ಬಿಕಿನಿಯಲ್ಲಿ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ ಮೃಣಾಲ್: ದಯವಿಟ್ಟು ಡಿಲೀಟ್ ಮಾಡಿ ಎಂದ ಫ್ಯಾನ್ಸ್

By ಫಿಲ್ಮಿಬೀಟ್ ಡೆಸ್ಕ್

'ಸೀತಾರಾಮಂ' ಸಿನಿಮಾದಿಂದ ರಾತ್ರೋರಾತ್ರಿ ಫೇಮಸ್ ಆಗಿದ್ದ ಚೆಲುವೆ ಮೃಣಾಲ್ ಠಾಕೂರ್. ಅನು ರಾಘವಪೂಡಿ ನಿರ್ದೇಶನದ ಈ ಪೀರಿಯಡ್ ರೊಮ್ಯಾಂಟಿಕ್ ಚಿತ್ರದಲ್ಲಿ ಈ ಮರಾಠಿ ಚೆಲುವೆ ತನ್ನ ಸ್ನಿಗ್ಧ ಸೌಂದರ್ಯ ಹಾಗೂ ನಟನೆಯಿಂದ ಮೋಡಿ ಮಾಡಿದ್ದರು. ದುಲ್ಕರ್ ಸಲ್ಮಾನ್ ಜೋಡಿಯಾಗಿ ಗಮನ ಸೆಳೆದರು. ಇಂತಿಪ್ಪ ಮೃಣಾಲ್ ಬಿಕಿನಿ ಫೋಟೊಗಳನ್ನು ಶೇರ್ ಮಾಡಿ ಶಾಕ್ ಕೊಟ್ಟಿದ್ದಾರೆ.

ನೀಲಿ ಬಣ್ಣದ ಟೂ ಪೀಸ್ ಬಿಕಿನಿಯಲ್ಲಿ ಮರಾಠಿ ಚೆಲುವೆ ಬಿಂದಾಸ್ ಪೋಸ್ ಕೊಟ್ಟಿದ್ದಾರೆ. ವಿದೇಶ ಪ್ರವಾಸದಲ್ಲಿರುವ ನಟಿ ಕಡಲ ತೀರದಲ್ಲಿ ಒದ್ದೆ ಮುದ್ದೆಯಾಗಿ ಸೌಂದರ್ಯ ತೆರೆದಿಟ್ಟಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಫೋಟೊಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ಮಾತ್ರ ಏನ್ ಮೇಡಂ ಇದೆಲ್ಲಾ? ನೀವು ಹೀಗೆ ಮಾಡೋದು ಸರೀನಾ? 'ಸೀತಾರಾಮಂ' ಚಿತ್ರದ ಸೀತಾ ಮಹಾಲಕ್ಷ್ಮಿ ನೀವೇನಾ? ಅಂತೆಲ್ಲಾ ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Netizens troll Mrunal Thakur for her latest bikini pictures

'ಸೀತಾರಾಮಂ' ಚಿತ್ರದಲ್ಲಿ ಯುವರಾಣಿ ನೂರ್ ಜಹಾನ್ ಅಲಿಯಾಸ್ ಸೀತಾ ಮಹಾಲಕ್ಷ್ಮಿ ಆಗಿ ಮೃಣಾಲ್ ಮಿಂಚಿದ್ದಾರೆ. ಬಹುತೇಕ ಸಿನಿಮಾ ಸೀರೆ ಉಟ್ಟು ಕಾಣಿಸಿಕೊಂಡಿದ್ದರು. ಆ ಪಾತ್ರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಇದೇ ಕಾರಣಕ್ಕೆ ಬಿಕಿನಿಯಲ್ಲಿ ನೆಚ್ಚಿನ ನಟಿಯನ್ನು ನೋಡಿ ಕೆಲವರು ಶಾಕ್ ಆಗಿದ್ದಾರೆ. ಎದೆ ಹಾಗೂ ತೊಡೆಗಳ ಅಂದವನ್ನು ಕ್ಯಾಮರಾ ಮುಂದೆ ತೆರೆದಿಟ್ಟು ಚೆಲುವೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕೆಲವರು ದಯವಿಟ್ಟು ಫೋಟೊಗಳನ್ನು ಡಿಲೀಟ್ ಮಾಡಿ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಕೇಳುತ್ತಿದ್ದಾರೆ.

ಮೃಣಾಲ್ ಠಾಕೂರ್ ಈ ಹಿಂದೆ ಕೂಡ ಬಿಕಿನಿಯಲ್ಲಿ ಫೋಟೊಶೂಟ್‌ಗಳನ್ನು ಮಾಡಿಸಿದ್ದರು. ಆದರೆ 'ಸೀತಾರಾಮಂ' ಸಿನಿಮಾದಿಂದ ಆಕೆಗೆ ದೊಡ್ಡ ಅಭಿಮಾನಿಗಳ ಸೃಷ್ಟಿಯಾಗಿತ್ತು. ಅದೇ ಕಾರಣಕ್ಕೆ ಈ ಹಾಕಿರುವ ಬಿಕಿನಿ ಫೋಟೊಗಳು ಸಖತ್ ವೈರಲ್ ಆಗ್ತಿದೆ. ಕೆಲವರು ಈಕೆನೇ ಮೃಣಾಲ್ ಠಾಕೂರ್ ಹೌದೋ ಅಲ್ವೋ ಎಂದು ಪದೇ ಪದೇ ನೋಡಿ ಕನ್ಫರ್ಮ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಬಿಕಿನಿಯಲ್ಲಿ ಬಿಂದಾಸ್ ಆಗಿ ಬೆಡಗಿ ಪೋಸ್ ಕೊಟ್ಟು ಶಾಕ್ ಕೊಟ್ಟಿದ್ದಾರೆ. ಕೆಲವರು ಸೀತಾ ಮಹಾಲಕ್ಷ್ಮಿಯನ್ನು ಈ ರೀತಿ ನೋಡುತ್ತೇವೆ ಎಂದುಕೊಂಡಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Netizens troll Mrunal Thakur for her latest bikini pictures

'ಸೀತಾರಾಮಂ' ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೋಡಿಯಾಗಿ ಮೃಣಾಲ್ ನಟಿಸಿದ್ದರು. ಈ ಸಿನಿಮಾ ಹಿಂದಿಗೂ ಡಬ್ ಆಗಿ ಎಲ್ಲರ ಮನಗೆದ್ದಿತ್ತು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು. 'ಸೂಪರ್ 30', 'ಬಟ್ಲಾ ಹೌಸ್', ಹಿಂದಿಯ 'ಜೆರ್ಸಿ' ಸೇರಿ ಹಲವು ಸಿನಿಮಾಗಳಲ್ಲಿ ಮೃಣಾಲ್ ನಟಿಸಿದರೂ 'ಸೀತಾ ರಾಮಂ' ಸಿನಿಮಾ ಆಕೆಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇದೀಗ ನಾನಿ ನಟನೆಯ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಹಿಂದಿಯಲ್ಲಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

ಪ್ರೇಕ್ಷಕರು ನಟ ನಟಿಯರ ಪಾತ್ರಗಳಿಂದ ಅವರನ್ನು ಹೆಚ್ಚು ಗುರ್ತಿಸುತ್ತಾರೆ. ಅವರ ಮನಸ್ಸಿಗೆ ನೋವುಂಟಾದರೆ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಈ ಹಿಂದೆ 'ದೇವೋಂಕಿ ದೇವ್ ಮಹಾದೇವ್' ಹಿಂದಿ ಕಿರುತೆರೆ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ಮಾಡಿದ್ದ ನಟಿ ಸೋನಾರಿಕಾ ಬದೋರಿಯ ಬಿಕಿನಿಯಲ್ಲಿ ಕಾಣಿಸಿಕೊಂಡಾಗ ಇದೇ ರೀತೀ ಟ್ರೋಲ್ ಮಾಡಿದ್ದರು. ಇದೀಗ ಮೃಣಾಲ್ ವಿಚಾರದಲ್ಲೂ ಇದೇ ರೀತಿ ಆಗುತ್ತಿದೆ.

ಮಹಾರಾಷ್ಟ್ರದ ಧುಲೆಯಲ್ಲಿ ಹುಟ್ಟಿ ಬೆಳೆದ ನಟಿ ಮೃಣಾಲ್ ಆರಂಭದಲ್ಲಿ ಹಿಂದಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಮರಾಠಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ಲವ್ ಸೋನಿಯಾ' ಸಿನಿಮಾ ಮೂಲಕ ಬಾಲಿವುಡ್ ಪ್ರವೇಸಿದರು. ನಂತರ 'ಸೂಪರ್ 30' ಚಿತ್ರದಲ್ಲಿ ಹೃತಿಕ್ ರೋಷನ್‌ಗೆ ಜೋಡಿಯಾಗುವ ಅವಕಾಶ ಸಿಕ್ಕಿತ್ತು.

More from Filmibeat

English summary
Netizens troll Mrunal Thakur for her latest bikini pictures. She is trolled for donning a bikini after playing Sita Mahalakshmi on Sita Ramam movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X