For Quick Alerts
  ALLOW NOTIFICATIONS  
  For Daily Alerts

  ಹುರಿ ಮೀಸೆ ರಾಮ.. ತಳಬುಡ ಇಲ್ಲದ ಗ್ರಾಫಿಕ್ಸ್.. ರಾಮಾಯಣಕ್ಕೆ ವೆಸ್ಟರ್ನ್ ಟಚ್.. 'ಆದಿಪುರುಷ್' ಟೀಸರ್ ಟ್ರೋಲ್!

  |

  ಯಂಗ್‌ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ 'ಆದಿಪುರುಷ್' ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಜೊತೆಗೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗ್ತಿದೆ. ಪ್ರಭಾಸ್ ಹಾರ್ಡ್‌ಕೋರ್ ಫ್ಯಾನ್ಸ್‌ಗೆ ಮಾತ್ರ ಟೀಸರ್ ಇಷ್ಟವಾಗಿದ್ದು, ಬಹುತೇಕರಿಗೆ ನಿರಾಸೆಯಾಗಿದೆ. 500 ಕೋಟಿ ರೂ. ಬಜೆಟ್‌ ಎಂದು ಹೇಳಿ ಯಾವುದೋ ಹಿಂದಿ ಸೀರಿಯಲ್ ಗುಣಮಟ್ಟದ ಗ್ರಾಫಿಕ್ಸ್ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

  ಓಂ ರಾವುತ್ ರಾಮಾಯಣ ಕಾವ್ಯವನ್ನು ಇವತ್ತಿನ ತಂತ್ರಜ್ಞಾನ ಬಳಸಿ ಕಟ್ಟಿಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಗ್ರೀನ್‌ಮ್ಯಾಟ್‌ನಲ್ಲೇ ಕಂಪ್ಲೀಟ್ ಸಿನಿಮಾ ಶೂಟಿಂಗ್ ನಡೆದಿತ್ತು. ಇಷ್ಟು ದೊಡ್ಡ ಸಿನಿಮಾ ಚಿತ್ರೀಕರಣ ಅಷ್ಟು ಬೇಗ ಮುಗಿದಿದ್ದು ಅಚ್ಚರಿ ಮೂಡಿಸಿತ್ತು. ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ. ಒಂದೆರಡು ಫ್ರೇಮ್ ಅದ್ಭುತ ಅನ್ನಿಸಿದರೂ ಉಳಿದಂತೆ 'ಆದಿಪುರುಷ್' ಟೀಸರ್ ಸಿನಿರಸಿಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಕೆಲ ಪ್ರಭಾಸ್ ಫ್ಯಾನ್ಸ್ ಸಿನಿಮಾ ಮೇಲೆ ಹೋಪ್ಸ್ ಕಳೆದುಕೊಂಡಿದ್ದಾರೆ.

  ನ್ಯಾಯ ಮಾರ್ಗದಲ್ಲಿ ಅನ್ಯಾಯದ ಸರ್ವನಾಶಕ್ಕೆ ಬಂದ 'ಆದಿಪುರುಷ್': ಟೀಸರ್ ಸೂಪರ್ ಹಿಟ್.. ಆದರೆ?ನ್ಯಾಯ ಮಾರ್ಗದಲ್ಲಿ ಅನ್ಯಾಯದ ಸರ್ವನಾಶಕ್ಕೆ ಬಂದ 'ಆದಿಪುರುಷ್': ಟೀಸರ್ ಸೂಪರ್ ಹಿಟ್.. ಆದರೆ?

  ನಮಗೆ ರಾಮನ ಬಗ್ಗೆ ಭಕ್ತಿ ಇದೆ. ಆದರೆ ಟೀಸರ್ ನೋಡಿ ಬೇಸರವಾಗ್ತಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಕೆಲ ತಮಿಳು ನೆಟ್ಟಿಗರು ಕೊಂಚ ಹೆಚ್ಚೇ 'ಆದಿಪುರುಷ್' ಟೀಸರ್‌ನ ವಿಮರ್ಶಿಸುತ್ತಿದ್ದಾರೆ. ಯಾವುದಾದರೂ ಕಾರ್ಟೂನ್ ಚಾನಲ್‌ಗೆ ಸ್ಯಾಟಲೈಟ್ ರೈಟ್ಸ್ ಮಾರಿಬಿಡಿ ಎನ್ನುತ್ತಿದ್ದಾರೆ.

  ಹುರಿಮೀಸೆಯ ರಾಮ

  ಹುರಿಮೀಸೆಯ ರಾಮ

  ಸಾಮಾನ್ಯವಾಗಿ ರಾಮ ಎಂದು ಮೀಸೆ, ಗಡ್ಡ ಇರುವುದಿಲ್ಲ ಎಂದೇ ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ನಿರ್ದೇಶಕ ಓಂ ರಾವುತ್ 'ಆದಿಪುರುಷ್' ಚಿತ್ರದಲ್ಲಿ ಹುರಿಮೀಸೆಯ ರಾಮನನ್ನು ತೋರಿಸುವ ಸಾಹಸ ಮಾಡಿದ್ದಾರೆ. ಇನ್ನು ರಾಮ ಎಂದರೆ ನೀಲಮೇಘಶ್ಯಾಮ ಎನ್ನಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ರಾಮನನ್ನು ಕೆಂಪಾಗಿ ತೋರಿಸಿರುವ ಉದಾಹರಣೆಯೂ ಇದೆ. ಈ ಚಿತ್ರದಲ್ಲೂ ತಂಡ ಅದೇ ಸಾಹಸ ಮಾಡಿದೆ. ಇದನ್ನು ದಕ್ಷಿಣಭಾರತದ ಮಂದಿ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

  ಶ್ರೀರಾಮನಿಗೆ ಗಡ್ಡ, ಮೀಸೆ ಇತ್ತಾ? ಇಲ್ಲವಾ? 'ಆದಿಪುರುಷ್' ಪೋಸ್ಟರ್ ನೋಡಿ ಶುರುವಾಯ್ತು ಹೊಸ ಚರ್ಚೆ!ಶ್ರೀರಾಮನಿಗೆ ಗಡ್ಡ, ಮೀಸೆ ಇತ್ತಾ? ಇಲ್ಲವಾ? 'ಆದಿಪುರುಷ್' ಪೋಸ್ಟರ್ ನೋಡಿ ಶುರುವಾಯ್ತು ಹೊಸ ಚರ್ಚೆ!

  ರಾಮಾಯಣಕ್ಕೆ ವೆಸ್ಟರ್ನ್ ಟಚ್

  ರಾಮಾಯಣಕ್ಕೆ ವೆಸ್ಟರ್ನ್ ಟಚ್

  ಇನ್ನು ಟೀಸರ್‌ನ ಜನ ಬಹಳ ಕೂಲಂಕುಶವಾಗಿ ನೋಡುತ್ತಿದ್ದಾರೆ. ರಾಮಾಯಣ ಕಾವ್ಯ ಓದಿಕೊಂಡಿರುವವರು ಇದು ಹೇಗೆ ಸಾಧ್ಯ? ಅದು ಯಾಕೆ ಹೀಗೆ? ಅಂತೆಲ್ಲಾ ಕೇಳುತ್ತಿದ್ದಾರೆ. ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಾವು ಕಣ್ಣಾರೆ ಕಂಡಿಲ್ಲ, ಹಾಗಾಗಿ ನಮಗೆ ಬೇಕಾದಂತೆ ಕೊಂಚ ಬದಲಿಸಿಕೊಳ್ಳಬಹುದು ಎಂದು ಚಿತ್ರತಂಡ ಅಂದುಕೊಂಡಂತೆ ಇದೆ. ಅದರಲ್ಲೂ ಜಾಂಬವಂತನ ಲುಕ್, ರಾವಣದ ಹೇರ್‌ಸ್ಟೈಲ್ ನೋಡಿ ರಾಮಾಯಣಕ್ಕೆ ವೆಸ್ಟರ್ನ್ ಟಚ್ ಕೊಟ್ಟಂತಿದೆ ಎಂದು ಹೇಳುತ್ತಿದ್ದಾರೆ.

  ಗ್ರಾಫಿಕ್ಸ್‌ನಲ್ಲಿ ರಿಯಾಲಿಟಿ ಮಿಸ್!

  ಗ್ರಾಫಿಕ್ಸ್‌ನಲ್ಲಿ ರಿಯಾಲಿಟಿ ಮಿಸ್!

  ಮೋಷನ್ ಕ್ಯಾಪ್ಚರ್ ಟೆಕ್ನಾಲಜಿ ಬಳಸಿ ಚಿತ್ರವನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಜೊತೆಗೆ ಕೊಂಚ ಲೈವ್ ಆಕ್ಷನ್‌ ಕೂಡ ಸೇರಿಸಿ ಸಿನಿಮಾ ಮಾಡಿದ್ದಾರೆ. ವಿಷ್ಯುವಲ್ಸ್, ಗ್ರಾಫಿಕ್ಸ್ ಎಲ್ಲವೂ ಚೆನ್ನಾಗಿದ್ದರೂ ರಿಯಾಲಿಟಿಗೆ ಬಹಳ ದೂರ ಎನ್ನುವಂತಿದೆ. ಪ್ರಭಾಸ್‌ನ ದೇಹ, ಮುಖವನ್ನು ಕೂಡ ಗ್ರಾಫಿಕ್ಸ್ ಬಳಸಿ ತೋರಿಸಿರುವಂತಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲ ದೃಶ್ಯಗಳ ಗ್ರಾಫಿಕ್ಸ್‌ನಲ್ಲಿ ಲಾಜಿಕ್ ಮಿಸ್ ಆಗಿದೆ ಎನ್ನುತ್ತಿದ್ದಾರೆ.

  ತಮಿಳು ತಂಬಿಗಳಿಂದ ಹೆಚ್ಚು ಟ್ರೋಲ್!

  ತಮಿಳು ತಂಬಿಗಳಿಂದ ಹೆಚ್ಚು ಟ್ರೋಲ್!

  ಇತ್ತೀಚೆಗೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ನೋಡಿ ಪ್ರಭಾಸ್ ಫ್ಯಾನ್ಸ್ ಟ್ರೋಲ್ ಮಾಡಿದ್ದರು. ನಮ್ಮ 'ಬಾಹುಬಲಿ'ಗೆ ಹೋಲಿಸಿದರೆ ನಿಮ್ಮ ಸಿನಿಮಾ ಏನೇನು ಅಲ್ಲ ಎಂದಿದ್ದರು. ಅದಕ್ಕೆ ಪ್ರತಿಕಾರ ಎನ್ನುವಂತೆ ಈಗ 'ಆದಿಪುರುಷ್' ಟೀಸರ್ ನೋಡಿ ತಮಿಳು ತಂಬಿಗಳು ಹೆಚ್ಚು ಟ್ರೋಲ್ ಮಾಡುತ್ತಿದ್ದಾರೆ. ಇದೇನಾ ನಿಮ್ಮ 'ಆದಿಪುರುಷ್' ಆರ್ಭಟ, ಅಬ್ಬರ, ಮತ್ತೊಂದು 'ಕೊಚಡಿಯನ್' ಸಿನಿಮಾ ನೋಡಿದಂತಿದೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ 'ಆದಿಪುರುಷ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರ್ತಿದೆ.

  English summary
  Netizens trolled Prabhas Starrer Adipurush Teaser. The teaser of the film, starring Prabhas as Lord Ram, Saif Ali Khan as Lankesh and Kriti Sanon as Sita, received a grand launch on October 2 on the banks of Sarayu in Uttar Pradesh’s Ayodhya. Know more.
  Monday, October 3, 2022, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X