50 ವರ್ಷದ ಅಂಕಲ್, ವಡಾ-ಪಾವ್, ವಯಸ್ಸಾಗಿದೆ: ಬಾಲಿವುಡ್‌ನಲ್ಲಿ ಪ್ರಭಾಸ್ ಹಿಗ್ಗಾಮುಗ್ಗಾ ಟ್ರೋಲ್

ಟಾಲಿವುಡ್ ಹೀರೋ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್, ಬಾಲಿವುಡ್ ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆದಿಪುರುಷ್ ಮತ್ತ ರಾಧೆ ಶ್ಯಾಮ್ ರೀ-ಶೂಟ್‌ನಲ್ಲಿ ಪ್ರಭಾಸ್ ನಿರತರಾಗಿದ್ದಾರೆ. ಇತ್ತೀಚಿಗಷ್ಟೆ ಸಲಾರ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಗಿಸಿ ಇತ್ತೀಚಿಗಷ್ಟೆ ಆದಿಪುರುಷ್ ಸಿನಿಮಾ ಸೆಟ್ ಗೆ ಪ್ರಭಾಸ್ ಎಂಟ್ರಿ ಕೊಟ್ಟಿದ್ದರು.

ಆದಿಪುರುಷ್ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಮುಂಬೈ ಸಿಟಿಯಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಪ್ರಭಾಸ್ ಮತ್ತು ನಟಿ ಕೃತಿ ಸನೂನ್ ಸೇರಿದಂತೆ ಆದಿಪುರುಷ್ ಸಿನಿಮಾತಂಡ ಡಾನ್ಸ್ ರಿಹರ್ಸಲ್ ಮುಗಿಸಿ ವಾಪಸ್ ಆಗುತ್ತಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಟಾಲಿವುಡ್ ಸ್ಟಾರ್ ಪ್ರಭಾಸ್ ಫೋಟೋ ನೋಡಿದ ಬಾಲಿವುಡ್ ಮಂದಿ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದ ಪ್ರಭಾಸ್ ನನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 'ಪ್ರಭಾಸ್ ಮತ್ತೆ ದಪ್ಪ ಆಗಿದ್ದಾರೆ', 'ಅಂಕಲ್ ತರ ಕಾಣಿಸುತ್ತಿದ್ದಾರೆ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟೆಯಲ್ಲ 'ಪ್ರಭಾಸ್ ನೋಡಿದ್ರೆ 50 ವರ್ಷದ ಅಂಕಲ್ ಹಾಗೆ ಕಾಣಿಸುತ್ತಿದ್ದಾರೆ' ಎಂದು ಮತ್ತೊಬ್ಬ ನೆಟ್ಟಿಗ ಪ್ರಭಾಸ್ ವಿರುದ್ಧ ಕಾಮೆಂಟ್ ಹಾಕಿದ್ದಾರೆ.

Netizens shocking reaction on Prabhas no makeup look

'ಮೇಕಪ್ ಇಲ್ಲದೆ ಪ್ರಭಾಸ್ ನೋಡಲು ತುಂಬಾ ಕೆಟ್ಟದಾಗಿ ಕಾಣಿಸುತ್ತಾರೆ', 'ವಡಾ-ಪಾವ್ ತರ ಆಗಿದ್ದಾರೆ' ಎಂದು ಹೇಳುತ್ತಿದ್ದಾರೆ. 'ಪ್ರಭಾಸ್ ಯಾಕೆ ನೋಡಲು ಅಂಕಲ್ ಹಾಗೆ ಕಾಣಿಸುತ್ತಿದ್ದಾರೆ' ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಮುದುಕ ಆಗ್ಬಿಟ್ಟ' ಎಂದು ಹೇಳುತ್ತಿದ್ದಾರೆ.

ಅಂದಹಾಗೆ ದಕ್ಷಿಣ ಭಾರತೀಯ ಕಲಾವಿದರು ಬಾಲಿವುಡ್‌ನಲ್ಲಿ ಟ್ರೋಲ್ ಆಗಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಅನೇಕ ನಟರು ಟ್ರೋಲಿಗೆ ಗುರಿಯಾಗಿದ್ದಾರೆ. ಪ್ರಭಾಸ್ ಅಭಿಮಾನಿಗಳು ಸಹ ಟ್ರೋಲಿಗರಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ.

ಬಾಹುಬಲಿ ಸಿನಿಮಾ ಬಳಿಕ ತೆಲುಗು ಮಾತ್ರವಲ್ಲದೆ ದೇಶ-ವಿದೇಶದಲ್ಲಿ ಪ್ರಖ್ಯಾತಿಗಳಿಸಿದ ಪ್ರಭಾಸ್ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿದ್ದಾರೆ. ಪ್ರಭಾಸನನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಅಪಾರ ಅಭಿಮಾನಿಗಳ ಪ್ರೀತಿ, ಅಭಿಮಾನದ ನಡುವೆ ಪ್ರಭಾಸ್ ಈ ರೀತಿಯ ಟ್ರೋಲ್ ಗಳಿಗೆಲ್ಲ ತಲೆಕೆಸಿಕೊಳ್ಳುವವರಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಹ ನೀಡಿದವರಲ್ಲ. ಸದ್ಯ ಟ್ರೋಲ್ ಆಗುತ್ತಿರುವ ಬಗ್ಗೆಯೂ ಪ್ರಭಾಸ್ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗುವವರಲ್ಲ.

Netizens shocking reaction on Prabhas no makeup look

ಪ್ರಭಾಸ್ ಚಿತ್ರೀಕರಣಕ್ಕೆಂದು ಹೈದರಾಬಾದ್, ಚೆನ್ನೈ ಮತ್ತು ಮುಂಬೈ ಅಂತ ಓಡಾಡುತ್ತಿರುತ್ತಾರೆ. ಪ್ರಭಾಸ್ ಆದಿಪುರುಷ್ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಕೃತಿ ಸನೂನ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಕೃತಿ ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡರೆ ಸೈಫ್ ರಾವಣ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಈ ಸಿನಿಮಾ ಬಳಿಕ ಪ್ರಭಾಸ್ ನಿರ್ದೇಶಕ ನಾಗ್ ಅಶ್ವಿನ್ ಜೊತೆ ಹೊಸ ಸನಿಮಾ ಪ್ರಾರಂಭ ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಹೆಸರಿಡದ ಹೊಸ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೂವರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Netizens slam Prabhas no makeup look, they call looking like Uncle, vada pav.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X