ಚಿರಂಜೀವಿ ಅಳಿಯನಾಗಬೇಕಿತ್ತಾ ಅಲ್ಲು ಅರ್ಜುನ್? ಮೆಗಾಸ್ಟಾರ್ ಆಸೆ ಈಡೇರಲಿಲ್ವಾ?

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅಲ್ಲು ಅರವಿಂದ್ ಕುಟುಂಬದ ಮಧ್ಯೆ ಬಿರುಕು ಬಿಟ್ಟಿದೆ. ಎರಡೂ ಕುಟುಂಬದ ಸದಸ್ಯರು ಕೂಡ ಒಬ್ಬರ ಮೇಲೊಬ್ಬರು ಮುನಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಪವನ್ ಕಲ್ಯಾಣ್ ಅಣ್ಣಾವ್ರ ಸಿನಿಮಾವನ್ನು ಮುಂದಿಟ್ಟಕೊಂಡು ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾವನ್ನು ತೆಗೆಳಿದ್ದರು.

ಅತ್ತ ಅಲ್ಲು ಅರ್ಜುನ್ ಚುನಾವಣೆ ಸಮಯದಲ್ಲಿ ಪವನ್ ಕಲ್ಯಾಣ್ ಎದುರಾಳಿ ಸ್ಪರ್ಧಿ ಪರ ನಿಂತು ಪ್ರಚಾರ ಮಾಡಿದ್ದರು. ಟಾಲಿವುಡ್‌ನಲ್ಲಿ ಚಿರಂಜೀವಿ ಕುಟುಂಬಕ್ಕೂ, ಅಲ್ಲು ಅರವಿಂದ್ ಕುಟುಂಬಕ್ಕೂ ಆಗಿಬರುತ್ತಿಲ್ಲ. ಎರಡೂ ಫ್ಯಾಮಿಲಿಗಳು ಯಾವುದೋ ಕಾರಣಕ್ಕೆ ಬೇಸರ ಮಾಡಿಕೊಂಡಿವೆ ಅನ್ನೋ ಮಾತು ಕೇಳಿಬರುತ್ತಲೇ ಇದೆ.

News is that Chiranjeevi wanted Allu Arjun to marry his daughter Sreeja Konidela

ಇದೇ ಸಂದರ್ಭದಲ್ಲಿ ಈ ಎರಡು ಕುಟುಂಬದ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ತಮ್ಮ ಪ್ರೀತಿಯ ಪುತ್ರಿ ಶ್ರೀಜಾಳನ್ನು ಅಲ್ಲು ಅರ್ಜುನ್‌ಗೆ ಮದುವೆ ಮಾಡಿಕೊಡಬೇಕು ಅಂತ ಬಯಸಿದ್ದರು ಅನ್ನೋ ಮಾತು ಕೇಳಿ ಬರುತ್ತಿದೆ. ಅಷ್ಟಕ್ಕೂ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಏನಿದು? ತಿಳಿಯಲು ಮುಂದೆ ಓದಿ..

ಮೆಗಾಸ್ಟಾರ್ ಕುಟುಂಬ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದೆ. ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಜನಸೇನಾ ಪಕ್ಷ ಆಂಧ್ರ ಪ್ರದೇಶದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ. ಹೀಗಾಗಿ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್‌ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಕೊನಿಡೇಲಾ ಕುಟುಂಬ ಪವರ್‌ಫುಲ್ ಎನಿಸಿಕೊಂಡಿದೆ.

ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್‌ ಚರಣ್‌ ಗ್ಲೋಬಲ್ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅದೇ ಮಗಳು ಎರಡನೇ ಪತಿಗೂ ವಿಚ್ಛೇದನ ನೀಡಿ ಚಿರಂಜೀವಿ ಮನೆಯನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಮೊದಲ ಪತಿ ಸಿರೀಶ್ ಭಾರದ್ವಾಜ್ ಪ್ರೀತಿಯಲ್ಲಿ ಬಿದ್ದಿದ್ದ ಶ್ರೀಜಾ ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆಗಿದ್ದರು. ಆಗ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ತಮ್ಮೆಲ್ಲ ಪವರ್ ಬಳಸಿದರೂ ಮಗಳನ್ನು ಮನೆಗೆ ಕರೆತರಲು ಸಾಧ್ಯವಾಗಿರಲಿಲ್ಲ.

ಈ ವೇಳೆ ಚಿರಂಜೀವಿ ಮಗಳ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಬಳಿಕ ಮನೆಯವರೇ ನೋಡಿ ಕಲ್ಯಾಣ್ ದೇವ್ ಅವರೊಂದಿಗೆ ವಿವಾಹ ಮಾಡಿದ್ದರು. ಅದೂ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಇಬ್ಬರಿಗೂ ಮಗಳು ಜನಿಸಿದ್ದರು. ಸದ್ಯ ಎರಡು ಹೆಣ್ಣು ಮಕ್ಕಳ ಜೊತೆ ತಂದೆಯ ಮನೆಯಲ್ಲಿ ಶ್ರೀಜಾ ಕೊನಿಡೆಲಾ ಇದ್ದಾರೆ.

News is that Chiranjeevi wanted Allu Arjun to marry his daughter Sreeja Konidela

ಆದರೆ, ಚಿರಂಜೀವಿ ಈ ಎರಡೂ ಸಂಬಂಧವೂ ಇಷ್ಟವಿರಲಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಚಿರಂಜೀವಿಗೆ ತನ್ನ ಮಗಳು ಶ್ರೀಜಾಳನ್ನು ಅಲ್ಲು ಅರ್ಜುನ್‌ಗೆ ಮದುವೆ ಕೊಡಬೇಕು ಎಂಬ ಆಸೆ ಇತ್ತು ಅನ್ನೋ ಸುದ್ದಿ ಓಡಾಡುತ್ತಿದೆ. ಚಿಕ್ಕಂದಿನಿಂದಲೇ ಅಲ್ಲು ಅರ್ಜುನ್ ಟ್ಯಾಲೆಂಟ್ ಬಗ್ಗೆ ಚಿರಂಜೀವಿಗೆ ಗೊತ್ತಿತ್ತು. ಸ್ಟಾರ್ ಆಗಿ ಬೆಳೆಯುತ್ತಾನೆ ಅನ್ನೋದನ್ನು ಮನಗಂಡಿದ್ದರು. ಹೀಗಾಗಿ ಮಗಳನ್ನು ಕೊಡುವುದಕ್ಕೆ ಬಯಸಿದ್ದರು ಅನ್ನೋ ವರದಿಯೊಂದು ಓಡಾಡುತ್ತಿದೆ.

ಆದ್ರೀಗ ಸ್ನೇಹಾ ರೆಡ್ಡಿ ಎಂಬುವವರನ್ನು ಅಲ್ಲು ಅರ್ಜುನ್ ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅಲ್ಲು ಹಾಗೂ ಕೊನಿಡೆಲಾ ಕುಟುಂಬದ ನಡುವೆ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಚಿರಂಜೀವಿ ಆಸೆಯ ಮ್ಯಾಟರ್ ಕೂಡ ಸದ್ದು ಮಾಡುತ್ತಿದೆ.

More from Filmibeat

English summary
News is that Chiranjeevi wanted Allu Arjun to marry his daughter Sreeja Konidela
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X