For Quick Alerts
  ALLOW NOTIFICATIONS  
  For Daily Alerts

  "ಓಟಿಟಿ ₹200 ಕೋಟಿ ಡೀಲ್, ಅವತ್ತೇ 'ಲೈಗರ್' ಸಿನಿಮಾ ಮಾರಿಬಿಟ್ಟಿದ್ದರೆ ಚೆನ್ನಾಗಿತ್ತು": ವಿಜಯ್ ಕಾಲೆಳೆದ ನೆಟ್ಟಿಗರು!

  |

  ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಚಿತ್ರಕ್ಕೆ ಮೊದಲ ದಿನವೇ ಭಾರೀ ಹಿನ್ನಡೆ ಉಂಟಾಗಿದೆ. ಚಿತ್ರಕ್ಕೆ ಎಲ್ಲೆಡೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ 3 ವರ್ಷಗಳಿಂದ ವಿಜಯ್ ದೇವರಕೊಂಡ ಭಾರೀ ಶ್ರಮವಹಿಸಿ ಮಾಡಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಬೇಕು ಎಂದುಕೊಂಡಿದ್ದ ಟಾಲಿವುಡ್ ನಟನ ಕನಸಿಗೆ ತಣ್ಣೀರು ಎರಚಿದಂತಾಗಿದೆ. ವಿಜಯ್ ದೇವರಕೊಂಡ ಮಾಡಿದ್ದ ಹಳೇ ಟ್ವೀಟ್ ನೆನಪಿಸಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

  ಆಕ್ಷನ್ ಎಂಟರ್‌ಟೈನರ್ 'ಲೈಗರ್' ಸಿನಿಮಾ ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಕರಣ್ ಜೋಹರ್, ಚಾರ್ಮಿ, ಪೂರಿ ಜಗನ್ನಾಥ್ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಿದ್ದರು. ಚಿತ್ರದಲ್ಲಿ ಬಾಕ್ಸರ್ ಆಗಿ ವಿಜಯ್ ದೇವರಕೊಂಡ ಅಬ್ಬರಿಸಿದ್ದಾರೆ. ನಾಯಕಿಯಾಗಿ ಅನನ್ಯಾ ಪಾಂಡೆ ಮಿಂಚಿದ್ರೆ, ನಾಯಕನ ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಅಬ್ಬರಿಸಿದ್ದಾರೆ. ಇಷ್ಟೆಲ್ಲ ಇದ್ದರೂ ಸಿನಿಮಾ ಹಳಿ ತಪ್ಪಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ವಿಜಯ್ ದೇವರಕೊಂಡ ಪರ್ಫಾರ್ಮೆನ್ಸ್ ಬಿಟ್ಟರೆ ಸಿನಿಮಾದಲ್ಲಿ ಏನೇನು ಇಲ್ಲ ಎಂದು ಹೇಳುತ್ತಿದ್ದಾರೆ.

  ವಿಜಯ್ ದೇವರಕೊಂಡ 'ಲೈಗರ್' ಪಾತ್ರ ಸೃಷ್ಟಿಗೆ ಅಲ್ಲು ಅರ್ಜುನ್ ಕಾರಣ!ವಿಜಯ್ ದೇವರಕೊಂಡ 'ಲೈಗರ್' ಪಾತ್ರ ಸೃಷ್ಟಿಗೆ ಅಲ್ಲು ಅರ್ಜುನ್ ಕಾರಣ!

  ಕಳೆದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ನೇರವಾಗಿ ಓಟಿಟಿಯಲ್ಲಿ 'ಲೈಗರ್' ಸಿನಿಮಾ ರಿಲೀಸ್ ಮಾಡುವ ಬಗ್ಗೆ ಗುಸುಗುಸು ಶುರುವಾಗಿತ್ತು. ಬರೋಬ್ಬರಿ 200 ಕೋಟಿ ರೂ.ಗೆ ಓಟಿಟಿ ಸಂಸ್ಥೆಯೊಂದು ಸಿನಿಮಾವನ್ನು ಕೇಳಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದ ನಟ ವಿಜಯ್ ದೇವರಕೊಂಡ "200 ಕೋಟಿ ರೂ. ಬಹಳ ಕಮ್ಮಿ ಆಯಿತು, ಥಿಯೇಟರ್‌ನಲ್ಲಿ ಇನ್ನು ಜಾಸ್ತಿ ಗಳಿಸ್ತೀವಿ" ಎಂದು ಬರೆದುಕೊಂಡಿದ್ದರು. ಸದ್ಯ ಚಿತ್ರ ನೋಡಿದ ಕೆಲವರು "ಅವತ್ತೇ ಚಿತ್ರವನ್ನು 200 ಕೋಟಿ ರೂ.ಗೆ ಮಾರಿಬಿಟ್ಟಿದ್ದರೆ ಚೆನ್ನಾಗಿತ್ತು" ಎಂದು ಕಾಮೆಂಟ್ ಮಾಡಿ ದೇವರಕೊಂಡ ಕಾಲೆಳೆದಿದ್ದಾರೆ. ಮತ್ತೆ ಕೆಲವರು ಪುಣ್ಯ ಓಟಿಟಿ ಸಂಸ್ಥೆ ಸಿನಿಮಾ ಖರೀದಿಸದೇ ಒಳ್ಳೆ ಕೆಲಸ ಮಾಡ್ತು ಎನ್ನುತ್ತಿದ್ದಾರೆ.

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ 'ಲೈಗರ್' ಸಿನಿಮಾ ರಿಲೀಸ್ ಆಗಿದೆ. ಇನ್ನು ಸಿನಿಮಾ ರಿಲೀಸ್ ಬೆನ್ನಲ್ಲೇ ಓಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಈಗಾಗಲೇ ಡಿಸ್ನಿ ಪ್ಲಸ್ ಹಾಟ್‌ ಸ್ಟಾರ್ ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಖರೀದಿಸಿದೆ. ಅಕ್ಟೋಬರ್ ಫಸ್ಟ್‌ ವೀಕ್‌ನಲ್ಲಿ 'ಲೈಗರ್' ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಒಟ್ಟಾರೆ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿರುವುದು ಬೇಸರದ ಸಂಗತಿ. ಪೂರಿ ಜಗನ್ನಾಥ್ ಇನ್ನಾದರೂ ತಮ್ಮ ಸಿನಿಮಾಗಳ ಬರವಣಿಗೆ ವಿಚಾರದಲ್ಲಿ ಗಮನ ಹರಿಸಬೇಕಿದೆ.

  English summary
  Netizens troll Vijay Devrakonda for his Old tweet About Liger Movie Direct OTT Release Deal.
  Friday, August 26, 2022, 9:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X