'ಮುಂಗಾರು ಮಳೆ 2' ಬೆಡಗಿ ನೇಹಾ ಶೆಟ್ಟಿ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ?

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಂಗಾರು ಮಳೆ 2 ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಮಿಲ್ಕಿ ಬ್ಯೂಟಿ ನೇಹಾ ಶೆಟ್ಟಿ ಅಂದಕ್ಕೆ ಮರುಳಾಗಿದ್ದ ಪಡ್ಡೆ ಹೈಕ್ಳು ಈಕೆ ಮುಂಬರುವ ದಿನಗಳಲ್ಲಿ ಹೆಚ್ಚು ಚಿತ್ರಗಳ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾಳೆ ಎಂದು ಊಹಿಸಿದ್ದರು. ಆದರೆ ಸಿನಿ ರಸಿಕರ ಈ ಊಹೆ ನಿಜವಾಗಲಿಲ್ಲ. ನೇಹಾ ಶೆಟ್ಟಿಗೆ ಮುಂಗಾರು ಮಳೆ 2 ಬಳಿಕ ಹೆಚ್ಚೇನೂ ಆಫರ್‌ಗಳು ಬರಲಿಲ್ಲ.

2016 ರಲ್ಲಿ ಬಿಡುಗಡೆಗೊಂಡಿದ್ದ ಮುಂಗಾರು ಮಳೆ 2 ಚಿತ್ರದಲ್ಲಿ ನಟಿಸಿದ್ದ ನೇಹಾ ಶೆಟ್ಟಿ 2017ರಲ್ಲಿ ಬಿಡುಗಡೆಗೊಂಡ ಚಂದನ್ ಶೆಟ್ಟಿ ಸಂಯೋಜನೆಯ 'ಚಾಕೋಲೆಟ್ ಗರ್ಲ್' ಎಂಬ ಆಲ್ಬಂ ಹಾಡಿನಲ್ಲಿ ಸೊಂಟ ಬಳುಕಿಸಿದ್ದು ಬಿಟ್ಟರೆ ನಂತರ ಕನ್ನಡದ ಯಾವುದೇ ಚಿತ್ರ ಹಾಗೂ ಹಾಡುಗಳಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಹೀಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಅವಕಾಶ ಗಿಟ್ಟಿಸಿಕೊಳ್ಳದ ನೇಹಾ ಶೆಟ್ಟಿ 2018ರಲ್ಲಿ ಬಿಡುಗಡೆಗೊಂಡ ಪೂರಿ ಜಗನ್ನಾಥ್ ನಿರ್ದೇಶನದ 'ಮೆಹಬೂಬ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಟಾಲಿವುಡ್ ಪ್ರವೇಶಿಸಿದರು.

ನಂತರ ಸಂದೀಪ್ ಕಿಶನ್ ನಟನೆಯ 'ಗಲ್ಲಿ ರೌಡಿ' ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದ ನೇಹಾ ಶೆಟ್ಟಿ ಅಖಿಲ್ ಅಕ್ಕಿನೇನಿ ಹಾಗೂ ಪೂಜಾ ಹೆಗ್ಡೆ ನಟನೆಯ ಮೋಸ್ಟ್ ಎಲಿಜಿಬಲ್ ಬ್ಯಾಚೆಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದರು. ಇಷ್ಟು ಚಿತ್ರಗಳಲ್ಲಿ ನಟಿಸಿದರೂ ಸಿಗದ ಖ್ಯಾತಿಯನ್ನು ನೇಹಾ ಶೆಟ್ಟಿಗೆ ತಂದುಕೊಟ್ಟದ್ದು 'ಡಿಜೆ ಟಿಲ್ಲು' ಎಂಬ ಒಂದೇ ಸಿನಿಮಾ.

Neha Shetty signed up for 2 more big telugu movies after super hit DJ Tillu

ಹೌದು, ಇದೇ ವರ್ಷ ಅಂದರೆ 2022 ಫೆಬ್ರವರಿ ತಿಂಗಳಿನಲ್ಲಿ ತೆರೆಕಂಡ ಸಿದ್ದು ಜೊನ್ನಲಗಡ್ಡ ನಟನೆಯ ಡಿಜೆ ಟಿಲ್ಲು ಚಿತ್ರದಲ್ಲಿ ರಾಧಿಕಾ ಎಂಬ ಪಾತ್ರದಲ್ಲಿ ನಟಿಸಿದ್ದ ನೇಹಾ ಶೆಟ್ಟಿ ತನ್ನ ಹಾಟ್ ಹಾಗೂ ಗ್ಲಾಮರಸ್ ಲುಕ್‌ನಿಂದ ತೆಲುಗು ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ನೇಹಾ ಶೆಟ್ಟಿ ಅಭಿನಯ ಹಾಗೂ ಲುಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆದವು.

ಹೀಗೆ ನಾಯಕಿಯಾಗಿ ಅಗತ್ಯವಿದ್ದ ಬ್ರೇಕ್ ಪಡೆದ ನೇಹಾ ಶೆಟ್ಟಿಗೆ ಇಂದು ( ಡಿಸೆಂಬರ್ 6 ) ತನ್ನ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ತೆಲುಗಿನಲ್ಲಿ ಸ್ಕೋಪ್ ಹೆಚ್ಚಿರುವ ಪಾತ್ರಗಳನ್ನು ಆಯ್ದುಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಈ ಮೂಲಕ ಡಿಜೆ ಟಿಲ್ಲು ಮುಖಾಂತರ ಪಡೆದ ಖ್ಯಾತಿಯನ್ನು ಕಾಪಾಡಿಕೊಳ್ಳುವ ಯೋಜನೆಯಲ್ಲಿರುವ ನೇಹಾ ಶೆಟ್ಟಿ ಅಭಿನಯದ ಮತ್ತೊಂದಷ್ಟು ತೆಲುಗು ಚಿತ್ರಗಳು ಹುಟ್ಟುಹಬ್ಬದಂದು ಘೋಷಣೆಗೊಂಡಿವೆ.

ಕಿರಣ್ ಅಬ್ಬಾವರಂ ನಟನೆಯ 'ರೂಲ್ಸ್ ರಂಜನ್' ಎಂಬ ಚಿತ್ರದಲ್ಲಿ ಸನಾ ಎಂಬ ಪಾತ್ರಕ್ಕಾಗಿ ನೇಹಾ ಶೆಟ್ಟಿ ಬಣ್ಣ ಹಚ್ಚುತ್ತಿದ್ದು, ಆರ್ ಎಕ್ಸ್ 100 ಖ್ಯಾತಿಯ ಕಾರ್ತಿಕೇಯ ಅಭಿನಯದ 'ಬೆದುರುಲಂಕ 2012' ಎಂಬ ಚಿತ್ರದಲ್ಲೂ ನಾಯಕಿಯಾಗಲಿದ್ದಾರೆ.

More from Filmibeat

English summary
Neha Shetty signed up for 2 more big telugu movies after super hit DJ Tillu. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X