ವಿಜಯ್ ದೇವರಕೊಂಡ ವಿರುದ್ಧ ಭುಗಿಲೆದ್ದ ಆಕ್ರೋಶ ; ದಿ ಫ್ಯಾಮಿಲಿ ಸ್ಟಾರ್‌ನಲ್ಲಿ ಅಂತದ್ದೇನಿದೆ..?

ಅಂಗೈಯಲ್ಲಿ ಮನರಂಜನೆ ಸಿಗುವ ಕಾಲ ಇದು.. ಈ ಕಾಲದಲ್ಲಿ ಪ್ರೇಕ್ಷಕರ ಕಣ್ಣಿಗೆ ಮಣ್ಣೇರಚಿ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ. ಚಿತ್ರಮಂದಿರದಲ್ಲಿ ಒಂದೇ ಗುಕ್ಕಿನಲ್ಲಿ ಚಿತ್ರ ನೋಡುವ ಕಾರಣಕ್ಕೆ, ಆ ತಪ್ಪು ಆ ಕ್ಷಣಕ್ಕೆ ಕಾಣಿಸದೇ ಇದ್ದರೂ, ಓಟಿಟಿಯಲ್ಲಿ ತಪ್ಪು ಎದ್ದು ಕಾಣುತ್ತೆ. ವಿಜಯ್ ದೇವರಕೊಂಡ ಅಭಿನಯದ ದಿ ಫ್ಯಾಮಿಲಿ ಸ್ಟಾರ್ ಇದಕ್ಕೆ ಸದ್ಯದ ಉದಾಹರಣೆ.

ಹೌದು, ಚಿತ್ರಮಂದಿರದಲ್ಲಿ ಹೀನಾಯವಾಗಿ ಸೋತ ದಿ ಫ್ಯಾಮಿಲಿ ಸ್ಟಾರ್ ಸಿನಿಮಾ, ಓಟಿಟಿಯಲ್ಲಿ ಬಂದಿದೆ. ವಿವಾದವೊಂದನ್ನು ಹುಟ್ಟು ಹಾಕಿದೆ. ಅಸಲಿಗೆ ಈ ಚಿತ್ರದ ದೃಶ್ಯವೊಂದರಲ್ಲಿ, ಖಳನಾಯಕ ಚಿತ್ರದ ಕಥಾನಾಯಕ ಗೋವರ್ಧನ್ ಅಂದರೆ ವಿಜಯ್ ದೇವರಕೊಂಡ ಅವರ ಮನೆಗೆ ನುಗ್ಗುತ್ತಾನೆ. ವಿಜಯ್ ದೇವರಕೊಂಡ ಅವರ ಅತ್ತಿಗೆಯ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ. ಸಹಜವಾಗಿ ಚಿತ್ರದ ಹೀರೋ ರಕ್ತ ಕುದಿಯುತ್ತೆ. ಆ ನಂತರ ಹೊಡೆದಾಟವೂ ಆಗುತ್ತೆ. ಆದರೆ, ಆ ನಂತರ ಥೇಟ್ ಪುಡಿ ರೌಡಿಗಳ ಶೈಲಿಯಲ್ಲಿಯೇ ವಿಜಯ್ ದೇವರಕೊಂಡ ಪಾತ್ರ ರೌಡಿ ಪಾತ್ರಕ್ಕೆ ಬೆದರಿಕೆಯನ್ನ ಹಾಕುತ್ತೆ.

Read more at https kannada filmibeat com telugu netizens-express-outrage-over-disturbing-dialogue-in-the-family-man-criticizing-vijay-deverakonda-082803 html

ಅತ್ಯಾಚಾರದ ಬೆದರಿಕೆಯನ್ನ ಹೊಂದಿರುವ ಈ ದೃಶ್ಯ, ಅನೇಕರನ್ನ ಈಗ ಕೆರಳಿಸಿದೆ. ಈ ತರಹದ ಚಿತ್ರ ಮತ್ತು ಪಾತ್ರ ವಿಜಯ್ ದೇವರಕೊಂಡ ಎಂಬ ವ್ಯಕ್ತಿಯಿಂದ ಮಾತ್ರ ಮಾಡಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ವಿಜಯ್ ದೇವರಕೊಂಡ ಅವರಿಗೆ ಮಹಿಳೆಯರ ಮೇಲಿರುವ ಗೌರವ ಎಂತಹದ್ದು ಎಂದು ತಿಳಿಯಲು ಇದೊಂದೆ ದೃಶ್ಯ ಸಾಕು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

ಇಷ್ಟೇ ಅಲ್ಲ ವಿಜಯ್ ದೇವರಕೊಂಡ ಅಭಿಮಾನಿಗಳೇ, ಈ ಸಂಭಾಷಣೆಯನ್ನ ಸಮರ್ಥಿಸಿಕೊಳ್ಳಲ್ಲ ಎನ್ನುತ್ತಿರುವ ಅನೇಕರು.. ವಿಜಯ್ ದೇವರಕೊಂಡ ನಟನೆಯಿಂದ ನಿವೃತ್ತಿಯಾಗಲು ಇದು ಸಕಾಲ ಎನ್ನುತ್ತಿದ್ದಾರೆ. ತೆಲುಗು ಚಿತ್ರರಂಗಕ್ಕಷ್ಟೇ ಅಲ್ಲ, ಭಾರತೀಯ ಚಿತ್ರರಂಗಕ್ಕೆ ವಿಜಯ್ ದೇವರಕೊಂಡ ಕಪ್ಪುಚುಕ್ಕೆ ಎಂದು ಆಕ್ರೋಶವನ್ನೂ ಕೂಡ ಹೊರ ಹಾಕುತ್ತಿದ್ದಾರೆ.

ಅಂದ್ಹಾಗೇ ಫ್ಯಾಮಿಲಿ ಸ್ಟಾರ್ ಚಿತ್ರವನ್ನ ನಿರ್ದೇಶಿಸಿರುವುದು ಪರಶುರಾಮ. ವಿಜಯ್ ದೇವರಕೊಂಡ ಪಾಲಿಗೆ ಮರೆಯಲಾಗದ ಸಿನಿಮಾ ಎಂದೇ ಪರಿಗಣಿಸಲ್ಪಟ್ಟಿರುವ ಗೀತಾ ಗೋವಿಂದಂ ಚಿತ್ರವನ್ನ ನಿರ್ದೇಶಿಸಿದ್ದವರು ಇದೇ ಪರಶುರಾಮ.

ಈ ಎಲ್ಲ ಕಾರಣಕ್ಕೆ.. ಫ್ಯಾಮಿಲಿ ಸ್ಟಾರ್ ಚಿತ್ರದ ಮೇಲೆ ನಿರೀಕ್ಷೆ ಇತ್ತು. ಫ್ಯಾಮಿಲಿ ಸ್ಟಾರ್ ಸದಭಿರುಚಿ ಸಿನಿಮಾ ಆಗಿರಲಿದೆ ಅನ್ನುವ ಭರವಸೆ ಇತ್ತು. ಆದರೆ..ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದು ಕೇವಲ 20 ಕೋಟಿಯನ್ನಷ್ಟೇ ಗಳಿಸಿದ ಈ ಫ್ಯಾಮಿಲಿ ಸ್ಟಾರ್ ನಿರೀಕ್ಷೆಯನ್ನ ಹುಸಿ ಮಾಡಿತ್ತು. ಈಗ ವಿವಾದಕ್ಕೀಡಾದ ಸನ್ನಿವೇಶದ ಮೂಲಕ ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಪರಶುರಾಮ ಭರವಸೆಯನ್ನೂ ಕೂಡ ಕಳೆದುಕೊಂಡಿದ್ದಾರೆ.


More from Filmibeat

English summary
The Family Star was released online on April 26, 2024. Many people who didn’t watch it in theatres caught up on the Vijay and Mrunal starrer online. However, the Arjun Reddy star is receiving backlash for a certain dialogue in the Parasuram directorial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X