ಜ್ಯೂ. ಎನ್‌ಟಿಆರ್- ಜಾನ್ವಿ 'ದೇವರ' ಸಿನಿಮಾ ರೊಮ್ಯಾಂಟಿಕ್ ಪೋಸ್ಟರ್ ಫುಲ್ ಟ್ರೋಲ್

ಪ್ರೇಕ್ಷಕರು ಈಗ ಬಹಳ ಬುದ್ಧಿವಂತರಾಗಿಬಿಟ್ಟಿದ್ದಾರೆ. ಸಿನಿಮಾಗಳಲ್ಲಿ ಕಾಣಿಸುವ ಸಣ್ಣ ಸಣ್ಣ ತಪ್ಪುಗಳನ್ನು ಹುಡುಕಿ ಹುಡುಕಿ ಸೋಶಿಯಲ್ ಮೀಡಿಯಾದಲ್ಲಿ ಇಟ್ಟುಬಿಡುತ್ತಾರೆ. ಸಿನಿಮಾ ಪೋಸ್ಟರ್, ಟೀಸರ್ ಎಲ್ಲದರ ಬಗ್ಗೆಯೂ ಚರ್ಚಿಸುತ್ತಾರೆ. ಸೋಶಿಯಲ್ ಮೀಡಿಯಾ ಅದಕ್ಕೆ ದೊಡ್ಡ ವೇದಿಕೆಯಾಗಿದೆ.

ಯಾವುದೇ ಸಿನಿಮಾ ಪೋಸ್ಟರ್ ಬಂದರೂ ಸರಿ ತಪ್ಪುಗಳನ್ನು ಹೇಳುತ್ತಾರೆ. ಸದ್ಯ ತೆಲುಗಿನ 'ದೇವರ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಜ್ಯೂ. ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್ 27ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಸದ್ಯ ಒಂದೊಂದೇ ಸಾಂಗ್ ಬಿಟ್ಟು ಪ್ರಚಾರ ಶುರು ಮಾಡಲಾಗುತ್ತಿದೆ.

Netizens troll Jr NTR and Janhvi Kapoor s Devara romantic poster

'ದೇವರ' ಚಿತ್ರದ ಮೊದಲ ಸಾಂಗ್ ಹಿಟ್ ಆಗಿತ್ತು. ಇದೀಗ ರೊಮ್ಯಾಂಟಿಕ್ ಸಾಂಗ್ ಲಿರಿಕಲ್ ವೀಡಿಯೋ ರಿಲೀಸ್ ಮಾಡಲು ಸಿದ್ಧತೆ ನಡೀತಿದೆ. ಹಾಡಿನಲ್ಲಿ ನಾಯಕ- ನಾಯಕಿ ಇಬ್ಬರೂ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅದರ ಪೋಸ್ಟರ್ ಈಗ ಹೊರಬಿದ್ದಿದೆ. ಜಾನ್ವಿಯನ್ನು ತಾರಕ್ ತಬ್ಬಿ ಬಾಗಿಸಿದಂತೆ ಪೋಸ್ಟರ್ ನೋಡಬಹುದು. ಆದರೆ ಇಂತಹ ಪೋಸ್ಟರ್‌ಗಳು ಸಾಕಷ್ಟು ಬಂದಿವೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

'ಮಗಧೀರ' ಚಿತ್ರದ 'ಧೀರ ಧೀರ' ಸಾಂಗ್ ಪೋಸ್ಟರ್ ಹಾಗೂ 'ರಾಧೆಶ್ಯಾಮ್' ಚಿತ್ರದ ಪೋಸ್ಟರ್‌ ಜೊತೆಗೆ ಹೋಲಿಸುತ್ತಿದ್ದಾರೆ. ಇನ್ನು ಕನ್ನಡದ 'ಕಾಟೇರ' ಚಿತ್ರದಲ್ಲಿ ದರ್ಶನ್ ಹಾಗೂ ಆರಾಧನಾ ಇದೇ ರೀತಿ ಪೋಸ್ ಕೊಟ್ಟಿರುವ ಪೋಸ್ಟರ್ ಜೊತೆಗೆ ಹೋಲಿಕೆ ಟ್ರೋಲ್ ಮಾಡುತ್ತಿದ್ದಾರೆ. ಕಾಪಿ ಪೇಸ್ಟ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಸಾಂಗ್ ಎಂದ ಮೇಲೆ ನಾಯಕ-ನಾಯಕಿ ಪೋಸ್ ಒಂದೇ ರೀತಿ ಇರಬಹುದು. ಅದನ್ನು ಕಾಪಿ ಎನ್ನುವುದಕ್ಕೆ ಸಾಧ್ಯವಿಲ್ಲ. ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಇಂತಹ ಪೋಸ್ ನೋಡಿದ್ದೇವೆ.

Netizens troll Jr NTR and Janhvi Kapoor s Devara romantic poster

ಇದೆಲ್ಲದರ ನಡುವೆ ಪೋಸ್ಟರ್‌ನಲ್ಲಿ ತಾರಕ್‌ ಕಾಲುಗಳೇ ಕಾಣ್ತಿಲ್ಲ ಎಂದು ಕೆಲವರು ಕುಹಕವಾಡುತ್ತಿದ್ದಾರೆ. ಪೋಸ್ಟರ್ ಎಡಿಟಿಂಗ್ ವೇಳೆ ಮಿಸ್ಟೇಕ್ ಆಗಿದೆ. ಸರಿಯಾಗಿ ಎಡಿಟಿಂಗ್ ಮಾಡಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಗ್ರೀನ್ ಬ್ಯಾಕ್‌ಡ್ರಾಪ್‌ನಲ್ಲಿ ಸಾಂಗ್ ಚಿತ್ರೀಕರಿಸಿದಂತೆ ಕಾಣುತ್ತಿದೆ. ಮರಗಳ ಬೇರುಗಳ ನಡುವೆ ತಾರಕ್- ಜಾನ್ವಿ ನಿಂತು ಪೋಸ್ ಕೊಟ್ಟಿರುವಂತೆ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಮರದ ಬೇರುಗಳ ನಡುವೆ ಇಬ್ಬರ ಕಾಲಿನ ಪಾದಗಳು ಕಾಣುತ್ತಿಲ್ಲ ಎನ್ನುವಂತೆ ತೋರುತ್ತದೆ. ಆದರೆ ಎಡಿಟಿಂಗ್‌ನಲ್ಲಿ ಅದು ಸರಿಯಾಗಿ ತೋರಿಸಿಲ್ಲ ಎನ್ನುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಅಂತೀರಾ? ನೂರಾರು ಕೋಟಿ ಬಜೆಟ್ ಅಂತೀರಾ? ಒಂದು ಪೋಸ್ಟರ್ ಸರಿಯಾಗಿ ಎಡಿಟ್ ಮಾಡೋಕೆ ಬರಲ್ವಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆದರೆ ನಂದಮೂರಿ ಫ್ಯಾನ್ಸ್ ಮಾತ್ರ ಪೋಸ್ಟರ್ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಅಂದಹಾಗೆ 'ದೇವರ' ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಈ ರೊಮ್ಯಾಂಟಿಕ್ ಸಾಂಗ್ ಬರಲಿದೆ.

ಕೊರಟಾಲ ಶಿವ ಎರಡು ಭಾಗಗಳಾಗಿ 'ದೇವರ' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. 'RRR' ಬಳಿಕ ತಾರಕ್ ನಟಿಸಿರುವ ಸಿನಿಮಾ ಇದು. ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಇನ್ನುಳಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿ. ಪೋಸ್ಟರ್, ಟೀಸರ್‌ನಿಂದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

'ದೇವರ' ಬಳಿಕ 'ವಾರ್-2' ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ. ಹೃತಿಕ್ ರೋಷನ್ ಎದುರು ಅಬ್ಬರಿಸುತ್ತಿದ್ದಾರೆ. ಈಗಾಗಲೇ ಆ ಸಿನಿಮಾ ಚಿತ್ರೀಕರಣ ಸಹ ಭರದಿಂದ ಸಾಗುತ್ತಿದೆ. ಇನ್ನು ಪ್ರಶಾಂತ್ ನೀಲ್ ಜೊತೆ ಒಂದು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಆ ಸಿನಿಮಾ ಶುರುವಾಗುವ ನಿರೀಕ್ಷೆಯಿದೆ.

More from Filmibeat

English summary
Fans upset with Devara romantic poster bad editing;
Read more about: ntr janhvi kapoor tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X