"ರಶ್ಮಿಕಾ ಸ್ತನಗಳ ಗಾತ್ರ ಚಿಕ್ಕದು.. ಆ ಹುಡ್ಗಿಯದ್ದು ದೊಡ್ಡದು.. ಅಷ್ಟೇ ವ್ಯತ್ಯಾಸ": ಮಾಧವಿಲತಾ ಹಸಿ ಕಾಮೆಂಟ್‌ಗೆ ನೆಟ್ಟಿಗರು ಗರಂ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 'ಡೀಪ್‌ಫೇಕ್' ವಿಡಿಯೋ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ತಂತ್ರಜ್ಞಾನದ ಸಹಾಯದಿಂದ ಹೀಗೆಲ್ಲಾ ಮಾಡಬಹುದಾ? ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಮಿತಾಬ್ ಬಚ್ಚನ್, ನಾಗಚೈತನ್ಯಾ, ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದರು. ಈ ರೀತಿ ಫೇಕ್ ಫೋಟೊ, ವಿಡಿಯೋ ಕ್ರಿಯೇಟ್ ಮಾಡಿ ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ನೆಟ್ಟಿಗರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹದ್ದನ್ನೆಲ್ಲ ಈಗಲೇ ಮಟ್ಟ ಹಾಕಬೇಕು ಎಂದು ಆಗ್ರಹಿಸಿದ್ದರು. ಆದರೆ ತೆಲುಗು ನಟಿ ಮಾಧವಿ ಲತಾ ಮಾತ್ರ ಈ ವಿಚಾರದ ಬಗ್ಗೆ ಭಿನ್ನವಾಗಿ ಮಾತನಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮಾಧವಿ ಲತಾ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದಾರೆ. ರಶ್ಮಿಕಾ ಬೋಲ್ಡ್ ಲುಕ್‌ನಲ್ಲಿರುವ ಫೋಟೊಗಳನ್ನು ಕೊಲಾಜ್ ಮಾಡಿ ಒಂದು ವಿಡಿಯೋ ಮಾಡಿದ್ದಾರೆ. ಹಿನ್ನೆಲೆ ಧ್ವನಿಯಲ್ಲಿ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಈ ಫೋಟೊ ನೋಡಿದ್ರಲ್ಲ, ರಶ್ಮಿಕಾ ಮುಖವನ್ನು ಬೇರೆ ಹುಡುಗಿಯ ದೇಹಕ್ಕೆ ಅಂಟಿಸಲಾಗಿದೆ. ಅದು ಅಷ್ಟೇನು ಅಸಹ್ಯವಾಗಿ ಅಸಭ್ಯವಾಗಿ ಇಲ್ಲ. ಕಾರ್ಯಕ್ರಮಗಳಲ್ಲಿ ರಶ್ಮಿಕಾ ಧರಿಸುವ ಡ್ರೆಸ್‌ಗಳು ಮತ್ತು ಆಕೆಯ ಬೂ** ಶೋಗಿಂತ ಕೆಟ್ಟದಾಗಿ ಏನು ಆ ವೀಡಿಯೊದಲ್ಲಿ ಇಲ್ಲ. ವ್ಯತ್ಯಾಸ ಏನು ಅಂದ್ರೆ ಒಂದೇ ವ್ಯತ್ಯಾಸ. ರಶ್ಮಿಕಾ ಸೈಜ್ ಚಿಕ್ಕದು. ಆ ಹುಡುಗಿಯ ಸೈಜ್ ದೊಡ್ಡದು ಅಷ್ಟೇ ವ್ಯತ್ಯಾಸ."
"ಇಲ್ಲಿ ವಿಷಯ ಏನು ಅಂದ್ರೆ, ಸ್ಟಾರ್ ಹೀರೊಯಿನ್ಸ್ ಒಂದು ಇಷ್ಯೂ ಬಗ್ಗೆ ಮಾತನಾಡಿದಾಗ ಆ ವಿಚಾರ ಸಮಾಜದಲ್ಲಿ ದೊಡ್ಡದಾಗಿಬಿಡುತ್ತದೆ. ಇತ್ತೀಚೆಗೆ ಪತ್ರಕರ್ತರ ಸಂಘವೂ ರಶ್ಮಿಕಾ ಜೊತೆಗಿದ್ದೇವೆ ಎಂದು ಹೇಳಿದ್ದು ನೋಡಿ ನನಗೆ ನಗು ಬಂತು. ನನ್ನ ಪ್ರೀತಿಯ ಪತ್ರಕರ್ತರೇ.. ನೀವು ರಶ್ಮಿಕಾ ಮಂದಣ್ಣ ಜೊತೆಗಲ್ಲ.. ಹೊರಗೆ ಇರುವ ಮಹಿಳೆಯರ ಸುರಕ್ಷತೆಗೆ ಸಹಕರಿಸಿದರೆ ತುಂಬಾ ಒಳ್ಳೆಯದು. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೀಡಿದರೆ ಉತ್ತಮ."
"ಎಲ್ಲಾ ಬಟ್ಟೆ ಬಿಚ್ಚಿ ಹೀರೊಯಿನ್ ಆಗಿ ನಟಿಸಿದ ಮೇಲೆ, ಅಂದಿನ ಸಾವಿತ್ರಿ, ಮಾಧವಿ ಲತಾ ರೀತಿ ಮೈತುಂಬಾ ಬಟ್ಟೆ ಹಾಕಿಕೊಳ್ಳುವಂತ ನಾಯಕಿಯರೇನು ಅಲ್ಲ ಅವ್ರು. ಒಂದು ಸಮಸ್ಯೆಯ ಬಗ್ಗೆ ಮಾತನಾಡುವುದು ಒಳ್ಳೆಯದು, ನಾನು ಅದರ ಬಗ್ಗೆ ಮಾತನಾಡಿದ್ದೇನೆ. ಆ ವಿಷಯದ ಬಗ್ಗೆ ಮಾತನಾಡುವುದು ಒಳ್ಳೆಯದು. ಆದರೆ ಅಲ್ಲೇನು ರಶ್ಮಿಕಾ ಒಂದು ಸ್ಕ್ಯಾಂಡಲ್‌ನಲ್ಲಿ ಸಿಲುಕಿಸಿ ರಶ್ಮಿಕಾ ಬಗ್ಗೆ ಅಶ್ಲೀಲ ವಿಡಿಯೋ ಏನೂ ಮಾಡಲಿಲ್ಲ."
"ರಶ್ಮಿಕಾ ನಿಜವಾಗಿಯೂ ಹಾಕಿಕೊಳ್ಳುವ ಡ್ರೆಸ್‌ಗಿಂತ ಆ ಹುಡುಗಿ ಅಸಹ್ಯವಾಗಿ ಏನೂ ಡ್ರೆಸ್ ಹಾಕಿಕೊಂಡಿಲ್ಲ. ಅಂದಹಾಗೆ ಅದು ಸ್ವಿಮ್ ಸೂಟ್. ಸ್ವಿಮ್ ಸೂಟ್ಸ್ ಅದೇ ರೀತಿ ಇರುತ್ತದೆ. ಆದರೆ ಸೈಜ್ ಮ್ಯಾಟರ್ಸ್. ಅದು ಬಿಟ್ಟರೆ ಬೇರೆ ಏನೂ ಇಲ್ಲ" ಎಂದು ನಟಿ ಮಾಧವಿ ಲತಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ಶೇರ್ ಮಾಡಿರುವ ಮಾಧವಿ ಲತಾ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಆಕೆಯ ವಿಡಿಯೋಗೆ ನೆಟ್ಟಿಗರು ಗರಂ ಆಗಿ ಕಾಮೆಂಟ್ ಮಾಡಿದ್ದರು. ಅದಕ್ಕೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ ಎನ್ನಲಾಗ್ತಿದೆ.
ಒಬ್ಬ ನಟಿಯಾಗಿ ಮತ್ತೊಬ್ಬ ನಟಿಗೆ ಸಮಸ್ಯೆ ಆದಾಗ ಬೆಂಬಲಕ್ಕೆ ನಿಲ್ಲುವುದು ಬಿಟ್ಟು ಈ ರೀತಿ ಕಾಮೆಂಟ್ ಮಾಡುವುದು ಸರಿಯಲ್ಲ. ಇಷ್ಟು ಹಸಿಹಸಿಯಾಗಿ ಕಾಮೆಂಟ್ ಮಾಡೋದು ಎಷ್ಟು ಸರಿ? ತಂತ್ರಜ್ಞಾನದಿಂದ ಪರಿಸ್ಥಿತಿ ಈ ಮಟ್ಟಕ್ಕೆ ಬಂದಿದೆ. ಇಂದು ರಶ್ಮಿಕಾಗೆ ಆದ ಸಮಸ್ಯೆ ನಾಳೆ ಇನ್ನೊಬ್ಬರಿಗೆ ಆಗುತ್ತದೆ. ನಿಮಗೂ ಆಗಬಹುದು. ಈ ರೀತಿ ಕೀಳುಮಟ್ಟದಲ್ಲಿ ಯೋಚಿಸುವುದನ್ನು ನಿಲ್ಲಿಸಿ ಎಂದು ನೆಟ್ಟಿಗರು ಮಾಧವಿಲತಾ ಮೇಲೆ ಕೆಂಡಾಮಂಡಲವಾಗಿದ್ದಾರೆ.


Click it and Unblock the Notifications











