ಬೇಕು ಬೇಕೆಂದೇ ತಮ್ಮ ಮಾಜಿ ಪತಿ ನಾಗಚೈತನ್ಯ ಹೊಟ್ಟೆ ಉರಿಸುತ್ತಿದ್ದಾರಾ ಸಮಂತಾ ?

By ಫಿಲ್ಮಿಬೀಟ್ ಡೆಸ್ಕ್

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಆದರೆ ಕೆಲ ಒಮ್ಮೆ ಈ ಜೀವನದಲ್ಲಿ ತಿರುವು ಬರುತ್ತವೆ. ನಂಬಿಕೆ-ಅಪನಂಬಿಕೆ ಇತ್ಯಾದಿ ವಿಚಾರಗಳಿಂದ ಈ ಸಂಬಂಧ ಮುರಿದು ಬೀಳುತ್ತೆ. ಹಾಗಂಥ, ಜೀವನ ಮುಗಿದೇಹೋಯ್ತು ಅಂತೇನು ಇಲ್ಲ. ಕೆಲವರು ಬದುಕಿನಲ್ಲಿ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ

ತಮ್ಮ ಇಷ್ಟದ ಹುಡುಗ ಸಿಕ್ಕಾಗ ಮರು ಮದುವೆಯ ಆಲೋಚನೆ ಮಾಡುತ್ತಾರೆ. ಎರಡನೇ ಮದುವೆಯಾಗುವುದರ ಮೂಲಕ ಹೊಸ ಜೀವನ ಆರಂಭ ಮಾಡುತ್ತಾರೆ. ಸಮಂತಾ ಕೂಡ ಈ ಸಾಲಿಗೆ ಸೇರಿಕೊಳ್ಳುತ್ತಾರಾ ಗೊತ್ತಿಲ್ಲ. ಆದರೆ ಸದ್ಯ ಸಮಂತಾ ಅವರ ನಡೆ ಹಲವರಲ್ಲಿ ಅನುಮಾನವನ್ನು ಮೂಡಿಸಿದೆ.

netizens-wonder-is-samantha-ruth-prabhu-trying-to-make-naga-chaitanya-jealous

ಹೌದು, ಅಸಲಿಗೆ ನಾಗಚೈತನ್ಯ ಅವರನ್ನು ಆರು ವರ್ಷ ಹುಚ್ಚರಂತೆ ಪ್ರೀತಿ ಮಾಡಿ,ಆ ನಂತರ ಅದ್ಧೂರಿ ಮದುವೆಯಾಗಿ ನಾಲ್ಕು ವರ್ಷಗಳ ದಾಂಪತ್ಯ ಗೀತೆಯನ್ನು ಹಾಡಿದ ಸಮಂತಾ, ಸದ್ಯ ತಮ್ಮ ಹಳೆಯ ಪ್ರೇಮವನ್ನು ಮರೆತು ಮುನ್ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಮ್ಮೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎನ್ನುವ ಅನುಮಾನ ಕಳೆದ ಅನೇಕ ದಿನಗಳಿಂದ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ದಿ ಫ್ಯಾಮಿಲಿ ಮ್ಯಾನ್ ನಿರ್ಮಾಪಕ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಹೆಸರು ತಳುಕು ಹಾಕಿಕೊಂಡಿದೆ. ಅನೇಕ ಸಭೆ ಸಮಾರಂಭಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಇದೆ.

ಹೀಗಿರುವಾಗ ಇದೀಗ ಸಮಂತಾ ಇದೇ ರಾಜ್ ನಿಡಿಮೋರು ಜೊತೆ ಹೊಚ್ಚ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ತಮ್ಮ ಈ ಆತ್ಮೀಯತೆಯ ಕುರಿತು ಇನ್ನು ಏನು ಹೇಳಿಲ್ಲವಾದರೂ ಕೂಡ ಸಹಜವಾಗಿ ಫೋಟೊ ನೋಡಿದ ಇವರ ಅಭಿಮಾನಿಗಳಲ್ಲಿಗ ಕುತೂಹಲ ಮನೆ ಮಾಡಿದೆ.

ಸಾಲದಕ್ಕೆ ಸಮಂತಾ ಹೊಸ ಆರಂಭ ಎಂದು ತಮ್ಮ ಫೋಟೊಗೆ ಕ್ಯಾಪ್ಷನ್ ನೀಡಿದ್ದಾರೆ. ನಿರ್ಮಾಪಕಿಯಾಗಿ ತಮ್ಮ ಬದುಕಿನ ಹೊಸ ಆರಂಭ ಎನ್ನುವ ಸಂದೇಶವನ್ನು ಸಮಂತಾ ನೀಡಿದ್ದರಾದರೂ ಅನೇಕರಿಗೆ ಈ ಆರಂಭ ವ್ಯೆಯಕ್ತಿಕ ಬದುಕಿಗೆ ಸಂಬಂಧಿಸಿದ್ದು ಎನ್ನುವ ಅನುಮಾನ ಇದೆ.

ಇನ್ನು ರಾಜ್ ಜೊತೆ ಫೋಟೊ ಹಂಚಿಕೊಂಡ ಸಮಂತಾ ಸುಂದರವಾದ ಹೂಗುಚ್ಚವನ್ನು ಕೂಡ ಹಿಡಿದು ಕೂಡ ಫೋಸ್ ನೀಡಿದ್ದಾರೆ. ಇಷ್ಟೇ ಅಲ್ಲ ತಮಗೆ ಬಂದ ಉಡುಗೊರೆಯನ್ನು ಕೂಡ ಸ್ಯಾಮ್ ಫೋಟೊ ಮೂಲಕ ತೋರಿಸಿದ್ದಾರೆ.

ಹೀಗಾಗಿಯೇ ಹಲವಾರು ಜನ ಸಮಂತಾ ಅವರ ಫೋಟೊಗಳಿಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ರಾಜ್ ಮತ್ತು ಸಮಂತಾ ಮದುವೆಯಾಗುವುದು ಖಚಿತ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

ಇನ್ನು ಕೆಲವರು ನಾಗ ಚೈತನ್ಯ ಅವರ ಹೊಟ್ಟೆ ಉರಿಸಲು ಎಂದೇ ಬೇಕು ಬೇಕಂತಲೇ ರಾಜ್ ನಿಡಿಮೋರು ಜೊತೆಗಿರುವ ಫೋಟೊಗಳನ್ನು ಸಮಂತಾ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇದು ನಿಜಾನಾ? ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಮಾತು ಸದ್ಯ ಕೇಳಿ ಬರುತ್ತಿದೆ. ನಾಗಚೈತನ್ಯ ನೆಮ್ಮದಿಯಾಗಿ ಶೋಭಿತಾ ಜೊತೆ ಇದ್ದಾರೆ ಅವರೆಲ್ಲ ಈ ವಿಚಾರಗಳನ್ನೆಲ್ಲ ತಲೆ ಕೆಡಿಸಿಕೊಳ್ಳಲ್ಲ ಎನ್ನುವ ವಾದವನ್ನು ಮತ್ತೊಂದು ಬಣ ಇದೇ ಸಮಯದಲ್ಲಿ ಮಾಡುತ್ತಿದೆ.

ಇನ್ನು ಸಮಂತಾ ಅವರ ಮುದ್ದಿನ ನಾಯಿ ಜೊತೆ ರಾಜ್ ಕಾಣಿಸಿಕೊಂಡಿದ್ದಾರೆ. ಈ ಫೋಟೊವನ್ನು ಗಮನಿಸಿರುವ ಅನೇಕರು ರಾಜ್ ಮತ್ತು ಸಮಂತಾ ನಡುವಿನ ಆತ್ಮೀಯತೆ ಹೆಚ್ಚಾಗಿದೆ ಎಂದು ಕೂಡ ಕಾಮೆಂಟ್‌ ಮಾಡುತ್ತಿದ್ದಾರೆ.

ಅಂದ್ಹಾಗೇ ನಿಮಗೆ ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ನಿಮಗೆ ನೆನಪಿರಬೇಕು. ಸಮಂತಾ ಅವರನ್ನು ಟಾಲಿವುಡ್‌ನಿಂದ ಬಾಲಿವುಡ್ಡಿಗೆ ಕರೆದೊಯ್ದ ಸಿನಿಮಾ ಇದು. 'ರಾಜಿ' ಪಾತ್ರದಲ್ಲಿ ಸಮಂತಾ ಅವರನ್ನು ಈ ಸರಣಿಯಲ್ಲಿ ನೋಡಿ ಅನೇಕರು ಬೆಕ್ಕಸ ಬೆರಗಾಗಿದ್ದರು.

ಯಾಕೆಂದರೆ ಹಿಂದೆಂದೂ ಕಾಣಿಸದ ರೂಪದಲ್ಲಿ ಸ್ಯಾಮ್ ಇಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಸಾಹಸಗಾಥೆಯಿಂದ ಜನ ಮನ ಗೆದ್ದಿದ್ದರು. ಸದ್ಯಕ್ಕೆ ಸಮಂತಾ ಅವರ ಜೊತೆ ಥಳುಕು ಹಾಕಿಕೊಂಡಿರುವ ರಾಜ್ ನಿಡಿಮೋರು ಇದೇ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಸೃಷ್ಟಿಕರ್ತ ಕೂಡ ಹೌದು. ನಿರ್ಮಾಪಕ ಕೂಡ ಹೌದು.

ಕೃಷ್ಣ ಡಿ.ಕೆ ಜೊತೆ ಸೇರಿ ರಾಜ್ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಮಾಡುವಾಗ, ಸಮಂತಾ ಇವರ ಪಾಲಿಗೆ ಕೇವಲ ಸ್ನೇಹಿತೆಯಾಗಿದ್ದರು. ಇಬ್ಬರು ನಡುವೆ ನಿರ್ದೇಶಕ ಮತ್ತು ನಟಿಯ ನಡುವೆ ಇರಬೇಕಾದ ಸಂಬಂಧವೇ ಇತ್ತು.

ಆದರೆ, ಅದ್ಯಾವಾಗ ರಾಜ್ ಮತ್ತೊಮ್ಮೆ ಸಮಂತಾ ಅವರನ್ನೇ ನಾಯಕಿಯ ಸ್ಥಾನದಲ್ಲಿ ಕೂರಿಸಿ 'ಸಿಟಾಡೆಲ್ ಹನಿ ಬನ್ನಿ' ಶುರುಮಾಡಿದರೋ ಅಲ್ಲಿಂದಾಚೆ ಎಲ್ಲವೂ ಬದಲಾಯಿತು. ಇಬ್ಬರ ನಡುವೆ ಇದ್ದ ಸ್ನೇಹದ ಸೇತುವೆ ಮರೆಯಾಗಿ ಪ್ರೇಮದ ಗೋಡೆ ಎದ್ದು ನಿಂತುಕೊಂಡಿತು ಎನ್ನುವುದು ಇವರ ಸಂಬಂಧದ ಕುರಿತು ಹಿಂದೆ ಕೇಳಿ ಬಂದಿದ್ದ ಸುದ್ದಿ.

ಇನ್ನೂ ವಿಶೇಷ ಅಂದರೆ ರಾಜ್ ಈಗಾಗಲೇ ವಿವಾಹಿತ. ಮೊನ್ನೆಯವರೆಗೆ ಬಾಲಿವುಡ್‌ನವರ ಕಣ್ಣಿಗೆ ರಾಜ್ ಆದರ್ಶ ವ್ಯಕ್ತಿಯಂತೆ ಕಾಣುತ್ತಿದ್ದರು. ರಾಜ್ ಮತ್ತು ಅವರ ಪತ್ನಿಯನ್ನು ಅನೇಕರು ಹಾಡಿ ಹೊಗಳುತ್ತಿದ್ದರು. ಆದರೆ ಈಗ ರಾಜ್ ಮತ್ತು ಸಮಂತಾ ನಡುವೆ ಕುಚ್ ಕುಚ್ ನಡೆಯುತ್ತಿದೆ ಅನ್ನುವ ವಿಚಾರ ಎಲ್ಲರ ಬಾಯಿಗೆ ಆಹಾರವಾಗಿದೆ.

ಇದಕ್ಕೆ ಪುರಾವೆ ಎನ್ನುವಂತೆ ಸದ್ಯ ರಾಜ್ ಜೊತೆ ಹೊಸ ಫೋಟೊಗಳನ್ನು ಹಂಚಿಕೊಂಡಿರುವ ಸಮಂತಾ ಕೆಲ ದಿನಗಳ ಹಿಂದೆಯಷ್ಟೇ ತಿರುಪತಿಯಲ್ಲಿ ಇದೇ ರಾಜ್ ನಿಡಿಮೋರು ಜೊತೆ ಕಾಣಿಸಿಕೊಂಡಿದ್ದರು. ಇದಕ್ಕೂ ಮೊದಲು ಚೆನ್ನೈನಲ್ಲಿ ಪಿಕಲ್ ಬಾಲ್ ಪಂದ್ಯಾವಳಿ ನಡೆದಿತ್ತು.

ಈ ಟೂರ್ನಾಮೆಂಟ್‌ನಲ್ಲಿ ಚೆನ್ನೈ ಸೂಪರ್ ಚಾಂಪ್ಸ್‌ನ ಒಡತಿಯಾದ ಸಮಂತಾ ತಮ್ಮ ತಂಡಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಹೋಗಿದ್ದರು. ಆದರೆ ಈ ಸಮಯದಲ್ಲಿ ಇವರ ಜೊತೆ ರಾಜ್ ನಿಡಿಮೋರು ಕೂಡ ಇದ್ದರು. ಇನ್ನು ಸಮಂತಾ ಮನಸಾರೆ ನಕ್ಕು ನಲಿಯುವುದನ್ನು ಅವರ ಅಭಿಮಾನಿಗಳು ಕಂಡು ಅನೇಕ ವರ್ಷಗಳೇ ಆಗಿತ್ತು.

ಈ ಕೊರಗನ್ನು ಕೂಡ ಈ ಟೂರ್ನಾಮೆಂಟ್‌ನಲ್ಲಿ ದೂರ ಮಾಡಿದ್ದ ಸಮಂತಾ ಪಿಕಲ್ ಬಾಲ್ ಪಂದ್ಯವನ್ನು ತುಂಬಾನೇ ಎಂಜಾಯ್ ಮಾಡಿದ್ದರು. ಸಮಂತಾ ಖುಷಿಯನ್ನು ಕಂಡು ರಾಜ್ ನಿಡಿಮೋರುಗೆ ಆದ ಖುಷಿ ಫೋಟೊದಲ್ಲಿ ಕೂಡ ಎದ್ದು ಕಂಡಿತ್ತು. ಇದಲ್ಲದೇ ಮತ್ತೊಂದು ಕಡೆ ಇಬ್ಬರು ಕೈ ಕೈ ಹಿಡಿದು ಕ್ರೀಡಾಂಗಣದ ಪ್ರದಕ್ಷಣೆಯನ್ನು ಹಾಕಿದ್ದರು.

ಇನ್ನು ತೀರಾ ಇತ್ತೀಚೆಗೆ ಸಮಂತಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರವಾಸದ ಕುರಿತು ಮಾಹಿತಿಯನ್ನು ಹಂಚಿಕೊಂಡು ಫೋಟೊಗಳನ್ನು ಕೂಡ ಶೇರ್ ಮಾಡಿದ್ದರು. ಆಗಲೂ ಕೂಡ ಅನೇಕರು ಸಮಂತಾ ಜೊತೆ ರಾಜ್ ನಿಡಿಮೋರು ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು.

Take a Poll

ಇನ್ನುಳಿದಂತೆ ಪ್ರೇಮಿಗಳ ದಿನದಂದುಸಮಂತಾ ಪ್ರೀತಿಯ ಬಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದರು. ಒಂದು ಡಜನ್ ಫೋಟೊಗಳನ್ನು ಶೇರ್ ಮಾಡಿದ್ದರು. ಅನಾಮಿಕ ವ್ಯಕ್ತಿಯ ಜೊತೆ ರೊಮ್ಯಾಂಟಿಕ್ ಡಿನ್ನರ್ ಡೇಟ್‌ಗೆ ತೆರಳಿದಂತೆ, ಹೃದಯದ ಸಿಂಬಲ್‌ ಇರುವ ಫೋಟೊವನ್ನು ಹಂಚಿಕೊಂಡಿದ್ದರು.

ಇದೆಲ್ಲದರಿಂದ ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸ್ನೇಹ ಮತ್ತು ಪ್ರೀತಿಯ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಗಲೂ ವ್ಯಾಪಕ ಚರ್ಚೆ ನಡೆದಿತ್ತು. ಈಗಲೂ ನಡೆಯುತ್ತಿದೆ.

ಒಟ್ನಲ್ಲಿ ಸದ್ಯ ಸಮಂತಾ ಮತ್ತು ರಾಜ್ ನಿಡಿಮೋರು ಸಂಬಂಧದ ಕುರಿತು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.ನಿಜಕ್ಕೂ ಸಮಂತಾ ಮತ್ತು ರಾಜ್ ನಿಡಿಮೋರು ಪ್ರೀತಿಸುತ್ತಿದ್ದಾರಾ ? ಇಬ್ಬರು ಮದುವೆಯಾಗ್ತಾರಾ ? ಉತ್ತರ ಶೀಘ್ರದಲ್ಲಿಯೇ ಗೊತ್ತಾಗಲಿದೆ. ಸಮಂತಾ ನಿರ್ಮಾಣದ ಚೊಚ್ಚಲ ಚಿತ್ರ ಶುಭಂ ಈ ಶುಕ್ರವಾರ ಅಂದರೆ ಮೇ 9ರಂದು ತೆರೆಗೆ ಬರುತ್ತಿದೆ.

More from Filmibeat

English summary
Samantha Ruth Prabhu's latest Instagram post with Raj Nidimoru, captioned "New Beginnings," has fans questioning her intentions. Is this a simple work update or a strategic move aimed at making Naga Chaitanya take notice?
Read more about: samantha tollywood affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X