ಅಸಿಸ್ಟೆಂಟ್ ಸಹಾಯ ಇಲ್ಲದೇ ನಡೆದಾಡಲು ಪರದಾಡಿದ ನಿಧಿ ಅಗರ್ವಾಲ್ ; ಬೇಕಿತ್ತಾ ಇದೆಲ್ಲಾ ? ತಲೆ ಚಚ್ಚಿಕೊಂಡ ಫ್ಯಾನ್ಸ್
ಚಿತ್ರರಂಗದಲ್ಲಿರುವ ಅನೇಕರು ಏನೇ ಮಾಡಿದರು ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿಕೊಂಡರು ಸುದ್ದಿ, ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇನ್ನು ಇದು ರಂಗೀನ್ ಲೋಕ. ಇಲ್ಲಿ ಎಲ್ಲವೂ ಕಲರ್ ಫುಲ್ . ಈ ಕಲರ್ ಫುಲ್ ಪ್ರಪಂಚದಲ್ಲಿ ಭದ್ರವಾಗಿ ಕಾಲೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆ ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ.
ಮತ್ತೂ ಕೆಲವರಲ್ಲಿ ಸಭೆ ಸಮಾರಂಭಗಳಲ್ಲಿ ಮಿರ ಮಿರ ಮಿಂಚಬೇಕು, ಎಲ್ಲರ ಕಣ್ಣು ಕುಕ್ಕಬೇಕೆನ್ನುವ ಉಮೇದಿ ಇರುತ್ತೆ. ಆದರೆ ಇವರ ಇದೇ ಹುರುಪು ಕೆಲ ಒಮ್ಮೆ ಇವರಿಗೆ ಮುಳುವಾಗುತ್ತೆ. ಟ್ರೋಲಿಗರಿಗೆ ಆಹಾರವಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಮದಿ ಹಾಡುತ್ತೆ. ಉದಾಹರಣೆಗೆ ನಿಧಿ ಅಗರವಾಲ್ ಅವರನ್ನೇ ತೆಗೆದುಕೊಳ್ಳಿ.

ಹೌದು, ನಿಧಿ ಅಗರವಾಲ್.. ಹೈದರಾಬಾದ್‌ನ ಚೆಲುವೆ. ಆದರೆ ಇವರು ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ . ಬೆಂಗಳೂರಿನ ಕ್ರೈಸ್ಟ್ ಕಾಲೇಜ್‌ನಲ್ಲಿ ಶಿಕ್ಷಣವನ್ನು ಪಡೆದಿರುವ ನಿಧಿ 2017ರಲ್ಲಿ ಬಾಲಿವುಡ್‌ನ ''ಮುನ್ನಾ ಮೈಕಲ್'' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದರು.
''ಸವ್ಯಸಾಚಿ''.. ''ಮಿಸ್ಟರ್ ಮಜ್ನು''.. ''ಐಸ್ಮಾರ್ಟ್ ಶಂಕರ್''.. ಹೀಗೆ ಹಲವು ಚಿತ್ರಗಳ ಮೂಲಕ ಜನ ಮನ ಗೆದ್ದು ಅಭಿಮಾನಿ ಬಳಗವನ್ನು ಕೂಡ ಹೊಂದಿರುವ ನಿಧಿ ಮೊನ್ನೆ ಮೊನ್ನೆ ''ರಾಜಾ ಸಾಬ್'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪವನ್ ಕಲ್ಯಾಣ್ ಅವರ ''ಹರಿಹರ ವೀರಮಲ್ಲು'' ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಂಡಿದ್ದರು.
ಇಂಥಾ ನಿಧಿ ಅಗರ್ವಾಲ್ ಇತ್ತೀಚೆಗೆ 70ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಳಿ ಬಣ್ಣದ ಧರಿಸಿದ್ದರು. ಆದರೆ ಇವರ ಈ ಲಾಂಗ್ ಗೌನ್ ಎಷ್ಟು ಭಾರ ಮತ್ತು ಉದ್ದವಾಗಿತ್ತೆಂದರೆ ರೆಡ್ ಕಾರ್ಪೆಟ್ ಮೇಲೆ ನಿಧಿಗೆ ನಡೆಯಲು ಕೂಡ ಸಾಧ್ಯವಾಗಲಿಲ್ಲ. ಕೊನೆಗೆ ಬಟ್ಟೆಯನ್ನು ಎತ್ತಿ ಹಿಡಿದುಕೊಳ್ಳಲು ಇವರ ಅಸಿಸ್ಟೆಂಟ್ ಬರಬೇಕಾಯ್ತು. ನಿಧಿ ಮುಂದೆ ನಡೆಯುತ್ತಿದ್ದರೆ ಹಿಂದೆಯಿಂದ ಸಹಾಯಕ ಅಸಹಾಯಕನಂತೆ ಬಟ್ಟೆ ಹಿಡಿದು ಓಡಾಡಬೇಕಾಯ್ತು. ಇಷ್ಟೇ ಅಲ್ಲ ನಿಧಿ ಕ್ಯಾಮರಾಗಳಿಗೆ ಫೋಸ್ ನೀಡುತ್ತಿದ್ದರೆ, ಆ ಅಸ್ಟಿಸ್ಟೆಂಟ್‌ಗೆ ಇವರ ಬಟ್ಟೆ ಸರಿ ಮಾಡುವುದೇ ಕೆಲಸವಾಗಿತ್ತು.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಟ್ರೋಲಿಗರಿಗೆ ಆಹಾರವೂ ಆಗಿದೆ. ಹಲವರ ಕಣ್ಣನ್ನೂ ಕೂಡ ಕೆಂಪಾಗಿಸಿದೆ. ಇದು ಫ್ಯಾಷನ್ ಅಲ್ಲ, ಅಹಂಕಾರ ಎಂದು ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ನಡೆಯಲು ಸಾಧ್ಯವಿಲ್ಲದ ಮೇಲೆ ಅಂತಹ ಬಟ್ಟೆಯನ್ನು ಧರಿಸುವುದಾದರೂ ಯಾಕೆ ಎಂಬ ಪ್ರಶ್ನೆ ಕೇಳುತ್ತಿರುವ ಹಲವರು, ಫ್ಯಾಷನ್ ಎಂಬುದು ಧರಿಸುವವರಿಗೆ ಆತ್ಮವಿಶ್ವಾಸ ನೀಡಬೇಕೇ ಹೊರತು, ಮತ್ತೊಬ್ಬರು ಕಷ್ಟಪಟ್ಟು ಅದನ್ನು ಹೊತ್ತುಕೊಂಡು ಹೋಗುವಂತೆ ಆಗಬಾರದು ಎಂಬ ವಾದವನ್ನು ಮಾಡುತ್ತಿದ್ದಾರೆ. ಇವರ ಉಡುಪು ಹೊರಲು ಇವರಿಗೆ ಒಬ್ಬ ಅಸಿಸ್ಟೆಂಟ್ ಬೇರೆ ಎಂದು ಕಾಲೆಳೆಯುತ್ತಿದ್ಧಾರೆ.
ಇನ್ನು ಇದೇ ಸಮಯದಲ್ಲಿ ಮಾನವೀಯತೆ ಮತ್ತು ತಮ್ಮ ಕೆಲಸಗಾರರಿಗೆ ಈ ಸೆಲೆಬ್ರೇಟಿಗಳು ನೀಡುವ ಗೌರವದ ಕುರಿತು ಕೂಡ ಕೆಲವರು ಚರ್ಚೆ ಮಾಡುತ್ತಿದ್ದಾರೆ. ನೋಡಲು ಸುಂದರವಾಗಿ ಕಾಣಬೇಕೆ ಹೊರತು ನೋಡುಗರ ಕಣ್ಣಿಗೆ ಕಾಮಿಡಿ ಪೀಸ್‌ಗಳಂತೆ ಕಾಣಬಾರದು ಎಂಬ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಲವರು ನಿಧಿ ಅಗರ್ವಾಲ್ ಅವರ ಈ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರೇಟಿಗಳು ಅಂದ ಮೇಲೆ ಇಷ್ಟೂ ಬಿಲ್ಡಪ್ ಕೊಡದೇ ಇದ್ದರೆ ಹೇಗೆ..? ಎನ್ನುತ್ತಿದ್ಧಾರೆ.


Click it and Unblock the Notifications











