"ಇವಳಿಗೆ ಯಾವ ಚಪ್ಪಲಿಯಲ್ಲಿ ಹೊಡೀಬೇಕು"; ರಶ್ಮಿ ಬಗ್ಗೆ ಹೀಗಂದಿದ್ದು ಯಾರು?

ತೆಲುಗು ನಟಿ, ನಿರೂಪಕಿ ರಶ್ಮಿಕಾ ಗೌತಮ್ ತಮ್ಮ ನೇರಾನೇರ ಮಾತುಗಳಿಂದ ಪದೇ ಪದೆ ಸುದ್ದಿ ಆಗುತ್ತಿರುತ್ತಾರೆ. ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಆಕೆ ಹಂಚಿಕೊಂಡಿದ್ದ ಪೋಸ್ಟ್ ಭಾರೀ ವೈರಲ್ ಆಗಿತ್ತು. ಸದ್ಯ ಆಕೆಯ ಮತ್ತೊಂದು ಪೋಸ್ಟ್ ಬಗ್ಗೆ ನೆಟ್ಟಿಗನೊಬ್ಬ ಮಾಡಿರುವ ಕಾಮೆಂಟ್ ಸದ್ದು ಮಾಡುತ್ತಿದೆ.

ವಿಶಾಖ ಪಟ್ಟಣದಲ್ಲಿ ಹುಟ್ಟಿ ಬೆಳೆದ ರಶ್ಮಿಕಾ ಗೌತಮ್ ಹಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಜಬರ್ದಸ್ತ್' ಕಾಮಿಡಿ ಶೋ ನಿರೂಪಕಿಯಾಗಿ ಹೆಚ್ಚು ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಇನ್ನು ಒಂದಷ್ಟು ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಲ್ಲಿ ರಮ್ಯಾ ಮಾಡಿದ್ದ ಪಾತ್ರವನ್ನು ತೆಲುಗು ವರ್ಷನ್‌ನಲ್ಲಿ ರಶ್ಮಿ ನಿಭಾಯಿಸಿದ್ದರು.

Netizen slam Telugu actress anchor Rashmi Gautam s latest post

ರಶ್ಮಿ ಗೌತಮ್‌ಗೆ ಪ್ರಾಣಿ-ಪಕ್ಷಿ ಕಾಳಜಿ ಹೆಚ್ಚು. ಪ್ರಾಣಿ-ಪಕ್ಷಿಗಳನ್ನು ಹಿಂಸೆ ಮಾಡುವುದನ್ನು ಆಕೆ ವಿರೋಧಿಸುತ್ತಾರೆ. ಮೂಕ ಜೀವಿಗಳ ಹಿಂಸೆಯನ್ನು ಆಕೆ ಸಹಿಸುವುದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಅಂತಹ ಘಟನೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದಿಸುತ್ತಾರೆ. ಪ್ರಾಣಿ ಹಿಂಸೆ ತಪ್ಪು ಎನ್ನುವ ಕಾರಣಕ್ಕೆ ಸಸ್ಯಹಾರಿಯಾಗಿ ಬದಲಾಗಿದ್ದಾರೆ.

ಪ್ರಾಣಿ ಹಿಂದೆ ಬಗ್ಗೆ ಆಕೆ ಆಗಾಗ್ಗೆ ದನಿ ಎತ್ತುತ್ತಾರೆ. ಆದರೆ ಕೆಲವರು ಈ ಬಗ್ಗೆ ಕೂಡ ಟ್ರೋಲ್ ಮಾಡುತ್ತಿರುತ್ತಾರೆ. ಕಳೆದ ವರ್ಷ ಹೈದರಾಬಾದ್‌ನಲ್ಲಿ ಬೀದಿ ನಾಯಿಗಳು ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದವು. ಈ ಘಟನೆಯಲ್ಲಿ ಬಾಲಕನ ಪೋಷಕರದ್ದೇ ತಪ್ಪು ಎಂದು ರಶ್ಮಿ ಗೌತಮ್ ಹೇಳಿದ್ದರು. ಆಕೆಯನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇನ್ನು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ವಿರೋಧಿಸಿ ರಶ್ಮಿ ವಿವಾದಕ್ಕೀಡಾಗಿದ್ದರು. ಈಗ ಮತ್ತೆ ಆಕೆಯನ್ನು ಟ್ರೋಲ್ ಮಾಡಲಾಗುತ್ತಿದೆ.

ವ್ಯಕ್ತಿಯೊಬ್ಬ ಗೂಳಿಗೆ ಗುಂಡು ಹಾರಿಸಿ ಸಾಯಿಸಿದ ವೀಡಿಯೋವನ್ನು ರಶ್ಮಿ ಗೌತಮ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದರು. ಇಂತಹ ಘಟನೆಗಳನ್ನು ನಾವು ತಡೆಯಬೇಕು ಎಂದು ಆಗ್ರಹಿಸಿದ್ದರು. ಆದರೆ ಈ ಪೋಸ್ಟ್ ಬಗ್ಗೆ ನೆಟ್ಟಿಗನೊಬ್ಬ ಖಾರವಾಗಿ ಪ್ರತಿಕ್ರಿಯಿಸಿದ್ದಾನೆ.

"ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹೆಣ್ಣುಮಕ್ಕಳನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದಾರೆ. ಕೊಲ್ಲುತ್ತಿದ್ದಾರೆ. ಅಂತಹ ಕ್ರೌರ್ಯದ ಬಗ್ಗೆ ಪ್ರತಿಕ್ರಿಯಿಸದ ನೀನು ಒಂದು ಗೂಳಿಯನ್ನು ಸಾಯಿಸಿದರೆ ಕಾಮೆಂಟ್ ಮಾಡುತ್ತಿದ್ದೀಯಾ? ನಿನ್ನನ್ನು ಯಾವ ಚಪ್ಪಲಿಯಲ್ಲಿ ಹೊಡೆಯಬೇಕು" ಎಂದು ಬರೆದುಕೊಂಡಿದ್ದಾನೆ. ಇದಕ್ಕೆ ರಶ್ಮಿ ಗೌತಮ್ ರಿಪ್ಲೇ ಮಾಡಿದ್ದಾರೆ.

"ಇಂದು ಹಸುಗಳು, ನಾಯಿಗಳು. ನಾಳೆ ಮಕ್ಕಳನ್ನು ಕೊಲ್ಲುತ್ತಾನೆ. ಒಮ್ಮೆ ಒಬ್ಬ ಯಾರರನ್ನಾದರೂ ಸಾಯಿಸಲು ಸಿದ್ಧನಾದರೆ ಅವನಗೆ ಪ್ರಾಣಿ- ಮನುಷ್ಯ ಎನ್ನುವ ವ್ಯತ್ಯಾಸ ಇರಲ್ಲ. ಅಂತಹವರಿಗೆ ಮಕ್ಕಳು, ದೊಡ್ಡವರು ಅನ್ನುವುದು ಗೊತ್ತಾಗಲ್ಲ. ಅಲ್ಲಿ ಯಾವುದೇ ಧರ್ಮ ಕೆಲಸಕ್ಕೆ ಬರಲ್ಲ" ಎಂದು ರಶ್ಮಿ ಗೌತಮ್ ಖಾರವಾಗಿ ಕಾಮೆಂಟ್ ಮಾಡಿದ್ದಾರೆ.

ರಶ್ಮಿ ಗೌತಮ್ ಕಾಮೆಂಟ್‌ಗೆ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಇನ್ನು ರಶ್ಮಿ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗನಿಗೂ ಕೆಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೂ ಆತ ಮೊಂಡು ವಾದ ಮುಂದುವರೆಸಿದ್ದಾನೆ. ಈಗಾಗಲೇ ಸಾಕಷ್ಟು ಜನ ಮಕ್ಕಳು ಸತ್ತು ಹೋಗಿದ್ದಾರೆ. ನೀವು ಒಂದು ಪ್ರಾಣಿ ವಿಚಾರಕ್ಕೆ ರಿಯಾಕ್ಟ್ ಮಾಡುತ್ತಿರುವುದು ಪ್ರಚಾರಕ್ಕಾಗಿ. ಪ್ರಾಣಿಗಳಿಗೆ ಕೊಡುವ ಬೆಲೆ ನೀವು ಮನುಷ್ಯರಿಗೆ ಕೊಡುತ್ತಿಲ್ಲ. ಆಗಾಗ್ಗೆ ಸ್ವಲ್ಪ ಮಾನವೀಯತೆ ತೋರಿಸಿ, ಹಿಂಸೆ ನಿಲ್ಲಿಸುವಂತೆ ಹೇಳಿ. ಧರ್ಮ ಎಲ್ಲಾ ಹೇಳೋಕೆ, ಸಿನಿಮಾದಲ್ಲಿ ತೋರಿಸೋಕೆ ಚೆಂದ ಎಂದು ರಿಪ್ಲೇ ಮಾಡಿದ್ದಾನೆ.

More from Filmibeat

English summary
Netizen Comment On Rashmi Gautam's condemning violence against animals tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X