For Quick Alerts
  ALLOW NOTIFICATIONS  
  For Daily Alerts

  'RRR': ರಾಜಮೌಳಿ ಸಿನಿಮಾದಲ್ಲಿ ಸುದೀಪ್, ವಿರಾಟ್, ರೋಹಿತ್, ಪವನ್ ಕಲ್ಯಾಣ್ ಜಾಲಿ ರೈಡ್

  |

  ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ RRR ಸಿನಿಮಾ ಕೂಡ ಒಂದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಕೊನೆ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಕೊರೊನಾ 2ನೇ ಅಲೆ ಮುಗಿಸಿ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಅಪ್ ಡೇಟ್ ನೀಡಿತ್ತು.

  ಅಪ್ ಡೇಟ್ ಜೊತೆಗೆ ಚಿತ್ರದ ಹೊಸ ಪೋಸ್ಟರ್ ಅನ್ನು ಶೇರ್ ಮಾಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತ್ತು ಸಿನಿಮಾತಂಡ. ಪೋಸ್ಟರ್ ನಲ್ಲಿ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರು ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದರು. ಈ ಪೋಸ್ಟರ್ ಶೇರ್ ಮಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು.

  ವಿಶೇಷ ಎಂದರೆ ಆರ್ ಆರ್ ಆರ್ ಪೋಸ್ಟರ್ ನಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಮಾತ್ರವಲ್ಲ, ಕನ್ನಡದ ನಟ ಕಿಚ್ಚ ಸುದೀಪ್, ಪವನ್ ಕಲ್ಯಾಣ್, ಮಹೇಶ್ ಬಾಬು ಹಾಗೂ ಸಿನಿಮಾದವರ ಜೊತೆಗೆ ಕ್ರಿಕೆಟಿಗರು ಎಂಟ್ರಿ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ರಾಜಮೌಳಿ ಸಿನಿಮಾದಲ್ಲಿ ಜಾಲಿ ರೈಡ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದೆ. ಆರ್ ಆರ್ ಆರ್ ಸಿನಿಮಾದ ಹೊಸ ಪೋಸ್ಟರ್ ಅನ್ನು ನೆಟ್ಟಿರು ಟ್ರೋಲ್ ಮಾಡಿ ಟ್ರೆಂಡ್ ಮಾಡಿದ್ದಾರೆ. ಮುಂದೆ ಓದಿ...

  ಟ್ರೋಲ್ ಆದ 'RRR' ಪೋಸ್ಟರ್

  ಟ್ರೋಲ್ ಆದ 'RRR' ಪೋಸ್ಟರ್

  ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಜಾಗದಲ್ಲಿ ಬೇರೆ ಕಲಾವಿದರನ್ನು ಕೂರಿಸಿ ಟ್ರೋಲ್ ಮಾಡುತ್ತಿದ್ದಾರೆ. ನೆಟ್ಟಿಗರು ಪೋಸ್ಟರ್ ಎಡಿಟ್ ಮಾಡಿ ರಾಮ್ ಮತ್ತು ಜೂ.ಎನ್ ಟಿ ಆರ್ ಮುಖಕ್ಕೆ ಬೇರೆಯವರ ಮುಖ ಸೇರಿಸಿ ವೈರಲ್ ಮಾಡುತ್ತಿದ್ದಾರೆ. ಎಡಿಡೆಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.

  'RRR' ನಲ್ಲಿ ರೋಹಿತ್-ವಿರಾಟ್

  'RRR' ನಲ್ಲಿ ರೋಹಿತ್-ವಿರಾಟ್

  RRR ಫೋಸ್ಟರ್ ನಲ್ಲಿ ಸಿನಿಮಾದವರು ಮಾತ್ರವಲ್ಲದೇ ಕ್ರಿಕೆಟಿಗರು ಎಂಟ್ರಿ ಕೊಟ್ಟಿದ್ದಾರೆ. ಕ್ರಿಕೆಟಿಗ ರೋಹಿತ್ ಶರ್ಮ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಬರುತ್ತಿರುವ ಹಾಗೆ ಫೋಟೋ ಎಡಿಟ್ ಮಾಡಿ, ಟಿ20 ವರ್ಲ್ಡೈ ಕಪ್ ಗೆ ತಯಾರಿ ನಡೆಸುತ್ತಿದ್ದಾರೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಫೋಟೋ ಕೂಡ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

  ಹೆಲ್ಮೆಟ್ ಹಾಕಿದ ಟ್ರಾಫಿಕ್ ಪೊಲೀಸರು

  ಹೆಲ್ಮೆಟ್ ಹಾಕಿದ ಟ್ರಾಫಿಕ್ ಪೊಲೀಸರು

  ಟ್ರಾಫಿಕ್ ಪೊಲೀಸ್ ನವರು ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಗೆ ಹೆಲ್ಮೆಟ್ ಹಾಕಿದ್ದಾರೆ. ಹೆಲ್ಮೆಟ್ ಧರಿಸಿರುವ ಫೋಟೋ ಶೇರ್ ಮಾಡಿ ಪೋಸ್ಟರ್ ಮೂಲಕ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ. ಮತ್ತೊಂದು ಪೋಸ್ಟರ್ ನಲ್ಲಿ ಉಪ್ಪೇನ ಸಿನಿಮಾದ ಹೀರೋ ವೈಷ್ಣವ್ ತೇಜ್ ಉಪ್ಪೇನ ಫೇಮಸ್ ಬೈಕ್ ನಲ್ಲಿ ರಾಮ್ ಚರಣ್ ಜೊತೆ ಜಾಲಿ ರೈಡ್ ಮಾಡುತ್ತಿದ್ದಾರೆ.

  ಪವನ್ ಕಲ್ಯಾಣ್, ಕಿಚ್ಚ ಸುದೀಪ್ ಜಾಲಿ ರೈಡ್

  ಪವನ್ ಕಲ್ಯಾಣ್, ಕಿಚ್ಚ ಸುದೀಪ್ ಜಾಲಿ ರೈಡ್

  ಆರ್ ಆರ್ ಆರ್ ಗೆ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಹ ಎಂಟ್ರಿ ಕೊಟ್ಟಿದ್ದಾರೆ. ಆರ್ ಆರ್ ಆರ್ ಬೈಕ್ ನಲ್ಲಿ ಪವನ್ ಕಲ್ಯಾಣ್ ಜಾಲಿ ರೈಡ್ ಮಾಡುತ್ತಿರುವ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಕನ್ನಡ ನಟ ಕಿಚ್ಚ ಸುದೀಪ್ ಕೂಡ ಆರ್ ಆರ್ ಆರ್ ಬೈಕ್ ಏರಿ ರೈಡ್ ಮಾಡುತ್ತಿದ್ದಾರೆ. ಸುದೀಪ್ ರೈಡ್ ಹೊರಟಿದ್ದು, ತಮಿಳು ಸ್ಟಾರ್ ನಟ ಅಜಿತ್ ಜೊತೆ. ಇಬ್ಬರ ಫೋಟೋ ಕೂಡ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.

  ಸಿಂಪಲ್ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದ Yash Radhika ! | Yash House Warming Ceremony | Filmibeat Kannada
  'RRR' ಸಿನಿಮಾದ ಅಪ್ ಡೇಟ್

  'RRR' ಸಿನಿಮಾದ ಅಪ್ ಡೇಟ್

  ಆರ್ ಆರ್ ಆರ್ ಸಿನಿಮಾ ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಎರಡು ಹಾಡನ್ನು ಹೊರತುಪಡಿಸಿ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಮುಗಿಯಲಿದೆ ಎಂದು ಬಹಿರಂಗ ಪಡಿಸಿದೆ. ಜೊತೆಗೆ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರು ಎರಡು ಭಾಷೆಯ ಡಬ್ಬಿಂಗ್ ಕೆಲಸವನ್ನು ಸದ್ಯದಲ್ಲೇ ಮುಗಿಸಲಿದ್ದಾರೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

  English summary
  Netizens troll RRR movie Ram Charan And Jr.NTR bike riding poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X