ರಾಜಾ ಡಿಲಕ್ಸ್‌ನಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ನಿಧಿ ಅಗರ್ವಾಲ್

ತೆಲುಗು ನಟಿ ನಿಧಿ ಅಗರ್ವಾಲ್ ಆಗಸ್ಟ್ 17 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ನಟಿಯ ವಿಶೇಷ ದಿನದಂದು ಹೊಸ ಸಿನಿಮಾಗಳ ಘೋಷಣೆಯಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆಗೆ 'ರಾಜಾ ಡಿಲಕ್ಸ್' ನಲ್ಲಿ ನಿಧಿ ನಾಯಕಿ ಎಂದು ನಿರ್ದೇಶಕ ಮಾರುತಿ ಖಚಿತಪಡಿಸಿದ್ದಾರೆ.

'ರಾಜಾ ಡಿಲಕ್ಸ್' ಸೇರ್ಪಡೆಯಾದ ನಿಧಿ ಅಗರ್ವಾಲ್

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಟಿ ನಿಧಿ ಅಗರ್ವಾಲ್ ಅವರು ಆಗಸ್ಟ್ 17 ರಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ನಿಧಿ ಅಗರ್ವಾಲ್ ಅವರೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಚಲನಚಿತ್ರ ನಿರ್ದೇಶಕ ಮಾರುತಿ ಟ್ವಿಟರ್‌ನಲ್ಲಿ ಹೊಸ ವಿಷಯ ಹಂಚಿಕೊಂಡಿದ್ದಾರೆ.

Nidhhi Agerwal is the leading lady in Raja Deluxe with Prabhas, Director Maruti confirms

ನಿಧಿ ಅಗರ್ವಾಲ್ ಅವರಿಗೆ ಶುಭ ಹಾರೈಸಿರಿವ ಅವರು, "ಜನ್ಮದಿನದ ಶುಭಾಶಯಗಳು ಆತ್ಮೀಯ ನಿಧಿ ಅಗರ್ವಾಲ್ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು. ಶೀಘ್ರದಲ್ಲೇ ನಿಮ್ಮನ್ನು ಸೆಟ್‌ನಲ್ಲಿ ಭೇಟಿಯಾಗುತ್ತೇವೆ" ಎಂದು ತಿಳಿಸಿದ್ದಾರೆ.

ನಿರ್ದೇಶಕ ಮಾರುತಿ ಅವರ ಈ ಘೋಷಣೆಗಳು ಪ್ರಭಾಸ್ ಅವರ ಮುಂಬರುವ ಚಿತ್ರದ ಶೀರ್ಷಿಕೆ ಬದಲಾವಣೆಯ ಬಗ್ಗೆ ಉಂಟಾಗಿದ್ದ ವದಂತಿಗಳು ನಿಜವಲ್ಲ ಎಂಬುದನ್ನು ತೋರಿಸುತ್ತಿವೆ. ಸಿನಿಮಾ ಬಗ್ಗೆ ಹರಡುತ್ತಿದ್ದ ವದಂತಿಗಳು ಹಾಗೆಯೇ ತಣ್ಣಗಾಗುತ್ತಿದೆ. ಪ್ರಭಾಸ್ ಮತ್ತು ಮಾರುತಿ ರಾಜಾ ಡಿಲಕ್ಸ್‌ಗಾಗಿ ಒಂದಾಗುತ್ತಿದ್ದು, ಇವರ ಜೊತೆಗೆ ನಿಧಿ ಅಗರ್ವಾಲ್ ಪಾತ್ರವರ್ಗಕ್ಕೆ ಸೇರಿಕೊಂಡಿದ್ದಾರೆ. ಇನ್ನು, ನಟಿಯ ಸೇರ್ಪಡೆ ಬಗ್ಗೆ ಇದ್ದ ಊಹಾಪೋಹಗಳಿಗೂ ತೆರೆ ಬಿದ್ದಿದೆ.

Nidhhi Agerwal is the leading lady in Raja Deluxe with Prabhas, Director Maruti confirms

ನಿರ್ದೇಶಕ ಮಾರುತಿ ಅವರ ಖ್ಯಾತಿ ಮತ್ತು ಅವರು ಕಥೆ ಹೇಳುವ ಕೌಶಲ್ಯ, ನಿಧಿ ಅಗರ್ವಾಲ್ ಮತ್ತು ಪ್ರಭಾಸ್ ಜೋಡಿಯು ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.

'ರಾಜಾ ಡಿಲಕ್ಸ್' ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರ?

'ಆದಿಪುರುಷ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ 'ರಾಜಾ ಡಿಲಕ್ಸ್' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಹಾರರ್, ಕಾಮಿಡಿ ಎಂದು ಹೇಳಲಾಗಿರುವ 'ರಾಜಾ ಡಿಲಕ್ಸ್' ಚಲನಚಿತ್ರವು ಪ್ರಭಾಸ್ ಅನ್ನು ಎರಡು ಟೈಮ್‌ಲೈನ್‌ಗಳಲ್ಲಿ ತೋರಿಸಲಿದೆ. ಒಂದರಲ್ಲಿ ಅಜ್ಜನ ಪಾತ್ರ ಮತ್ತೊಂದರಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Nidhhi Agerwal is the leading lady in Raja Deluxe with Prabhas, Director Maruti confirms
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X