ಮನೆಯಲ್ಲೇ ಸಮಂತಾಗೆ IVIG ಟ್ರೀಟ್‌ಮೆಂಟ್: ಕೊನೆಗೂ ಸ್ಯಾಮ್ ಹೆಲ್ತ್ ಅಪ್‌ಡೇಟ್ ಹೊರಬಿತ್ತು

ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾಗೆ ಚಿಕಿತ್ಸೆ ಮುಂದುವರೆದಿದೆ. ತಮ್ಮ ಆರೋಗ್ಯದ ಬಗ್ಗೆ ನಟಿ ಸಮಂತಾ ಸ್ಪಂದಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸ್ಯಾಮ್ ಹೆಲ್ತ್ ಅಪ್‌ಡೇಟ್ ನೀಡಿದ್ದಾರೆ. ಸದ್ಯ ಮನೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮತ್ತೊಂದು ಕಡೆ ಚಿಕಿತ್ಸೆಯ ಭಾಗವಾಗಿ ಪ್ರತಿದಿನ ಜಿಮ್‌ನಲ್ಲಿ ಕಸರತ್ತು ಮಾಡಿ ದೇಹ ದಂಡಿಸುತ್ತಿದ್ದಾರೆ.

ಸಮಂತಾ ಮಯೋಸೈಟಿಸ್ ಸಮಸ್ಯೆಗೆ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ತಿಂಗಳಿನಂತೆ ಐವಿಐಜಿ (Intravenous Immunoglobulin) ಇಂಜೆಕ್ಷನ್ ಪಾರ್ಟಿ ನಡೆದಿದೆ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಅದನ್ನು ಫೋಟೊ ಸಮೇತ ಸಮಂತಾ ಹಂಚಿಕೊಂಡಿದ್ದಾರೆ. ಇದಕ್ಕಾಗಿ ಎರಡು ಮೂರು ಗಂಟೆಗಳ ಕಾಲ ಕಷ್ಟ ಪಡುತ್ತಿದ್ದಾರೆ. ಚಿಕಿತ್ಸೆ ವೇಳೆ ಸ್ಯಾಮ್ ಜೊತೆಗೆ ಸ್ನೇಹಿತರಾದ ರಾಹುಲ್ ರವೀಂದ್ರ, ನಂದಿನಿ ರೆಡ್ಡಿ ಕೂಡ ಇದ್ದಾರೆ. ಜೊತೆಗೆ "ನ್ಯೂ ನಾರ್ಮಲ್" ಎಂದು ಬರೆದು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

New Normal: Samantha takes IVIG injection for myositis at home

ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸಮಂತಾ ಜಿಮ್‌ ಕಸರತ್ತು ಮುಂದುವರೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಹೆಚ್ಚು ಭಾರ ಎತ್ತುವ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಆರೋಗ್ಯದ ವಿಚಾರದಲ್ಲಿ ಬೇಕಾದ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದಾರೆ. ಮಯೋಸೈಟಿಸ್‌ಗಾಗಿ ಐವಿಐಜಿ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳು ಈ ಥೆರಪಿ ಚಿಕಿತ್ಸೆ ನೀಡಲಾಗುತ್ತದೆಯಂತೆ. "ಕಷ್ಟಪಡಬೇಕು, ಕಷ್ಟ ಅಂತ ಗೊತ್ತಿದ್ದರೂ ಬಿಡದೇ ಕಷ್ಟಪಟ್ಟರೇ ಫಲಿತಾಂಶ ಸಿಗುತ್ತದೆ" ಎಂದು ಈ ಹಿಂದೆ ಪೋಸ್ಟ್ ಮಾಡಿದ್ದರು.

New Normal: Samantha takes IVIG injection for myositis at home

ಅಭಿಮಾನಿಗಳು ಸಮಂತಾ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ನಿಮಗೆ ಮತ್ತಷ್ಟು ಬಲ ಸಿಗಲಿ. ಬೇಗ ಮೊದಲಿನಂತಾಗಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಮಂತಾ ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾದಲ್ಲಿ ನಟಿಸಬೇಕಿದೆ. 'ಸಿಟಾಡೆಲ್‌' ಎನ್ನುವ ವೆಬ್‌ಸೀರಿಸ್‌ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊದಲು ಈ ವೆಬ್‌ ಸೀರಿಸ್‌ ಶುರುವಾಗಲಿದೆ.

More from Filmibeat

English summary
Actress Samantha Shares Her IVIG injection Process for Myositis at home. She update fans about her new normal IVIG party. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X