ಮಣಿರತ್ನಂ ಗ್ರೇಟಾ? ರಾಜಮೌಳಿ ಗ್ರೇಟಾ? 'ಬಾಹುಬಲಿ- 2'ಗಿಂತ 'ಪೊನ್ನಿಯಿನ್ ಸೆಲ್ವನ್- 2' ಅದ್ಭುತ ಅಂತೆ!

ಮೌಳಿ ಸಾರಥ್ಯದ 'ಬಾಹುಬಲಿ' ಸರಣಿ ಹಾಗೂ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'.. ಇವೆರಡರಲ್ಲಿ ಯಾವ ಸಿನಿಮಾ ಚೆನ್ನಾಗಿದೆ ಎನ್ನುವ ಚರ್ಚೆ ಮತ್ತೆ ಶುರುವಾಗಿದೆ. ಕಳೆದ ವರ್ಷ ಕೂಡ ಇಂತದ್ದೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ರಾಜಮೌಳಿ 'ಬಾಹುಬಲಿ' ಸಿನಿಮಾ ಮಾಡಿದ್ದಕ್ಕೆ ನಾನು 'ಪೊನ್ನಿಯಿನ್ ಸೆಲ್ವನ್' ಕನಸು ಕಾಣಲು ಸಾಧ್ಯವಾಯ್ತು ಅಂತ ಸ್ವತಃ ಮಣಿರತ್ನಂ ಹೇಳಿದ್ದರು.

ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾ ನಟನೆಯ 'ಪೊನ್ನಿಯಿನ್ ಸೆಲ್ವನ್' ಸರಣಿಯ 2ನೇ ಸಿನಿಮಾ ರಿಲೀಸ್ ಆಗಿದೆ. ಮಣಿರತ್ನಂ ಬಹಳ ಸೊಗಸಾಗಿ ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದಾರೆ. ಆದರೆ ಕೆಲವರು ಮಾತ್ರ ಎರಡೂ ಸಿನಿಮಾಗಳನ್ನು ಹೋಲಿಸಿ ನೋಡಲು ಪ್ರಯತ್ನ ಮಾಡುತ್ತಿದ್ದಾರೆ. ಎರಡೂ ಕೂಡ ಕಾಸ್ಟ್ಯೂಮ್‌ ಡ್ರಾಮಾ ಸಿನಿಮಾಗಳೇ. ಆದರೆ ರಾಜಮೌಳಿ ಒಂದು ಕಾಲ್ಪನಿಕ ಕಥೆಯನ್ನು ತೆರೆಗೆ ತಂದಿದ್ದರು. ಆದರೆ ಮಣಿರತ್ನಂ ಕಲ್ಕಿ ಕೃಷ್ಣಮೂರ್ತಿ ಬರೆದ ಐತಿಹಾಸಿಕ ಕಥಾಹಂದರ ಕಾದಂಬರಿ ಆಧರಿಸಿ ಸಿನಿಮಾ ಮಾಡಿದ್ದಾರೆ.

Netizens comparing Mani Ratnams Ponniyin Selvan -2 With Rajamouli Directed Baahubali -2

ಕಳೆದ ವರ್ಷ 'ಪೊನ್ನಿಯಿನ್ ಸೆಲ್ವನ್'- 1 ಸಿನಿಮಾ ಬಿಡುಗಡೆಯಾದಾಗಲೇ 'ಬಾಹುಬಲಿ' ಜೊತೆ ಹೋಲಿಕೆ ಶುರುವಾಗಿದೆ. ಮನರಂಜನೆ, ಮೇಕಿಂಗ್, ಎಲಿವೇಷನ್ ಸೀನ್ಸ್, ವಾರ್ ಸೀಕ್ವೆನ್ಸ್ ನೋಡಿದರೆ 'ಬಾಹುಬಲಿ' ಅದ್ಭುತ ಸಿನಿಮಾ. ಅಂತಹ ಕಮರ್ಷಿಶಲ್ ಅಂಶಗಳು ಮಣಿರತ್ನಂ ಸಿನಿಮಾದಲ್ಲಿ ಇಲ್ಲ ಎನ್ನುವ ವಾದವನ್ನು ತೆಲುಗಿನ ಕೆಲ ನೆಟ್ಟಿಗರು ಮುಂದಿಟ್ಟರು. ಮೌಳಿ ಹೇಳಿದ್ದು ಕಲ್ಪಿತ ಕಥೆ. ಅದರಲ್ಲಿ ರಿಯಾಲಿಟಿಗೆ ದೂರವಾದ ಸನ್ನಿವೇಶಗಳು ಜಾಸ್ತಿ ಇವೆ. ಲಾಜಿಕ್ ಇಲ್ಲದ ಯುದ್ಧ ಸನ್ನಿವೇಶಗಳನ್ನು ಯಾರು ನಂಬುತ್ತಾರೆ? ಮಣಿರತ್ನಂ ಹೇಳಿರುವುದು ಐತಿಹಾಸಿಕ ಕಥೆ. ಇದರಲ್ಲಿ ಅಂತಹ ಲಾಜಿಕ್ ಇಲ್ಲದ ಸನ್ನಿವೇಶಗಳಿಗೆ ಜಾಗ ಇಲ್ಲ ಎಂದು ತಮಿಳಿನ ಕೆಲ ನೆಟ್ಟಿಗರು ಹೇಳಿದ್ದರು.

'ಬಾಹುಬಲಿ' ಗ್ರೇಟ್ ಅಂತ ಕೆಲವರು, 'ಪೊನ್ನಿಯಿನ್ ಸೆಲ್ವನ್' ಗ್ರೇಟ್ ಅಂತ ಮತ್ತೆ ಕೆಲವರು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಫನ್ನಿ ಮೀಮ್ಸ್ ಕ್ರಿಯೇಟ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು. ತೆಲುಗು ಪ್ರೇಕ್ಷಕರು 'ಬಾಹುಬಲಿ' ಮುಂದೆ 'ಪೊನ್ನಿಯಿನ್ ಸೆಲ್ವನ್' ಏನೇನು ಅಲ್ಲ ಎಂದು ಗೇಲಿ ಮಾಡಿದ್ದರು. ಟಾಲಿವುಡ್‌ನಲ್ಲಿ ಸಿನಿಮಾ ಸದ್ದು ಮಾಡಲೇಯಿಲ್ಲ. ನಿಜ ಹೇಳಬೇಕು ಅಂದ್ರೆ ತಮಿಳುನಾಡು ಬಿಟ್ಟು ಹೊರಗಡೆ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಲಿಲ್ಲ.

Netizens comparing Mani Ratnams Ponniyin Selvan -2 With Rajamouli Directed Baahubali -2

ಸದ್ಯ 'ಪೊನ್ನಿಯಿನ್ ಸೆಲ್ವನ್' -2 ಸಿನಿಮಾ ರಿಲೀಸ್ ಆಗಿ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ಭಾಗಕ್ಕಿಂತಲೂ ಉತ್ತಮವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೇ ಸಮಯದಲ್ಲಿ ಕೆಲವರು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ 2 ಸಿನಿಮಾಗಳ ನಡುವೆ ಹೋಲಿಕೆ ಆರಂಭಿಸಿದ್ದಾರೆ. ರಾಜಮೌಳಿಗಿಂತ ಮಣಿರತ್ನಂ ಗ್ರೇಟ್. ಯಾವ್ದೋ ಕಾಲ್ಪನಿಕ ಸಿನಿಮಾ ಮಾಡೋದಲ್ಲ. ಈ ತರ ಸಿನಿಮಾ ಮಾಡಬೇಕು. ಒಮ್ಮೆ ನೋಡಿ ಎಂದು ಕ್ಯಾತೆ ತೆಗೆದಿದ್ದಾರೆ. ಇದಕ್ಕೆ ಕೌಂಟರ್ ಕೊಡುವವರು ಇದ್ದಾರೆ.

'ಬಾಹುಬಲಿ'- 2 ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ತಮಿಳಿನ ಯಾವುದೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಈವರೆಗೆ ಇಷ್ಟು ಗಳಿಕೆ ಕಂಡಿಲ್ಲ. ಮೊದಲ 1000 ಕೋಟಿ ಕ್ಲಬ್‌ಗೆ ನಿಮ್ಮದು ಒಂದಾದ್ರು ಸಿನಿಮಾ ಸೇರಲಿ, ಆಮೇಲೆ ಮಾತಾಡಿ ಸೇರಲಿ ಎಂದು ತೆಲುಗಿನ ಮಂದಿ ಕೌಂಟರ್ ಕೊಡುತ್ತಿದ್ದಾರೆ. 'ಪೊನ್ನಿಯಿನ್ ಸೆಲ್ವನ್' -2 ಸಿನಿಮಾ ಬಾಕ್ಸಾಫೀಸ್‌ಲ್ಲಿ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಪ್ರೀಕ್ವೆಲ್ 500 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

Netizens comparing Mani Ratnams Ponniyin Selvan -2 With Rajamouli Directed Baahubali -2

ಪ್ರೀಕ್ವೆಲ್ ಬಂದ 6 ತಿಂಗಳಲ್ಲೇ ಮಣಿರತ್ನಂ ಸೀಕ್ವೆಲ್‌ ಅನ್ನು ಕೂಡ ತೆರೆಗೆ ತಂದಿದ್ದಾರೆ. ಇಷ್ಟು ದೊಡ್ಡ ಚಿತ್ರದ 2ನೇ ಭಾಗವನ್ನು ಇಷ್ಟು ಬೇಗ ರಿಲೀಸ್ ಮಾಡಿದ್ದು ಅಚ್ಚರಿ ತಂದಿದೆ. ಆದರೆ ಒಮ್ಮೆ 2 ಸಿನಿಮಾಗಳ ಚಿತ್ರೀಕರಣ ನಡೆಸಿದ್ದರಿಂದ ಇದು ಸಾಧ್ಯವಾಗಿದೆ. ಸರಣಿಯ ಮೊದಲ ಸಿನಿಮಾ ತಮಿಳುನಾಡಿನಲ್ಲಿ ಮಾತ್ರ ಸಕ್ಸಸ್ ಕಂಡಿತ್ತು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಸಿಗಲಿಲ್ಲ. ಹಾಗಾಗಿ 'ಪೊನ್ನಿಯಿನ್ ಸೆಲ್ವನ್' -2 ಸಿನಿಮಾ ಬಗ್ಗೆ ಹೈಪ್ ಕಮ್ಮಿ ಇತ್ತು. ಅದಕ್ಕೆ ತಕ್ಕಂತೆ ಓಪನಿಂಗ್ ಕೂಡ ಹೇಳಿಕೊಳ್ಳುವಂತೆ ಇಲ್ಲ. ಸಿನಿಮಾ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Netizens comparing Mani Ratnam's Ponniyin Selvan -2 With Rajamouli Directed Baahubali -2. Vikram, Aishwarya Rai, Karthi Starrer Ponniyin Selvan 2 has hit the theatres and opened to fantastic reviews. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X