'ಪೀಲಿಂಗ್ಸ್' ಸಾಂಗ್‌ನಲ್ಲಿ ರಶ್ಮಿಕಾ ವಿಚಿತ್ರ ಅವತಾರ; ರಕ್ಷಿತ್ ಹೆಸ್ರು ಎಳೆದು ತಂದಿದ್ದೇಕೆ?

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ'-2 ಚಿತ್ರದ ಹೊಸ ಸಾಂಗ್ ರಿಲೀಸ್ ಆಗಿದೆ. 'ಪೀಲಿಂಗ್ಸ್' ಎಂದು ಶುರುವಾಗುವ ಡ್ಯಾನ್ಸಿಂಗ್ ನಂಬರ್ 5 ಭಾಷೆಗಳಲ್ಲಿ ಸದ್ದು ಮಾಡ್ತಿದೆ. ಬಿಂದಾಸ್ ಸಾಂಗ್‌ಗೆ ಪುಷ್ಪರಾಜ್ ಹಾಗೂ ಶ್ರೀವಲ್ಲಿ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನೆರಡು ದಿನಗಳಲ್ಲಿ 'ಪುಷ್ಪ'-2 ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ಚಾಗಿರುವುದರಿಂದ ಬುಕ್ಕಿಂಗ್ ಕೊಂಚ ಕಮ್ಮಿ ಆಗಿದೆ. ಇನ್ನು ಕೊನೆ ಹಂತದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅದೇ ಹಾದಿಯಲ್ಲಿ 'ಪೀಲಿಂಗ್ಸ್' ಸಾಂಗ್ ರಿಲೀಸ್ ಮಾಡಿದ್ದಾರೆ.

Netizens trolling Rashmika Mandanna s Pushpa-2 Peelings song mentioning rakshit Shetty name

ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ಗೆ ತೆಲುಗಿನಲ್ಲಿ ಚಂದ್ರಬೋಸ್, ಕನ್ನಡದಲ್ಲಿ ವರದರಾಜ್ ಸಾಹಿತ್ಯ ಬರೆದಿದ್ದಾರೆ. ಕಲರ್ ಫುಲ್ ಸೆಟ್‌ನಲ್ಲಿ ಬಿಂದಾಸ್ ಡ್ಯಾನ್ಸ್ ಸೆರೆಹಿಡಿಯಲಾಗಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಟ್ರೋಲ್ ಸಹ ಮಾಡುತ್ತಿದ್ದಾರೆ. ಇದೇನು ವಿಚಿತ್ರ ಸ್ಟೆಪ್ಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

'ಪುಷ್ಪ' ಚಿತ್ರದಲ್ಲಿ 'ಊ ಅಂಟಾವಾ' ಎನ್ನುವ ಐಟಂ ಸಾಂಗ್ ಇತ್ತು. ಅದಕ್ಕೆ ಸಮಂತಾ ಮೈ ಚಳಿ ಬಿಟ್ಟು ಕುಣಿದಿದ್ದರು. ಸೀಕ್ವೆಲ್‌ನಲ್ಲಿ 'ಕಿಸ್ಸಿಕ್' ಎಂಬ ಸ್ಪೆಷಲ್ ಸಾಂಗ್ ಇದೆ. ಶ್ರೀಲೀಲಾ ಡ್ಯಾನ್ಸ್ ಮಾಡಿದ್ದಾರೆ. ಆದರೆ ಅದು ಅಷ್ಟರ ಮಟ್ಟಿಗೆ ಗೆಲ್ಲಲಿಲ್ಲ. ಈಗ ಬಂದಿರೋ 'ಪೀಲಿಂಗ್ಸ್' ಸಾಂಗ್ ಚಿತ್ರದ ಐಟಂ ಸಾಂಗ್ ರೀತಿ ಇದೆ ಎಂದು ಕುಹಕವಾಡುತ್ತಿದ್ದಾರೆ. ಇದು ನಾಯಕ ನಾಯಕಿ ಡುಯೆಟ್ ಸಾಂಗ್ ತರ ಇಲ್ಲ, ಐಟಂ ಸಾಂಗ್ ರೀತಿ ಇದೆ ಎಂದು ಟ್ರೋಲ್ ಮಾಡ್ತಿದ್ದಾರೆ.

ಇನ್ನು ಅಲ್ಲು ಅರ್ಜುನ್ ಕಾಲು ಹಿಡಿದು ರಶ್ಮಿಕಾ ಹಾಡುವ ಒಂದು ಸ್ಟೆಪ್ಸ್ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದು ಯಾವ್ ಸೀಮೆ ಡ್ಯಾನ್ಸ್ ಎಂದು ಅಣಕವಾಡುತ್ತಿದ್ದಾರೆ. ಇದೆಲ್ಲದರ ನಡುವೆ ನೆಟ್ಟಿಗರೊಬ್ಬರು ರಕ್ಷಿತ್ ಶೆಟ್ಟಿ ಹೆಸರು ತಂದು ಕಾಮೆಂಟ್ ಮಾಡಿದ್ದಾರೆ. "ರಕ್ಷಿತ್ ಶೆಟ್ಟಿ ನೀವು ಜೀವನದಲ್ಲಿ ಒಂದು ಒಳ್ಳೆ ನಿರ್ಧಾರ ತಗೊಂಡಿದ್ದೀರಾ" ಎಂದು ಪೋಸ್ಟ್ ಮಾಡಿ ಸುಮ್ಮನಾಗಿದ್ದಾರೆ.

Netizens trolling Rashmika Mandanna s Pushpa-2 Peelings song mentioning rakshit Shetty name

ಹಿಂದೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಮದುವೆ ನಿಶ್ಚಯವಾಗಿತ್ತು. ಎಂಗೇಜ್‌ಮೆಂಟ್ ಸಹ ನಡೆದಿತ್ತು. ಬಳಿಕ ಅದು ಮುರಿದುಬಿತ್ತು. ಮುಂದೆ ರಶ್ಮಿಕಾ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಮೋಡಿ ಮಾಡುತ್ತಿದ್ದಾರೆ. ಟಾಪ್ ಹೀರೊಯಿನ್ ಆಗಿ ಮೆರೆಯುತ್ತಿದ್ದಾರೆ. ಸದ್ಯ 'ಪುಷ್ಪ'-2 ಚಿತ್ರದ ಹಾಡಿನಲ್ಲಿ ರಶ್ಮಿಕಾ ಸ್ಟೆಪ್ಸ್ ನೋಡಿ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ- ರಶ್ಮಿಕಾ ಎಂಗೇಜ್‌ಮೆಂಟ್ ಮುರಿದು ಬಿದ್ದದ್ದನ್ನು ಪ್ರಸ್ತಾಪಿಸಲಾಗಿದೆ. ಇದಕ್ಕೆ ಪರ ವಿರೋಧ ಚರ್ಚೆ ನಡೀತಿದೆ.

ಸಾಕಷ್ಟು ಜನ ರಕ್ಷಿತ್ ಶೆಟ್ಟಿ ಒಳ್ಳೆ ಕೆಲಸ ಮಾಡಿದ್ರು ಎಂದು ಕಾಮೆಂಟ್ ಮಾಡಿದರೆ, ರಶ್ಮಿಕಾ ಅಭಿಮಾನಿಗಳು ಇದಕ್ಕೆ ತಿರುಗೇಟು ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ವೈರಲ್ ಆಗುತ್ತಿದೆ. ಮೂರು ವರ್ಷಗಳ ಹಿಂದೆ 'ಪುಷ್ಪ' ಸಿನಿಮಾ ಬಂದಿತ್ತು. ಇದೀಗ ಅದರ ಸೀಕ್ವೆಲ್ ತೆರೆಗೆ ಬರ್ತಿದೆ.

ಸುಕುಮಾರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಪುಷ್ಪ'-2 ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ರಕ್ತಚಂದನ ಸ್ಮಗ್ಲರ್ ಆಗಿ ಮತ್ತೊಮ್ಮೆ ಅಲ್ಲು ಅರ್ಜುನ್ ಬಣ್ಣ ಹಚ್ಚಿದ್ದಾರೆ. ಆತನ ಮಡದಿಯಾಗಿ ಸೀಕ್ವೆಲ್‌ನಲ್ಲಿ ರಶ್ಮಿಕಾ ಮುಂದುವರೆಯಲಿದ್ದಾರೆ. ಚಿತ್ರದಲ್ಲಿ ಆಕೆಯ ಪಾತ್ರಕ್ಕೆ ಬಹಳ ಮಹತ್ವ ಇದೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಅದಕ್ಕೆಲ್ಲಾ ಉತ್ತರ ಸಿಗಲಿದೆ.

More from Filmibeat

English summary
Allu Arjun and Rashmika mandanna's Pushpa-2 Peelings song trolled by netizens
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X