರಡು ಶಾಟ್‌ಗಳನ್ನು ತೆಗೆಯಲು ಸಾಧ್ಯವಾಗದ ಕಾರಣ ನಾನು ನೇಹಾ ಶೆಟ್ಟಿಯೊಂದಿಗೆ ಮೂರು ತಿಂಗಳು ಮಾತನಾಡಲಿಲ್ಲ" ಎಂದು ನಿರ್ದೇಶಕ ರತ್ನಂ ಕೃಷ್ಣ ಹೇಳಿದ್ದಾರೆ.

"ಆ ಶಾಟ್ ನಂತರ ನಾನು ಕಾರವಾನ್ ಒಳಗೆ ಹೋಗಿ ಅತ್ತಿದ್ದೆ. ಕಷ್ಟಪಟ್ಟು ಆ ದೃಶ್ಯವನ್ನು ಮುಗಿಸಿದ್ದೇನೆ ಎಂಬ ಸಂತೋಷವೂ ಇತ್ತು. ಜೊತೆಗೆ ನೋವು ಇತ್ತು" ಎಂದು ನೇಹಾ ಹೇಳಿದ್ದಾರೆ. ಬಳಿಕ ಎಡಿಟಿಂಗ್ ವೇಳೆ ನನಗೆ ನೇಹಾ ಶೆಟ್ಟಿ ನೋವು ಅರ್ಥವಾಯಿತು. ನಂತರ ನಾನೇ ಕರೆ ಮಾಡಿ ಮಾತನಾಡಿದೆ ಎಂದು ನಿರ್ದೇಶಕರು ವಿವರಿಸಿದ್ದಾರೆ. ಒಟ್ನಲ್ಲಿ ಸಾಂಗ್ ಬಹಳ ಚೆನ್ನಾಗಿ ಬಂದಿದೆ ಎಂದು ಇಬ್ಬರು ಖುಷಿಪಟ್ಟಿದ್ದಾರೆ. ಅಂದಹಾಗೆ 'ರೂಲ್ಸ್ ರಂಜನ್' ಸಿನಿಮಾ ಈ ವಾರ ರಿಲೀಸ್ ಆಗಲಿದೆ.

More from Filmibeat

English summary
Neha shetty shared Sammohanuda song shooting experience
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X