For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ 'ಬಿಗ್ ಬಾಸ್' ನಡೆಸಿಕೊಟ್ಟ ಸಮಂತಾಗೆ ಅಭಿಮಾನಿಗಳು ಫಿದಾ

  |

  ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಮೊದಲ ಬಾರಿಗೆ ಬಿಗ್ ಬಾಸ್ ರಿಯಾಲಿಟ್ ಶೋ ನಡೆಸಿಕೊಟ್ಟಿದ್ದಾರೆ. ಸಮಂತಾ ನಿರೂಪಣೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆಲುಗು ಬಿಗ್ ಬಾಸ್ ಸೀಸನ್ 4 ನಡೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ಅನ್ನು ನಟ ನಾಗಾರ್ಜುನ ನಡೆಸಿಕೊಡುತ್ತಿದ್ದಾರೆ. ಆದರೆ ಈ ವಾರ ನಾಗಾರ್ಜುನ ಸೊಸೆ ನಟಿ ಸಮಂತಾ ಹೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಸಮಂತಾ ಎಂಟ್ರಿ ವೀಕ್ಷಕರಿಗೆ ಮಾತ್ರವಲ್ಲ, ಬಿಗ್ ಬಾಸ್ ಸ್ಪರ್ಧಿಗಳಿಗೂ ಅಚ್ಚರಿವುಂಟು ಮಾಡಿದೆ. ಸಮಂತಾ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ದಸರಾ ಹಬ್ಬದ ವಿಶೇಷ ಸಮಯದಲ್ಲಿ ಕಿರುತೆರೆ ವೀಕ್ಷಕರು ಸಮಂತಾ ನೋಡಿ ಫುಲ್ ಖುಷ್ ಆಗಿದ್ದಾರೆ. ಮುಂದೆ ಓದಿ...

  ತೆಲುಗು ಬಿಗ್‌ಬಾಸ್‌ನಲ್ಲಿ ಟ್ವಿಸ್ಟ್: ನಾಗಾರ್ಜುನ ಬದಲಿಗೆ ಸಮಂತಾ ಎಂಟ್ರಿ!ತೆಲುಗು ಬಿಗ್‌ಬಾಸ್‌ನಲ್ಲಿ ಟ್ವಿಸ್ಟ್: ನಾಗಾರ್ಜುನ ಬದಲಿಗೆ ಸಮಂತಾ ಎಂಟ್ರಿ!

  ಮೊದಲ ಬಾರಿಗೆ ಬಿಗ್ ಬಾಸ್ ನಡೆಸಿಕೊಟ್ಟ ಸಮಂತಾ

  ಮೊದಲ ಬಾರಿಗೆ ಬಿಗ್ ಬಾಸ್ ನಡೆಸಿಕೊಟ್ಟ ಸಮಂತಾ

  ಅಂದ್ಹಾಗೆ ಮೊದಲ ಬಾರಿಗೆ ಬಿಗ್ ಬಾಸ್ ನಡೆಸಿಕೊಟ್ಟ ಸಮಂತಾಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಗ್ ಬಾಸ್ ನೋಡದವರೆಲ್ಲ ಸಮಂತಾಗಾಗಿ ಬಿಗ್ ಬಾಸ್ ನೋಡಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ನಿರೂಪಣೆಯನ್ನು ನೋಡಲು ಮತ್ತೆ ಮತ್ತೆ ಬಿಗ್ ನೋಡುತ್ತಿದ್ದೇವೆ ಎನ್ನುವ ಕಾಮೆಂಟ್ಸ್ ಹರಿದುಬರುತ್ತಿದೆ. ಇನ್ನೂ ಕೆಲವರು ಬಿಗ್ ಬಾಸ್ ಶೋ ಅನ್ನು ಸಮಂತಾ ಅವರೇ ನಡೆಸಿಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ.

  ಸಮಂತಾಗೆ ಅಭಿಮಾನಿಗಳು ಫಿದಾ

  ಸಮಂತಾಗೆ ಅಭಿಮಾನಿಗಳು ಫಿದಾ

  3 ರಿಂದ 4 ಗಂಟೆ ಕಣ್ಣು ಮಿಟುಕಿಸದೆ ಬಿಗ್ ಬಾಸ್ ನೋಡಿದ್ದೇವೆ ಎಂದು ಕೆಲವರು ಕಾಮೆಂಟ್ಸ್ ಮಾಡಿದ್ರೆ, ಇನ್ನು ಕೆಲವರು ಸಮಂತಾಗೆ ನಿರರ್ಗಳವಾಗಿ ತೆಲುಗು ಮಾತನಾಡಲು ಬರಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಸಮಂತಾ ನಡೆಸಿಕೊಟ್ಟ ರೀತಿಗೆ ಅಭಿಮಾನಿಗಳು ಮನಸೋತಿದ್ದಾರೆ. ಕಿರುತೆರೆಯಲ್ಲಿ ಸಮಂತಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

  ಚಿತ್ರೀಕರಣದಲ್ಲಿ ನಾಗಾರ್ಜುನ

  ಚಿತ್ರೀಕರಣದಲ್ಲಿ ನಾಗಾರ್ಜುನ

  ಕೆಂಪು ಬಣ್ಣದ ಬಾರ್ಡರ್ ಸೀರೆ ಧರಿಸಿದ್ದ ಸಮಂತಾ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅಂದ್ಹಾಗೆ ಈ ವಾರ ಸಮಂತಾ ನಡೆಸಿಕೊಡಲು ಕಾರಣ ನಾಗಾರ್ಜುನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವೈಲ್ಡ್ ಡಾಗ್ ಸಿನಿಮಾದ ಚಿತ್ರೀಕರಣಕ್ಕಾಗಿ ಹಿಮಾಲಯಕ್ಕೆ ಹೋಗಿದ್ದಾರಂತೆ. ಹಾಗಾಗಿ ಸಮಂತಾ ನಡೆಸಿಕೊಟ್ಟಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada
  ಮುಂದಿನ ವಾರವೂ ಹೋಸ್ಟ್ ಮಾಡಲಿದ್ದಾರೆ ಸಮಂತಾ?

  ಮುಂದಿನ ವಾರವೂ ಹೋಸ್ಟ್ ಮಾಡಲಿದ್ದಾರೆ ಸಮಂತಾ?

  ಈ ವಾರ ಮಾತ್ರವಲ್ಲದೆ ಮುಂದಿನ ವಾರವೂ ಸಹ ಸಮಂತಾ ಅವರೇ ಬಿಗ್ ಬಾಸ್ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಪ್ರಾರಂಭವಾಗುವ ಮೊದಲು ಈ ಬಾರಿಯ ಬಿಗ್ ಬಾಸ್ ಅನ್ನು ಸಮಂತಾ ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಎರಡು ವಾರ ನಡೆಸಿಕೊಡುವ ಮೂಲಕ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ.

  English summary
  Netizens praise for samantha akkineni's bigg boss host.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X