'ಪುಷ್ಪ-2' ಫ್ರೇಮ್ ಟು ಫ್ರೇಮ್ 'KGF'-2 ಕಾಪಿ? ಟ್ರೈಲರ್‌ನಲ್ಲಿ ಇದನ್ನೆಲ್ಲಾ ಗಮನಿಸಿದ್ರಾ?
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸುಕುಮಾರ್ ಮೇಕಿಂಗ್, ಅಲ್ಲು ಅರ್ಜುನ್ ಸ್ಟೈಲ್, ಸ್ವ್ಯಾಗ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ರೈಲರ್ ಭರ್ಜರಿ ವೀವ್ಸ್, ಲೈಕ್ಸ್ ಗಿಟ್ಟಿಸಿ ಮುನ್ನುಗ್ಗುತ್ತಿದೆ. ಜಬರ್ದಸ್ತ್ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಟ್ರೈಲರ್ ನೋಡಿ ಅಭಿಮಾನಿಗಳು ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರುವುದು ಪಕ್ಕಾ ಎಂದು ಖುಷಿಯಾಗಿದ್ದಾರೆ. ಆದರೆ ಕೆಲವರಿಗೆ ಮಾತ್ರ ಟ್ರೈಲರ್ ಇಷ್ಟಾಗಿಲ್ಲ. 'KGF- 2' ಸಿನಿಮಾ ಕಾಪಿ ಮಾಡಿರುವುದು ಗೊತ್ತಾಗುತ್ತಿದೆ ಎಂದು ನೆಗೆಟಿವ್ ಕಾಮೆಂಟ್ಸ್ ಹಾಕುತ್ತಿದ್ದಾರೆ. ಮೊದಲಿನಿಂದಲೂ 'KGF' ಹಾಗೂ 'ಪುಷ್ಪ' ಚಿತ್ರಗಳ ನಡುವೆ ಕೆಲವರು ಹೋಲಿಕೆ ಮಾಡುತ್ತಾ ಬರುತ್ತಿದ್ದಾರೆ. ಚಿತ್ರದ ಪೋಸ್ಟರ್‌ಗಳಲ್ಲಿ ಅದು ಎದ್ದು ಕಂಡಿತ್ತು.

'KGF' ಚಿತ್ರದಲ್ಲಿ ಚಿನ್ನಕ್ಕಾಗಿ ರಾಕಿ ಭಾಯ್ ಕ್ರಿಮಿನಲ್ ಆಗ್ತಾನೆ. ಮುಂದೆ ಮಾಫಿಯಾ ಡಾನ್ ಕೂಡ ಆಗಿಬಿಡ್ತಾನೆ. 'ಪುಷ್ಪ' ಸರಣಿ ಚಿತ್ರದಲ್ಲಿ ರಕ್ತಚಂದನಕ್ಕಾಗಿ ಪುಷ್ಪರಾಜ್ ಜರ್ನಿ ಇದೆ. ಹೀಗೆ ಸಾಕಷ್ಟು ಸಾಮ್ಯತೆಗಳಿವೆ ಎನ್ನುವುದು ಕೆಲವರ ವಾದ. ಸದ್ಯ ಬಿಡುಗಡೆ ಆಗಿರುವ 'ಪುಷ್ಪ'-2 ಟ್ರೈಲರ್‌ನಲ್ಲಿರುವ ಒಂದಷ್ಟು ಫ್ರೇಮ್‌ಗಳು 'KGF' ಸರಣಿ ಸಿನಿಮಾಗಳನ್ನು ನೆನಪಿಸುತ್ತಿದೆ ಎಂದು ಕೆಲವರು ಸ್ಕ್ರೀನ್ ಶಾಟ್ ಸಮೇತ ಪೋಸ್ಟ್ ಮಾಡ್ತಿದ್ದಾರೆ.
ಇನ್ನು 'ಪುಷ್ಪ'ರಾಜ್ ನೋಟಿನ ಕಂತೆಗಳ ಮೇಲೆ ಕೂತಿರುವ ಪೋಸ್ಟರ್ ಸಹ ರಿಲೀಸ್ ಆಗಿದ್ದು ಇದು ಕೂಡ ಕಾಪಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದ ಹೆಲಿಕ್ಯಾಪ್ಟರ್ ಸನ್ನಿವೇಶಗಳು, ಪುಷ್ಪರಾಜ್ ನ್ಯಾಷನಲ್ ಅಲ್ಲ ಇಂಟರ್‌ನ್ಯಾಷನಲ್ ಎನ್ನುವುದು ಹೀಗೆ ಸಾಕಷ್ಟು ಸಾಮ್ಯತೆಗಳ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಮುಖ್ಯವಾಗಿ ಪುಷ್ಪರಾಜ್ ಜೀಪ್, ಬೈಕ್‌ಗಳ ಎದುರು ನಡೆದು ಬರುವುದು. ರಾಕಿ ಭಾಯ್ ಕಾದ ಬಂದೂಕಿನ ಕೊಳವೆಯಲ್ಲಿ ಸಿಗರೇಟ್ ಹಚ್ಚಿಕೊಂಡಂತೆ ಪುಷ್ಪರಾಜ್ ತನ್ನ ಭುಜದ ಮೇಲೆ ಹೊತ್ತಿಕೊಂಡ ಬೆಂಕಿಯಲ್ಲಿ ಸಿಗರೇಟ್ ಹಚ್ಚಿಕೊಳ್ಳುವುದು ಹೀಗೆ ಎಲ್ಲದಕ್ಕೂ ಹೋಲಿಕೆ ಮಾಡಿ ನೋಡುತ್ತಿದ್ದಾರೆ. ಟ್ರೈಲರ್ ಕೊನೆಗೆ 'ಪುಷ್ಪ'ರಾಜ್ ಮುಖಕ್ಕೆ ಪೆಟ್ಟಾಗಿ ರಕ್ತ ಸೋರುತ್ತಿರುವುದನ್ನು 'KGF'-2 ಸನ್ನಿವೇಶಕ್ಕೆ ಹೋಲಿಕೆ ಮಾಡುತ್ತಿದ್ದಾರೆ.

ಶಾರುಖ್ ಖಾನ್ ನಟನೆಯ 'ರಯೀಸ್' ಚಿತ್ರದ ಕೆಲ ಸನ್ನಿವೇಶಗಳ ಜೊತೆಗೂ 'ಪುಷ್ಪ'-2 ಟ್ರೈಲರ್ ಹಾಗೂ ಪೋಸ್ಟರ್ ಅನ್ನು ಕೆಲವರು ಹೋಲಿಕೆ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. 'ಪುಷ್ಪ'-2 ಟ್ರೈಲರ್ ಸೂಪರ್ ಎಂದು ಸಂಭ್ರಮಿಸುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ನೋಡೋದು ಫಿಕ್ಸ್ ಎಂದು ಕಾಯುತ್ತಿದ್ದಾರೆ.
ಸುಕುಮಾರ್ 'ಪುಷ್ಪ'-2 ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ ಶ್ರೀವಲ್ಲಿಯಾಗಿ ಮುಂದುವರೆದಿದ್ದಾರೆ. ಆಕೆಯ ಪಾತ್ರ ಸೀಕ್ವೆಲ್‌ನಲ್ಲಿ ಹೈಲೆಟ್ ಆಗುತ್ತದೆ ಎನ್ನುವುದು ಟ್ರೈಲರ್ ನೋಡಿದೆ ಅರ್ಥವಾಗುತ್ತಿದೆ. ಇನ್ನುಳಿದಂತೆ ಶೇಖಾವತ್ ಆಗಿ ಫಹಾದ್ ಫಾಸಿಲ್ ಅಬ್ಬರಿಸಿದ್ದಾರೆ. ಪುಷ್ಪರಾಜ್ ಅಕ್ರಮವಾಗಿ ಸಾಮ್ರಾಜ್ಯ ನಿರ್ಮಾಣಕ್ಕೆ ಪೊಲೀಸ್ ಆಫೀಸರ್ ಆಗಿ ಅಡ್ಡಗಾಲು ಹಾಕುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಸೆಂಬರ್ 5ಕ್ಕೆ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. ಶ್ರೀಲೀಲಾ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಅದರ ಝಲಕ್ ಮಾತ್ರ ಟ್ರೈಲರ್‌ನಲ್ಲಿ ನೋಡಬಹುದು. ಶೀಘ್ರದಲ್ಲೇ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ತೆರೆಮೇಲೆ ಪುಷ್ಪರಾಜ್ ಆರ್ಭಟ ಹೇಗಿರುತ್ತೋ ಕಾದು ನೋಡಬೇಕು.


Click it and Unblock the Notifications











