ಡೇಟಿಂಗ್ ಬಳಿಕ ನಾಗಚೈತನ್ಯ 2ನೇ ಮದುವೆ ಗುಸು-ಗುಸು: ಆ ಹುಡುಗಿಯೇ ವಧುವಂತೆ!
ನಾಗಚೈತನ್ಯ ಮತ್ತು ಸಮಂತಾ ಸೌತ್ ಸಿನಿಮಾರಂಗದಲ್ಲಿ ಸೂಪರ್ ಜೋಡಿಗಳ ಸಾಲಿಗೆ ಸೇರಿದ್ದರು. ಆದರೆ ಅಷ್ಟೇ ಬೇಗ ಆ ಪಟ್ಟದಿಂದ ಕೆಳಗೆ ಇಳಿದಿದ್ದಾರೆ. ಯಾಕೆಂದರೆ ನಾಗಚೈತನ್ಯ, ಸಮಂತಾ ಅತ್ಯುತ್ತಮ ದಂಪತಿಗಳು ಎನ್ನುವ ನಂವಿಕೆಯನ್ನು ಸುಳ್ಳು ಮಾಡಿ ವಿಚ್ಛೇದನ ಪಡೆದು ದೂರಾಗಿದ್ದಾರೆ.
ಈ ಜೋಡಿ ವಿಚ್ಛೆಧನವನ್ನು ಅಷ್ಟು ಸುಲಭಕ್ಕೆ ಯಾರು ಒಪ್ಪಿರಲಿಲ್ಲ. ಇನ್ನು ಇವರ ವಿಚ್ಛೇದನದ ವಿಚಾರವೇ ಒಂದು ರೀತಿ ಶಾಕಿಂಗ್ ಆಗಿತ್ತು. ಇಬ್ಬರ ಅಭಿಮಾನಿಗಳು ಕೂಡ ಇರನ್ನು ಮತ್ತೆ ಒಂದಾಗುವಂತೆ ಕೇಳಿಕೊಂಡಿದ್ದರು. ಆದರೆ ಈ ಜೋಡಿ ವಿಚ್ಛೇದನ ಪಡೆದಿದ್ದೇ ತಡ ಒಬ್ಬರ ಬಗ್ಗೆ ಒಬ್ಬರೂ ಮಾತಾಡುವ ಗೋಜಿಗೂ ಹೋಗಿಲ್ಲ.
ಸಮಂತಾ ನಾಗಚೈತನ್ಯ ದೂರಾದ ಬಳಿಕ, ಮತ್ತೊಬ್ಬ ನಟಿಯ ಜೊತೆಗೆ ನಾಗಚೈತನ್ಯ ಹೆಸರು ಕೇಳಿ ಬರುತ್ತಿದೆ. ಇಷ್ಟು ದಿನ ಡೇಟಿಂಗ್‌ನಲ್ಲಿ ಇದ್ದ ಈ ಗುಸು, ಗುಸು ಈಗ ಮದುವೆ ತನಕ ಹೋಗಿದೆ. ನಾಗಚೈತನ್ಯ ಈಗ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಇದಕ್ಕೆ ಕುಟುಂಬದ ಸಮ್ಮತ್ತಿಯೂ ಇದೆ ಎಂದು ಹೇಳಲಾಗುತತ್ತಿದೆ.

ಶೋಭಿತಾ ಜೊತೆ ನಾಗಚೈತನ್ಯ ಡೇಟಿಂಗ್!
ತೆಲುಗು ನಟಿ ಶೋಭಿತಾ ಧುಲಿಪಾಲ ಜೊತೆಗೆ ನಟ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಕದ್ದು ಮುಚ್ಚಿ ಡೇಟಿಂಗ್‌ನಲ್ಲಿ ಬ್ಯುಸಿ ಇದೆ ಎನ್ನಲಾಗಿದೆ. ಅಲ್ಲದೇ ಇವರು ಐಷರಾಮಿ ಹೋಟೆಲ್‌ಗಳಲ್ಲೇ ಡೇಟಿಂಗ್ ಮಾಡುತ್ತಿದ್ದರು. ಶೋಭಿತಾ ನಾಗಚೈತನ್ಯರ ಹೊಸ ಪ್ರೇಮಿ ಎನ್ನುವ ಸುದ್ದಿ ತೆಲುಗು ಚಿತ್ರರಂಗದಲ್ಲಿ ಜೋರಾಗಿದೆ. ಆದರೆ ಇದೆಲ್ಲವು ಗಾಸಿಪ್ ರೂಪದಲ್ಲಿ ಹರಿದಾಡುತ್ತಿದೆ.

ಎರಡನೇ ಮದುವೆ ಆಗ್ತಾರಂತೆ ನಗಚೈತನ್ಯ!
ಇಷ್ಟು ದಿನ ನಾಗಚೈತನ್ಯ ಮತ್ತು ಶೋಭಿತಾ ಧುಲಿಪಾಲ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಹಲವು ಬಾರಿ ಡೇಟಿಂಗ್ ಹೋಗಿದ್ದು, ಹೋಟೆಲ್‌ನಲ್ಲಿ ಮೀಟ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ ಇದೆಲ್ಲವೂ ಗಾಸಿಪ್ ರೂಪದಲ್ಲೇ ಇದೆ. ಈಗ ಇದಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ. ಶೋಭಿತಾಳನ್ನು ನಾಗಚೈತನ್ಯ ಮದುವೆ ಆಗುತ್ತಾರೆ ಎನ್ನಲಾಗುತ್ತಿದೆ. ಇದಕ್ಕೆ ನಾಗಚೈತನ್ಯ ಕುಟುಂಬದ ಒಪ್ಪಿಗೆಯೂ ಇದೆಯಂತೆ.
ನಾಗಚೈತನ್ಯ ಡೇಟಿಂಗ್ ಬಗ್ಗೆ ಸಮಂತಾ ಪ್ರತಿಕ್ರಿಯೆ!
ಹೀಗೆ ನಾಗಚೈತ್ತನ್ಯ ಡೇಟಿಂಗ್ ವಿಚಾರದಲ್ಲಿ ಸಮಂತಾ ಹೆಸರು ಕೇಳಿ ಬಂದಿದ್ದಕ್ಕೆ, ನಟಿ ಸಮಂತಾ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸಮಂತಾ, "ಹುಡುಗಿಯರ ಬಗ್ಗೆ ಗಾಸಿಪ್- ಅದು ನಿಜವೆಂದು ನಂಬಲಾಗುತ್ತದೆ. ಹುಡುಗರ ಬಗ್ಗೆ ಗಾಸಿಪ್- ಇದಕ್ಕೆ ಹುಡುಗಿಯೇ ಕಾರಣ, ಎನ್ನುತ್ತೀರಾ. ಬುದ್ಧಿವಂತರಾಗಿ. ಜಗತ್ತು ಮುಂದುವರೆಯುತ್ತಿದೆ. ನೀವೂ ಕೂಡ ಮುಂದುವರೆಯಿರಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆಗೆ ಹೆಚ್ಚಿನ ಗಮನ ಕೊಡಿ. ಮುಂದೆ ಸಾಗಿ." ಎಂದು ಬರೆದುಕೊಂಡಿದ್ದಾರೆ.

ಶೋಭಿತಾ ಸುಮ್ಮನಿರೋದೇಕೆ?
ಡೇಟಿಂಗ್ ಗಾಸಿಪ್ ನಂತರ ಮದುವೆ ಸುದ್ದಿ ಜೋರಾಗಿ ಹಬ್ಬಿದೆ. ನಾಗಚೈತನ್ಯ ಸದ್ಯದಲ್ಲೇ ಎರಡನೇ ಮದುವೆ ಆಗ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಶೋಭಿತಾ ಇನ್ನೂ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ನಟ ನಾಗಚೈತನ್ಯ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











