For Quick Alerts
  ALLOW NOTIFICATIONS  
  For Daily Alerts

  ಕೈ ಸನ್ನೆ.. ಕಣ್ಸನ್ನೆ.. ಸೂತಕದ ಮನೆಯಲ್ಲೂ ನರೇಶ್- ಪವಿತ್ರಾ ಲೋಕೇಶ್ ಡ್ರಾಮಾ: ಮಹೇಶ್‌ ಬಾಬುಗೂ ಮುಜುಗರ!

  |

  ಇತ್ತೀಚೆಗೆ ತೆಲುಗು ನಟ ಸೂಪರ್ ಸ್ಟಾರ್ ಕೃಷ್ಣ ಕೊನೆಯುಸಿರೆಳೆದಿದ್ದರು. ಇಡೀ ತೆಲುಗು ಚಿತ್ರರಂಗ ಹಾಗೂ ಅಭಿಮಾನಿಗಳು ನಟಶೇಖರನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಆದರೆ ಅಲ್ಲೂ ನಟ ನರೇಶ್ ಜೊತೆ ನಟಿ ಪವಿತ್ರಾ ಲೋಕೇಶ್ ಕಾಣಿಸಿಕೊಂಡಿದ್ದರು. ಈ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

  ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರೆ. ಇಬ್ಬರೂ ಲಿವ್‌ ಇನ್‌ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಈ ಬಗ್ಗೆ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪವಿತ್ರಾ ಲೋಕೇಶ್‌ ಕಾರಣದಿಂದಲೇ ನನ್ನ ಹಾಗೂ ನರೇಶ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಆರೋಪಿಸಿದ್ದರು. ನಂತರ ನಾವಿಬ್ಬರು ಬರೀ ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ್ದು, ನಂತರ ಇಬ್ಬರು ಒಂದೇ ಹೋಟೆಲ್ ಕೋಣೆಯಲ್ಲಿ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿ ಆಗಿತ್ತು. ಇತ್ತೀಚೆಗೆ ನಟ ಕೃಷ್ಣ ನಿಧನರಾದಾಗ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೂ ಪವಿತ್ರಾ ಲೋಕೇಶ್ ಹೋಗಿದ್ದರು.

  ತೆರೆಮೇಲೆ 'ಪವಿತ್ರ ಪ್ರೇಮಕಥೆ'? ನಾಯಕ- ನಾಯಕಿಯಾಗಿ ನರೇಶ್- ಪವಿತ್ರಾ ಲೋಕೇಶ್!ತೆರೆಮೇಲೆ 'ಪವಿತ್ರ ಪ್ರೇಮಕಥೆ'? ನಾಯಕ- ನಾಯಕಿಯಾಗಿ ನರೇಶ್- ಪವಿತ್ರಾ ಲೋಕೇಶ್!

  ಸೂಪರ್ ಸ್ಟಾರ್ ಕೃಷ್ಣ ಅವರು ಕಾರ್ಡಿಯಾಟಿಕ್ ಅರೆಸ್ಟ್ ಆಗಿ ಆಸ್ಪತ್ರೆ ಸೇರುತ್ತಿದ್ದಂತೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಆಸ್ಪತ್ರೆಗೆ ಬಂದಿದ್ದರು. ವೈದ್ಯ ಬಳಿ ಕೃಷ್ಣ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು. ಇನ್ನು ಕೃಷ್ಣ ಅಂತಿಮ ದರ್ಶನ, ಅಂತಿಮ ಯಾತ್ರೆಯಲ್ಲೂ ಪವಿತ್ರಾ ಲೋಕೇಶ್ ಭಾಗಿ ಆಗಿದ್ದರು.

  ರಮ್ಯಾ ನೋಡಿ ನರೇಶ್- ಪವಿತ್ರಾ ಶಾಕ್

  ರಮ್ಯಾ ನೋಡಿ ನರೇಶ್- ಪವಿತ್ರಾ ಶಾಕ್

  ನಟ ಕೃಷ್ಣ ನಿಧನರಾಗುತ್ತಿದ್ದಂತೆ ಪುತ್ರ ನರೇಶ್ ಅಲ್ಲೇ ಇದ್ದು ಮುಂದಿನ ಕಾರ್ಯಕ್ರಮಗಳನ್ನು ಹತ್ತಿರ ಇದ್ದು ನೋಡಿಕೊಂಡಿದ್ದರು. ಕೃಷ್ಣ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಬಂದವರನ್ನು ಆಹ್ವಾನಿಸೋದು, ಮಾತನಾಡಿಸೋದು ಮಾಡುತ್ತಿದ್ದರು. ಜೊತೆಗೆ ಪವಿತ್ರಾ ಲೋಕೇಶ್ ಕೂಡ ಇದ್ದರು. ಅಲ್ಲಿಗೆ ಇದ್ದಕ್ಕಿದಂತೆ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಎಂಟ್ರಿ ಆಗಿತ್ತು. ಮಾವನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಲು ಆಕೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗಿದ್ದರು. ಆಕೆಯನ್ನು ನೋಡಿ ಇಬ್ಬರು ಶಾಕ್ ಆಗಿದ್ದರು. ಕೆಲವೊತ್ತು ಮುಜುಗರಕ್ಕೀಡಾಗಿದ್ದರು.

  "ನೀವು ಹೆಮ್ಮೆ ಪಡುವಂತೆ ಸಾಧಿಸಿ ತೋರಿಸುತ್ತೇನೆ": ತಾತನನ್ನು ನೆನೆದು ಮಹೇಶ್ ಬಾಬು ಪುತ್ರಿ ಸಿತಾರ ಭಾವುಕ

  ಕೈ ಸನ್ನೆ.. ಕಣ್ಸನ್ನೆ

  ಕೈ ಸನ್ನೆ.. ಕಣ್ಸನ್ನೆ

  ನಟ ನರೇಶ್ ಈಗಾಗಲೇ 3 ಮದುವೆ ಆಗಿದ್ದಾರೆ. ಪವಿತ್ರಾ ಲೋಕೇಶ್ ಜೊತೆ ಸಹಜೀವನದ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆಯೂ ಆಕೆಯನ್ನು ಕೃಷ್ಣ ಅಂತಿಮ ದರ್ಶನಕ್ಕೆ ಕರೆದುಕೊಂಡು ಬಂದಿದ್ದು ಘಟ್ಟಮನೇನಿ ಕುಟುಂಬಕ್ಕೂ ಇಷ್ಟವಾಗಿಲ್ಲ. ಚಿತ್ರರಂಗದವರು ಕೂಡ ಅಂತಿಮ ನಮನ ಸಲ್ಲಿಸಲು ಬಂದಿದ್ದರು. ಆಕೆ ಕೂಟ ನಟಿ ಎನ್ನುವ ಕಾರಣಕ್ಕೆ ಕೆಲವರು ಸುಮ್ಮನಿದ್ದರು. ಇನ್ನು ಸೂತಕದ ಮನೆಯಲ್ಲಿ ನರೇಶ್ ಬಿಹೇವಿಯರ್, ಅವರಿಬ್ಬರ ಎಕ್ಸ್‌ಪ್ರೇಷನ್ ಸ್ಕ್ರೀನ್‌ ಶಾಟ್ ತೆಗೆದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೀರು ಕುಡಿತ್ತೀರಾ? ಇನ್ನು ಎಷ್ಟು ಹೊತ್ತು? ಎನ್ನುವಂತೆ ಪವಿತ್ರಾ ಲೋಕೇಶ್ ಕಣ್ಸನ್ನೆ ಕೆಲವರಿಗೆ ಬೇಸರ ತರಿಸಿತ್ತು. ನರೇಶ್ ಆಕೆಯ ಭುಜದ ಮೇಲೆ ಕೈ ಹಾಕುವುದು, ಆಕೆ ನರೇಶ್ ಕಡೆ ನೋಡುವುದು ಹೀಗೆ ಭಾರೀ ಡ್ರಾಮಾ ನಡೀತು.

  ನಟ ಕೃಷ್ಣ ಆಪ್ತರ ಅಸಮಾಧಾನ

  ನಟ ಕೃಷ್ಣ ಆಪ್ತರ ಅಸಮಾಧಾನ

  ಇನ್ನು ಕೃಷ್ಣ ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲೂ ನಟಿ ಪವಿತ್ರಾ ಲೋಕೇಶ್ ಕಾಣಿಸಿಕೊಂಡಿದ್ದರು. ನೆಟ್ಟಿಗರು ಮಾತ್ರವಲ್ಲ ಘಟ್ಟಮನೇನಿ ಫ್ಯಾಮಿಲಿ ಆಪ್ತರಿಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಓವರ್ ಆಕ್ಷನ್ ಇಷ್ಟವಾಗಲಿಲ್ಲ. ಈ ಬಗ್ಗೆ ಕೆಲವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು ಎನ್ನುವಂತೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮಿಬ್ಬರ ಆತ್ಮೀಯ ಅನುಬಂಧದ ಬಗ್ಗೆ ಜಗಜಾಹೀರು ಮಾಡಲು ಬೇಕೆಂದೇ ಹೀಗೆಲ್ಲಾ ಮಾಡಿದರು ಎಂದು ಕೆಲವರು ಹೇಳುತ್ತಿದ್ದಾರೆ.

  ಪವಿತ್ರ ಸಂಬಂಧದ ಬಗ್ಗೆ ಸಿನಿಮಾ

  ಪವಿತ್ರ ಸಂಬಂಧದ ಬಗ್ಗೆ ಸಿನಿಮಾ

  ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ತಮ್ಮಿಬ್ಬರ ಸ್ನೇಹ ಸಂಬಂಧದ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ತಮ್ಮಿಬ್ಬರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಂಗತಿಗಳನ್ನೇ ಚಿತ್ರದಲ್ಲಿ ಹೇಳುತ್ತಾರಂತೆ. ತಾವೇ ಲೀಡ್ ರೋಲ್‌ಗಳಲ್ಲಿ ನಟಿಸೋಕೆ ಮುಂದಾಗಿದ್ದಾರಂತೆ. ಪರ್ಸನಲ್, ಪ್ರೋಫೆಷನಲ್ ಲೈಫ್‌ನಲ್ಲಿ ಎದುರಿಸಿದ ಸವಾಲುಗಳನ್ನು ಸೇರಿಸಿ ಈ ಮೆಚ್ಯೂರ್ಡ್ ಲವ್ ಸ್ಟೋರಿ ಸಿನಿಮಾ ಮಾಡುತ್ತಾರಂತೆ. ಶೀಘ್ರದಲ್ಲೇ ಆ ಸಿನಿಮಾ ಘೋಷಣೆ ಆಗುತ್ತೆ ಎನ್ನಲಾಗುತ್ತಿದೆ.

  English summary
  Netizens fire on Naresh And Pavithra Lokesh's Behaviour in Krishna's Final Rites. actor Naresh and Pavitri Lokesh felt embarrassed when Naresh's 3rd wife Ramya Raghupathi confronted them. Know More.
  Wednesday, November 23, 2022, 15:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X