ಯುರೋಪ್‌ನಲ್ಲಿ ತಗ್ಲಾಕೊಂಡ ನಾಗಚೈತನ್ಯ ಮತ್ತು ಶೋಭಿತಾ ; ಸಂಸಾರ ಕೆಡಿಸೋದು ಬಿಡಮ್ಮಾ ಎಂದ ಸಮಂತಾ ಫ್ಯಾನ್ಸ್...!
ಸಮಂತಾ ಅವರಿಂದ ನಾಗಚೈತನ್ಯ ದೂರವಾದ ನಂತರ, ಪಕ್ಕದ ಆಂಧ್ರದಲ್ಲಿ ಅನೇಕರು ನಾಗಚೈತನ್ಯಗೆ ಮತ್ತೊಂದು ಮದುವೆ ಮಾಡಿಸುವ ಶಪಥವನ್ನ ಮಾಡಿದ್ದಾರೆ. ನಾಗಚೈತನ್ಯ ನಡೆ-ನುಡಿಯ ಮೇಲೆ ಕಣ್ಣಿಟ್ಟಿದ್ದಾರೆ.ಇದಕ್ಕೆ ಪುಷ್ಠಿ ನೀಡುವಂತೆ ಸಮಂತಾ ತೆಕ್ಕೆಯಿಂದ ಮೆಲ್ಲಗೆ ಜಾರಿದ ನಾಗಚೈತನ್ಯ, ಸೀದಾ ಶೋಭಿತಾ ಪಕ್ಕದಲ್ಲಿ ಬಿದ್ದಿದ್ದಾರೆ ಅನ್ನುವ ಅನುಮಾನ ಅನೇಕರಲ್ಲಿ ಇದೆ. ಇದೇ ಅನುಮಾನಕ್ಕೆ ಈಗ ರೆಕ್ಕೆ-ಪುಕ್ಕ ಮೂಡಿವೆ.
ಹೌದು, ಮೊನ್ನೆ..ಮೊನ್ನೆಯಷ್ಟೇ ತಿಪೇಶ್ವರ್ ವನ್ಯಜೀವಿಧಾಮದಿಂದ ಪ್ರತೈಕವಾಗಿ ಫೋಟೋ ಹಂಚಿಕೊಂಡು, ಎಲ್ಲರಲ್ಲಿನ ಅನುಮಾನ ಹೆಚ್ಚಿಸಿದ್ದ ನಾಗಚೈತನ್ಯ ಮತ್ತು ಶೋಭಿತಾ ಈಗ ಸಪ್ತಸಾಗರದಾಚೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಎಲ್ಲರ ಹುಬ್ಬೇರಿಸಿದ್ದಾರೆ.

ಯುರೋಪ್‌ನಲ್ಲಿ ರಜಾ-ಮಜಾ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿರುವ ನಾಗಚೈತನ್ಯ ಮತ್ತು ಶೋಭಿತಾ ಅಲ್ಲಿನ ವೈನ್ ಟೇಸ್ಟಿಂಗ್ ಸೆಷನ್‌ನ ಕಣ್ತುಂಬಿಕೊಂಡಿದ್ದಾರೆ. ಈ ಅನುಬಂಧದ ಅಭೂತಪೂರ್ವ ಘಳಿಗೆಯನ್ನ ರೆಡಿಟ್‌ನ ಬಳಕೆದಾರರೊಬ್ಬರು ಸೆರೆಹಿಡಿದು ಹಂಚಿಕೊಂಡಿದ್ದಾರೆ. ಇದಕ್ಕೆ ಇನ್ನೊಬ್ಬ ಬಳಕೆದಾರ ನಾನು ನಿನ್ನೆಯಷ್ಟೇ ಇಬ್ಬರನ್ನೂ ಆಮ್ ಸ್ಟರ್ ಡ್ಯಾಮ್ ನಲ್ಲಿ ನೋಡಿದೆ. ಸಿಕ್ಕಾಪಟ್ಟೆ ಖುಷಿಯಾಗಿದ್ದರು ಎಂದಿದ್ದಾರೆ.
ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ದಯಮಾಡಿ ಮನೆ ಹಾಳು ಮಾಡುವ ಕೆಲಸವನ್ನ ಮಾಡಬೇಡಿ ಎಂದು ಶೋಭಿತಾ ಅವರಲ್ಲಿ ಸಮಂತಾ ಮತ್ತು ನಾಗಚೈತನ್ಯ ಅವರ ಅಭಿಮಾನಿ ಬಣ ಮನವಿಯನ್ನೂ ಮಾಡುತ್ತಿದೆ. ಸಂಸಾರ ಕೆಡಿಸೋದು ಬಿಡಮ್ಮಾ, ಹೋಗಿ ಸಿನಿಮಾ ಮಾಡು ಎಂದು ಟ್ರೋಲಿಗರ ಗುಂಪು ಶೋಭಿತಾ ಅವರನ್ನು ಟ್ರೋಲ್ ಕೂಡ ಮಾಡುತ್ತಿದೆ.
Naga Chaitanya and Sobhita spotted in Europe at a wine tasting few days ago 🍷👀
byu/Eternal-Wisdom-9999 inBollyBlindsNGossip
ಅಂದ್ಹಾಗೇ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಪ್ರೇಮಾಂಕುರದ ಸುಳಿವು, ಮೊದಲು.. ಲಂಡನ್‌ನಲ್ಲಿ ಸಿಕ್ಕಿತ್ತು. ಇಬ್ಬರ ಡಿನ್ನರ್ ಡೇಟ್ ಗೆ ಅಲ್ಲಿನ ಪಂಚತಾರಾ ಹೊಟೇಲ್ ಸಾಕ್ಷಿಯಾಗಿದೆ ಅನ್ನುವ ಅನುಮಾನ ಅನೇಕರಿಗೆ ಬಂದಿತ್ತು. ಯಾಕೆಂದರೆ ಅಲ್ಲಿಯ ಶೆಫ್ ಅಭಿಮಾನಿ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ನಾಗಚೈತನ್ಯ ದುರಾದೃಷ್ಟ, ಬ್ಯಾಕ್‌ಗ್ರೌಂಡ್‌ನಲ್ಲಿ ಶೋಭಿತಾ ಮುಖ ಮುಚ್ಚಿಕೊಂಡಿದ್ದರು.
ಅವತ್ತು ನಾಗಚೈತನ್ಯ ಮತ್ತು ಶೋಭಿತಾ ಫೋಟೋ ವೈರಲ್ ಆದ ಬೆನ್ನಲ್ಲಿಯೇ, ಸಮಂತಾ ಸಂಬಂಧದ ಪಾಠ ಮಾಡಿದ್ದರು. ಯಾರು ಯಾರ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರೆ ನನಗೇನು? ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರೊಟ್ಟಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿ ಆದ್ರು ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆ ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ಸಮಂತಾ ಹೇಳಿದ್ದಾಗಿ ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ಸಮಂತಾ ಈ ವಿಚಾರ ತಳ್ಳಿ ಹಾಕಿದ್ದರು. ನಾನು ಯಾವತ್ತು ಈ ರೀತಿ ಹೇಳಿಯೇ ಇಲ್ಲ ಎಂದಿದ್ದರು.

ಇನ್ನೂ ಇದೆಲ್ಲದರ ನಡುವೆ ಆಗ ನಾಗಚೈತನ್ಯ ಅವರ ಅಭಿಮಾನಿಗಳಲ್ಲಿನ ಅಭಿಮಾನ ಜಾಗೃತಗೊಂಡಿತ್ತು. ಶೋಭಿತಾ ಹಾಗೂ ನಾಗ ಚೈತನ್ಯ ಸಂಬಂಧದ ಬಗ್ಗೆ ಸಮಂತಾರೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ನಾಗ ಚೈತನ್ಯ ಅಭಿಮಾನಿಗಳು ಆರೋಪ ಮಾಡಿದ್ದರು.
ಇದಕ್ಕೆ ಖಡಕ್ ಆಗಿ ಉತ್ತರಿಸಿದ್ದ ಸಮಂತಾ, ''ಹುಡುಗಿಯರ ಬಗ್ಗೆ ಗಾಸಿಪ್ ಅನ್ನು ನಿಜವೆಂದು ನಂಬಲಾಗುತ್ತದೆ. ಹುಡುಗರ ಬಗ್ಗೆ ಗಾಸಿಪ್ ಹಬ್ಬಿದರೆ ಇದಕ್ಕೆ ಹುಡುಗಿಯೇ ಕಾರಣ ಎನ್ನುತ್ತೀರಾ. ಬುದ್ಧಿವಂತರಾಗಿ. ಜಗತ್ತು ಮುಂದುವರೆಯುತ್ತಿದೆ. ನೀವೂ ಕೂಡ ಮುಂದುವರೆಯಿರಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆಗೆ ಹೆಚ್ಚಿನ ಗಮನ ಕೊಡಿ. ಮುಂದೆ ಸಾಗಿ'' ಎಂದಿದ್ದರು.

ಇದೆಲ್ಲವೂ ನಡೆದು ಈಗ ಒಂದು ವರ್ಷವಾಗಿದೆ. ಒಂದು ವರ್ಷದ ನಂತರ ನಾಗಚೈತನ್ಯ ಮತ್ತು ಶೋಭಿತಾ ನಡುವೆ ಇರುವ ಸಂಬಂಧದ ಕುರಿತು ಚರ್ಚೆ ಇನ್ನೊಮ್ಮೆ ಆರಂಭವಾಗಿದೆ. ನಾಗಚೈತನ್ಯ ಅವರನ್ನ ಬಿಟ್ಟು ತುಂಬಾ ದೂರ ಹೋಗಿರುವ ಸಮಂತಾ ಈ ಬಾರಿ ಸುಮ್ನೆ ಇರ್ತಾರಾ ಅಥವಾ ಪ್ರತಿಕ್ರಿಯೆ ನೀಡ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ. ನಾಗಚೈತನ್ಯ - ಶೋಭಿತಾ ತಮ್ಮ ಈ ಸಂಬಂಧಕ್ಕೆ ಸ್ನೇಹದ ಬದಲು ಬೇರೆ ಹೆಸರನ್ನ ಇಡ್ತಾರಾ ಅನ್ನುವುದನ್ನೂ ಕೂಡ ಕಾದು ನೋಡಬೇಕಿದೆ'


Click it and Unblock the Notifications











