ಶ್ರೀಲೀಲಾ ಬಳಿಕ ಐಟಂ ಸಾಂಗ್‌ಗೆ ಮಂಗಳೂರು ಬೆಡಗಿ ಗ್ರೀನ್ ಸಿಗ್ನಲ್
ಕರಾವಳಿ ಚೆಲುವೆ ನೇಹಾ ಶೆಟ್ಟಿ ಕನ್ನಡ ಚಿತ್ರಗಳಲ್ಲಿ ಮೊದಲಿಗೆ ನಟಿಸಿದರು. ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಸದ್ಯ ಅಲ್ಲೇ ಫುಲ್ ಬ್ಯುಸಿಯಾಗಿದ್ದಾರೆ. ಬಿಂದಾಸ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಐಟಂ ಸಾಂಗ್‌ನಲ್ಲಿ ಕುಣಿಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಬಂದ ನೇಹಾ ಶೆಟ್ಟಿ ಮೊದಲಿಗೆ 'ಮುಂಗಾರು ಮಳೆ- 2' ಚಿತ್ರದಲ್ಲಿ ನಟಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಮಿಂಚಿದ್ದರು. ಬಳಿಕ 'ಮೆಹಾಬೂಬಾ' ಎಂಬ ತೆಲುಗು ಚಿತ್ರಕ್ಕೆ ಆಯ್ಕೆ ಆಗಿದ್ದರು. ಬಳಿಕ ಆಕೆ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಲಿಲ್ಲ.

ಸದ್ಯ ಪವನ್ ಕಲ್ಯಾಣ್ ನಟನೆಯ 'OG' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಲು ನೇಹಾ ಶೆಟ್ಟಿ ಒಪ್ಪಿದ್ದಾರೆ. ಇದೇ ವಿಚಾರ ಟಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ. ಬಹಳ ಹಿಂದೆ ಶುರುವಾಗಿದ್ದ 'OG' ಚಿತ್ರದ ಚಿತ್ರೀಕರಣ ಕಾರಣಾಂತರಗಳಿಂದ ನಿಂತು ಹೋಗಿತ್ತು. ಇದೀಗ ಮತ್ತೆ ಆರಂಭವಾಗಿದೆ.
ಸುಜಿತ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'OG' ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಈ ಗ್ಯಾಂಗ್‌ಸ್ಟರ್ ಸಿನಿಮಾ ಚಿತ್ರೀಕರಣ ನಡೀತಿದೆ. ಡಿವಿವಿ ದಾನಯ್ಯ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಇಮ್ರಾನ್ ಹಶ್ಮಿ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ.
ಪ್ರಿಯಾಂಕ ಮೋಹನ್, ಅರುಣ್ ದಾಸ್, ಪ್ರಕಾಶ್ ರಾಜ್ ಸೇರಿದಂತೆ ಘಟಾನುಘಟಿ ಕಲಾವಿದರು 'OG' ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತವಿದೆ. ಪವನ್ ಕಲ್ಯಾಣ್ ರಾಜಕೀಯರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದರಿಂದ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಇತ್ತೀಚೆಗೆ ಆಂಧ್ರ ಡಿಸಿಎಂ ಮತ್ತೆ ಶೂಟಿಂಗ್ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ನೇಹಾ ಶೆಟ್ಟಿಗೆ ಅದ್ಯಾಕೋ ದೊಡ್ಡ ಬ್ರೇಕ್ ಸಿಕ್ತಿಲ್ಲ. ತೆಲುಗಿನಲ್ಲಿ 'ಡಿಜೆ ಟಿಲ್ಲು' ಚಿತ್ರ ಮಾತ್ರ ಕೊಂಚ ಕ್ರೇಜ್ ತಂದುಕೊಟ್ಟಿತ್ತು. ಬಳಿಕ ಎಷ್ಟೇ ಬೋಲ್ಡ್ ಆಗಿ ನಟಿಸಿದರೂ ಯಾಕೋ ವರ್ಕ್ ಆಗ್ತಿಲ್ಲ. ಸ್ಟಾರ್ ನಟಿಯರೆಲ್ಲಾ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯುತ್ತಿದ್ದಾರೆ. 'ಪುಷ್ಪ-2' ಚಿತ್ರದಲ್ಲಿ ಶ್ರೀಲೀಲಾ 'ಕಿಸ್ಸಿಕ್' ಎಂದು ಸ್ಟೆಪ್ಸ್ ಹಾಕಿದ್ದರು. ಇದೀಗ ನೇಹಾ ಶೆಟ್ಟಿ ಸರದಿ. ಇದಕ್ಕಾಗಿ 'OG' ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಕಂಪೋಸ್ ಮಾಡಲಾಗುತ್ತಿದೆ.
ಪವನ್ ಕಲ್ಯಾಣ್ ನಟನೆಯ 'OG' ಚಿತ್ರದಲ್ಲಿ ಪ್ರಭಾಸ್ ಕೂಡ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. 'ಬಾಹುಬಲಿ- 2' ಬಳಿಕ ಪ್ರಭಾಸ್ 'ಸಾಹೋ' ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಸುಜಿತ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಆದರೆ ಆತನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ 'OG' ಚಿತ್ರಕ್ಕೆ ಪವರ್ ಸ್ಟಾರ್ ಅವಕಾಶ ಕೊಟ್ಟಿದ್ದರು.
'OG' ಚಿತ್ರದಲ್ಲಿ ಕೂಡ 'ಸಾಹೋ' ಚಿತ್ರದ ಪ್ರಭಾಸ್ ಪಾತ್ರ ಇರುತ್ತದೆ ಎನ್ನಲಾಗ್ತಿದೆ. ಅಂದರೆ ಯಂಗ್ ರೆಬಲ್ ಸ್ಟಾರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಗುಲ್ಲಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಸ್ಟಾರ್ ನಟರಿಬ್ಬರು ತೆರೆ ಹಂಚಿಕೊಳ್ಳುವುದು ಅಭಿಮಾನಿಗಳಿಗೆ ಹಬ್ಬವೇ ಸರಿ.
'OG' ಚಿತ್ರದಲ್ಲಿ ಈಗ ನೇಹಾ ಶೆಟ್ಟಿ ಸ್ಪೆಷಲ್ ಸಾಂಗ್‌ನಲ್ಲಿ ಕುಣಿಯುತ್ತಾರೆ ಎಂದು ವರದಿಯಾಗಿದೆ. ಥಾಯ್ಲೆಂಡ್‌ನಲ್ಲಿ ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗ್ತಿದೆ. ಆಕೆ ಕೂಡ ಒಂದು ಪೋಸ್ಟ್ ಮಾಡಿದ್ದಾರೆ. ಆದರೆ ಯಾವ ಚಿತ್ರದ ಶೂಟಿಂಗ್ ಎಂದು ಹೇಳಿಲ್ಲ.


Click it and Unblock the Notifications











