twitter
    For Quick Alerts
    ALLOW NOTIFICATIONS  
    For Daily Alerts

    ಪಟಾಕಿ ಹೊಡೆಯುವ ವಿಚಾರ: ರಶ್ಮಿಕಾ ಮಾತು, ಸಮಂತಾ ಪೋಸ್ಟಿಗೆ ನೆಟ್ಟಿಗರಿಂದ ಮೆಚ್ಚುಗೆ

    |

    ದೀಪಾವಳಿ ಎಂಬ ದೀಪಗಳ ಹಬ್ಬದ ಆಚರಣೆ ಇಡೀ ಜಗತ್ತಿನಾದ್ಯಂತ ಕಳೆದ ಎರಡು ದಿನಗಳಿಂದ ಜನರು ಆಚರಿಸುತ್ತಿದ್ದಾರೆ. ಅಂದರೆ ಕಚೇರಿಗಳಲ್ಲಿ ಪೂಜೆ ಮಾಡಿ,ಲಕ್ಷ್ಮಿಯನ್ನು ಸ್ವಾಗತಿಸಿದ್ದಾರೆ. ಇನ್ನೊಂದೆಡೆ ದೀಪಗಳನ್ನು ಬೆಳಗುವುದರ ಮೂಲಕ ಶಾಂತಿ ಮತ್ತು ನೆಮ್ಮದಿ ಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಇನ್ನು ದೀಪಾವಳಿಯೆಂದರೆ ಬಗೆಬಗೆಯ ಸಿಹಿ ಪದಾರ್ಥಗಳು ಜೊತೆಗೆ ಪಟಾಕಿಗಳು ಇವೆರಡು ಇಲ್ಲದೆ ದೀಪಾವಳಿ ಅಪೂರ್ಣ. ಪ್ರತಿಬಾರಿಯೂ ದೀಪಾವಳಿ ಬಂದಾಗ ಪಟಾಕಿಗಳ ವಿಷಯದಲ್ಲಿ ದೊಡ್ಡ ರಾದ್ಧಾಂತವೇ ಈ ದೇಶದಲ್ಲಿ ನಡೆಯುತ್ತದೆ.

    ಅದರಲ್ಲೂ ವಿಶೇಷವಾಗಿ ಸೆಲೆಬ್ರೆಟಿಗಳು ಅಂತ ಕರೆಸಿಕೊಳ್ಳುವವರೆಲ್ಲಾ ಪಟಾಕಿಗಳನ್ನು ಹಚ್ಚಬೇಡಿ ಅಂತೇಳಿ ವಾಯುಮಾಲಿನ್ಯದ ಪಾಠ ಮಾಡುತ್ತಾರೆ. ಕಳೆದ ತಿಂಗಳು CEAT ಟೈರ್‌ಗಳ ad ನಲ್ಲಿ ಪಟಾಕಿಗಳನ್ನು ರಸ್ತೆಯಲ್ಲಿ ಹೊಡಿಯಬೇಡಿ ಎಂದು ನಟ ಅಮೀರ್ ಖಾನ್ ಸಂದೇಶ ಕೊಟ್ಟಾಗ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾದರು. ಪರಿಸರದ ಮತ್ತು ವಾಯುಮಾಲಿನ್ಯದ ಕಾಳಜಿ ಕೇವಲ ದೀಪಾವಳಿಯ ಸಂದರ್ಭದಲ್ಲಿ ಇವರಿಗೆಲ್ಲಾ ನೆನಪಿಗೆ ಬರುತ್ತದೆ ಅಂತ ಸಾಕಷ್ಟು ನೆಟ್ಟಿಗರು ಹರಿಹಾಯ್ದರು.

    ಪ್ರತಿ ದೀಪಾವಳಿಯ ಸಂದರ್ಭದಲ್ಲಿ ಈ ತರದ ವಾದ-ವಿವಾದಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲವರು ಇತ್ತೀಚೆಗೆ ತಮ್ಮ ದೀಪಾವಳಿ ಸಂದೇಶದಲ್ಲಿ ಪ್ರಬುದ್ಧತೆಯನ್ನು ಕೂಡ ಮೆರೆಯುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಮುಂದೆ ನಿಲ್ಲುತ್ತಾರೆ ನಟಿಯರಾದ ರಶ್ಮಿಕಾ ಮತ್ತು ಸಮಂತಾ.

    ನೆಟ್ಟಿಗರಿಂದ ಪ್ರಶಂಸೆಗೆ ಒಳಪಟ್ಟಿದ್ದಾರೆ

    ನೆಟ್ಟಿಗರಿಂದ ಪ್ರಶಂಸೆಗೆ ಒಳಪಟ್ಟಿದ್ದಾರೆ

    ಸದ್ಯಕ್ಕೆ ಭಾರತೀಯ ಸಿನಿಮಾರಂಗದ ಹಾಟ್ ಬೇಬಿ ರಶ್ಮಿಕಾ ಮಂದಣ್ಣ ಏನೇ ಮಾತಾಡಿದರೂ ಸುದ್ದಿ ಆಗಿಬಿಡುತ್ತದೆ. ಅನೇಕ ಸಲ ತನ್ನ ಅಭಿಪ್ರಾಯಗಳಿಂದ ಸಿಕ್ಕಾಪಟ್ಟೆ ಟ್ರೋಲ್ ಗಳಿಗೆ ಗುರಿಯಾಗುವ ರಶ್ಮಿಕಾ ಈ ಬಾರಿ ಮಾತ್ರ ದೀಪಾವಳಿಯ ವಿಚಾರದಲ್ಲಿ ನೆಟ್ಟಿಗರಿಂದ ಪ್ರಶಂಸೆಗೆ ಒಳಪಟ್ಟಿದ್ದಾರೆ. ರಶ್ಮಿಕಾ ತನ್ನ ಸಂದೇಶದಲ್ಲಿ "ಹಬ್ಬ ಚೆನ್ನಾಗಿ ಆಚರಣೆ ಮಾಡಿ, ಚೆನ್ನಾಗಿ ಸಿಹಿ ತಿನ್ನಿ, ಪಟಾಕಿ ಹೊಡೆಯಿರಿ ಆದರೆ ಕಮ್ಮಿ ಹೊಡೆಯಿರಿ" ಎಂದು ದೀಪಾವಳಿ ಶುಭಾಶಯಗಳು ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಇದು ಸಂದೇಶ ಕೊಡುವ ರೀತಿ. ಕೆಲವು ಸೆಲೆಬ್ರಿಟಿಗಳು ಪರಿಸರ ವಿಚಾರ ಹಿಡಿದುಕೊಂಡು ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಹೊಡೆಯಬೇಡಿ ಅಂತಾರೆ. ಆದರೆ ರಶ್ಮಿಕಾ ನೀವು ಸರಿಯಾಗಿ ಹೇಳಿದ್ದೀರಿ ಪಟಾಕಿ ಹೊಡೆದರು ಕಮ್ಮಿ ಹೊಡೆಯಬೇಕು ನಿಮ್ಮ ಮಾತು ತುಂಬಾ ಇಷ್ಟ ಆಯ್ತು ಅಂತ ಪ್ರತಿಕ್ರಿಯಿಸಿದ್ದಾರೆ.

     ಸಮಂತಾ ಮಾಡಿದ ಪೋಸ್ಟ್ ಕೊಡ ವೈರಲ್

    ಸಮಂತಾ ಮಾಡಿದ ಪೋಸ್ಟ್ ಕೊಡ ವೈರಲ್

    ದೀಪಾವಳಿ ಸಂದರ್ಭದಲ್ಲಿ ಸಮಂತಾ ಪೋಸ್ಟ್ ಮಾಡಿರುವ ಸಂದೇಶವೊಂದು ವೈರಲ್ ಆಗುತ್ತಿದೆ. ವಯಸ್ಕರು ಚಿಕ್ಕ ಮಕ್ಕಳ ಬಗ್ಗೆ ಯೋಚಿಸಬೇಕಾದ ವಿಷಯದ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ.ನಾಗ ಚೈತನ್ಯ ನಿಂದ ವಿಚ್ಛೇದನ ಪಡೆದುಕೊಂಡ ಮೇಲೆ ಸಮಂತಾ ನಿತ್ಯ ಯಾವುದೋ ಒಂದು ರೂಪದಲ್ಲಿ ಸುದ್ದಿಯಲ್ಲಿದ್ದಾರೆ. ಸ್ವಲ್ಪ ಗ್ಯಾಪ್ ನಂತರ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ಸ್ಯಾಮ್ ದಿನಕ್ಕೊಂದು ಹೊಸ ಪೋಸ್ಟ್‌ಗಳನ್ನು ಹಾಕುತ್ತಾ ಜನಮಾನಸದಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾಳೆ. ಇತ್ತೀಚೆಗಷ್ಟೇ ಅವರ ಇನ್‌ಸ್ಟಾ ವಾಲ್‌ನಲ್ಲಿ ದೀಪಾವಳಿ ಆಚರಣೆ ಮತ್ತು ವಿಶೇಷತೆಗಳ ಬಗ್ಗೆ ಪೋಸ್ಟ್ ಹಾಕಿದ್ದಾರೆ.

    ಪಟಾಕಿಗಳನ್ನು ನಿಷೇಧಿಸುವ ಬಗ್ಗೆ ಸಮಂತಾ

    ಪಟಾಕಿಗಳನ್ನು ನಿಷೇಧಿಸುವ ಬಗ್ಗೆ ಸಮಂತಾ

    ಸಾಮಾನ್ಯವಾಗಿ ದೀಪಾವಳಿ ಎಂದರೆ ಎಲ್ಲರಿಗೂ ಪಟಾಕಿಗಳ ನೆನಪಾಗುವುದು. ದೀಪಗಳ ಮಧ್ಯೆ ಪಟಾಕಿಗಳ ಸದ್ದು ಜೋರಾಗಿರುತ್ತದೆ. ವಿಶೇಷವಾಗಿ ಮಕ್ಕಳು ಈ ಹಬ್ಬವನ್ನು ಅತ್ಯಂತ ಸಂತೋಷದಿಂದ ಆಚರಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗದು. ಆದರೆ ಇಲ್ಲಿ ಬಂದದ್ದು ಒಂದೇ ಸಮಸ್ಯೆ, ಅದೇ ಮಾಲಿನ್ಯ. ದೀಪಾವಳಿ ಪಟಾಕಿಯಿಂದ ವಾತಾವರಣದಲ್ಲಿ ಮಾಲಿನ್ಯ ಹೆಚ್ಚುತ್ತದೆ ಹಾಗಾಗಿ ಪಟಾಕಿ ಸಿಡಿಸಬೇಡಿ ಎಂದು ಹಲವರು ಹೇಳುತ್ತಾರೆ. ಅಲ್ಲದೆ ಕ್ರ್ಯಾಕರ್ಸ್ ನಿಷೇಧಿಸಿ ಎಂಬ ಘೋಷಣೆಯೂ ಹಿಂದಿನಿಂದಲೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಮಂತಾ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

    ಸದ್ಗುರು ಜಗ್ಗಿ ವಾಸುದೇವ್

    ಸದ್ಗುರು ಜಗ್ಗಿ ವಾಸುದೇವ್

    ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪಟಾಕಿ ನಿಷೇಧದ ಕುರಿತು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪಟಾಕಿ ಬ್ಯಾನ್ ಮಾಡುವಂತೆ ಆಗ್ರಹಿಸುವುದು ತಪ್ಪು ಎಂದು ಹೇಳಿಕೊಂಡು ಬಂದಿರುವ ಅವರು ತಮ್ಮ ಬಾಲ್ಯದ ಸಿಹಿ ಗುರುತುಗಳನ್ನು ನೆನಪಿಸಿಕೊಂಡು ಅವರು ಬಾಲ್ಯದಲ್ಲಿ ಪಟಾಕಿಗಳ ಖುಷಿಯನ್ನು ವಿವರಿಸಿದ್ದಾರೆ. "ತಮ್ಮ ಬಾಲ್ಯದಲ್ಲಿ ಸೆಪ್ಟೆಂಬರ್ ತಿಂಗಳಿನಿಂದಲೇ ದೀಪಾವಳಿಯ ದಿನದಂದು ಪಟಾಕಿ ಹಚ್ಚಲು ಕನಸು ಕಾಣಲು ಆರಂಭಿಸುತ್ತಿದ್ದೀವಿ ಮತ್ತು ದೀಪಾವಳಿ ಮುಗಿದ ನಂತರವೂ ಪಟಾಕಿ ಸುಡುತ್ತಾ ಆನಂದಿಸುತ್ತಿದ್ದೀವಿ"ಎಂದು ಅವರು ವೀಡಿಯೊದಲ್ಲಿ ಹೇಳುತ್ತಾರೆ.

    ನಿಮ್ಮ ಮಕ್ಕಳಿಗೆ ಹೊಡೆಯಲು ಬಿಡಿ

    ನಿಮ್ಮ ಮಕ್ಕಳಿಗೆ ಹೊಡೆಯಲು ಬಿಡಿ

    "ಹಾಗಾಗಿ ಪರಿಸರ ಸ್ನೇಹಿಯಾಗಬೇಕು ಎನ್ನುವವರು ಮಕ್ಕಳಿಗೆ ಪಟಾಕಿ ಸಿಡಿಸಬೇಡಿ ಅಂತ ಹೇಳುವುದು ಸರಿಯಲ್ಲ. ಮಕ್ಕಳ ಸಂತೋಷಕ್ಕೆ ಅಡ್ಡಿ ಮಾಡಬೇಡಿ" ಎಂದ ಸದ್ಗುರುಗಳು ಪರಿಸರದ ಹಿತದೃಷ್ಟಿಯಿಂದ ಒಂದು ಉಪಯುಕ್ತ ಸಲಹೆ ನೀಡಿದ್ದಾರೆ. ''ಈ ಬಾರಿ Adults (ವಯಸ್ಕರ) ಪಟಾಕಿಗಳನ್ನು ಹೊಡೆಯುವುದರ ಬದಲು ನಿಮ್ಮ ಮಕ್ಕಳಿಗೆ ಹೊಡೆಯಲು ಬಿಡಿ. ಅದರ ನಂತರ, ಕಾರಿನಲ್ಲಿ ಬದಲಾಗಿ ಮೂರು ದಿನಗಳವರೆಗೆ ನಿಮ್ಮ ಕಚೇರಿಗೆ ಕಾಲ್ನಡಿಗೆಯಲ್ಲಿ ಹೋಗಿ". ಸದ್ಗುರುಗಳ ಈ ಮಾತುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ ಸಮಂತಾ, "ಕ್ರ್ಯಾಕರ್ಸ್ ಅನ್ನು ಬ್ಯಾನ್ ಮಾಡಬೇಡಿ" ಎಂದು ಕಾಮೆಂಟ್ ಮಾಡಿದ್ದಾರೆ.

    ನೆಟ್ಟಿಗರಿಂದ ಪ್ರಶಂಸೆ

    ನೆಟ್ಟಿಗರಿಂದ ಪ್ರಶಂಸೆ

    ಪಟಾಕಿ ಹೊಡೆಯುವುದರ ಬಗ್ಗೆ ಸಮಂತಾಳ ಅಭಿಪ್ರಾಯಕ್ಕೆ ನೆಟ್ಟಿಗರು 'ಮೇಡಂ ಕರೆಕ್ಟಾಗಿ ಹೇಳಿದ್ದೀರಾ'ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಒಂದಷ್ಟು ಸೆಲೆಬ್ರಿಟಿಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಹೊಡೆಯುವುದಕ್ಕೆ ಬೆಂಬಲ ಕೊಟ್ಟಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    {document1}

    English summary
    Netizen Appreciated Support from actresses for bursting firecrackers during Diwali/Deepavali
    Friday, November 5, 2021, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X