ನಟಿಯರ ಪ್ರತಿ ತಿಂಗಳ ಖರ್ಚು ಎಷ್ಟು? ಒಂದು ಈವೆಂಟ್‌ನಲ್ಲಿ ಭಾಗವಹಿಸೋಕೆ ಎಷ್ಟು ಲಕ್ಷ ಬೇಕು?

ಸಿನಿಮಾ ತಾರೆಯರು ಐಷಾರಾಮಿ ಜೀವನ ಸಾಗಿಸುತ್ತಾರೆ. ಹಣ ಇದ್ದರೂ ಇಲ್ಲದೇ ಇದ್ದರೂ ಅವರು ತಮ್ಮನ್ನು ತಾವು ಚೆನ್ನಾಗಿ ಪ್ರದರ್ಶಿಸಿಕೊಳ್ಳಬೇಕು. ಅದೇ ಬಣ್ಣದ ಲೋಕದ ಮಾಯೆ. ತಳುಕು ಬಳುಕಿನ ರಂಗೀನ್ ಪ್ರಪಂಚದಲ್ಲಿ ಎಲ್ಲವೂ ಕಲರ್‌ಫುಲ್ ಆಗಿರಬೇಕು. ಜಿಮ್, ಡಯೆಟ್, ಮೇಕಪ್ ಅಂತೆಲ್ಲಾ ನಟಿಯರು ತಿಂಗಳಿಗೆ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ?

ಹೈದರಾಬಾದ್‌ನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಓದಿ ಬೆಳೆದ ನಟಿ ನಿಧಿ ಅಗರ್‌ವಾಲ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಟ್ಟಿದ್ದಾರೆ. ಇತ್ತೀಚೆಗೆ ಪ್ರಭಾಸ್ ಜೊತೆ 'ರಾಜಾಸಾಬ್' ಚಿತ್ರದಲ್ಲಿ ನಟಿಸಿದ್ರು ಪ್ರಯೋಜನವಾಗಲಿಲ್ಲ. ಈ ಹಿಂದೆ Nikhil Vijayendra Simha ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ನಿಧಿ ಆಡಿದ್ದ ಮಾತುಗಳು ಈಗ ವೈರಲ್ ಆಗ್ತಿದೆ. ತಮ್ಮನ್ನು ಸೇರಿದಂತೆ ನಟಿಯರ ತಿಂಗಳ ಖರ್ಚು ಎಷ್ಟಾಗುತ್ತದೆ ಎಂದು ಆಕೆ ವಿವರಿಸಿದ್ದರು. ಹೇಗೆ ಆ ಹಣವನ್ನು ಗಳಿಸುತ್ತೇನೆ ಎನ್ನುವುದನ್ನು ಹೇಳಿದ್ದರು.

Nidhhi Agerwal Reveals Shocking Actress Expenses Month on Gym Makeup Styling and PR

ಹಣ ನಿಜಕ್ಕೂ ಬಹಳ ಮುಖ್ಯ.. ಹಣವೇ ಎಲ್ಲಾ ಅಲ್ಲ ಎಂದು ಯಾರಾದರೂ ಹೇಳಿದ್ರೆ ಕೇಳಬೇಡಿ. ನೀವು ಖುಷಿಯಾಗಿರಬೇಕು ಅಂದ್ರೆ ಅದಕ್ಕೆ ಹಣ ಬೇಕೆಬೇಕು. ನಾನು ಸಾಕಷ್ಟು ಬ್ರ್ಯಾಂಡ್ ಜಾಹೀರಾತುಗಳು, ಇನ್‌ಸ್ಟಾಗ್ರಾಮ್ ಪೋಸ್ಟ್, ಈವೆಂಟ್‌ಗಳಲ್ಲಿ ಭಾಗವಹಿಸಿ ಆದಾಯ ಗಳಿಸುತ್ತೇನೆ. ಹೇಗೋ ನಾನು ಜೀವನ ಸಾಗಿಸುತ್ತಿದ್ದೀನಿ. ಕಳೆದ 2 ವರ್ಷಗಳಿಂದ ಹಣದ ಸಮಸ್ಯೆ ಎದುರಾಗಲಿಲ್ಲ" ಎಂದು ನಿಧಿ ಅಗರ್‌ವಾಲ್ ಹೇಳಿದ್ದರು.

ಬೆಟ್ಟಿಂಗ್ ಆಪ್ ಪ್ರಚಾರ ಯಾಕೆ ಮಾಡ್ತೀರಾ ಎಂದು ಕೇಳ್ತಾರೆ.. ಹಣಕ್ಕಾಗಿ ಸಿನಿಮಾ ಮಾಡೋಕೆ ಆಗಲ್ಲ.. ಒಳ್ಳೆ ಪಾತ್ರಗಳು ಬೇಕು.. ಅದಕ್ಕಾಗಿ ಸಿನಿಮಾ ಮಾಡ್ತೀನಿ.. ಹಣಕ್ಕಾಗಿ ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ತೀನಿ ಎಂದು ನಿಧಿ ಹೇಳಿದ್ದರು. ಟ್ರೋಲ್ ಮಾಡುವವರಿಗೆ ಒಂದು ಮಾತು ಹೇಳ್ತೀನಿ, ನನ್ನ ಬಿಲ್ ಎಲ್ಲಾ ಕಳಿಸ್ತೀನಿ, ನೀವೇ ಪಾವತಿಸಿ ಎಂದು ಆಕೆ ನಕ್ಕಿದ್ದಾರೆ.

Nidhhi Agerwal Reveals Shocking Actress Expenses Month on Gym Makeup Styling and PR

ಈಗ ಕೆಲ ಸಿನಿಮಾ ಮಾಡಿರುವ ನಿನ್ನ ಮಟ್ಟದ ನಟಿಯರಿಗೆ ಅಥವಾ 200 ಸಿನಿಮಾಗಳಲ್ಲಿ ನಟಿಸಿರುವ ನಟಿಗೂ ತಿಂಗಳಿಗೆ ಎಷ್ಟು ಖರ್ಚು ಆಗುತ್ತದೆ? ಯಾವುದಕ್ಕೆ ಎಷ್ಟು ಖರ್ಚು ಮಾಡ್ತೀರಾ ಎಂದು ನಿಖಿಲ್ ಕೇಳಿದ್ದು ನಿಧಿ ಉತ್ತರಿಸಿದ್ದಾರೆ. "ಬಹಳ ಖರ್ಷಾಗುತ್ತದೆ. ತಿಂಗಳಿಗೆ 5 ಲಕ್ಷ ರೂಪಾಯಿ ಬೇಕಾಗಬಹುದು. ಟ್ರಾವೆಲ್, ಚಿತ್ರೀಕರಣ ಇಲ್ಲದೇ ಇದ್ದಾಗ ಉಳಿದುಕೊಳ್ಳಲು ವಸತಿ, ಡಯೆಟ್, ಜಿಮ್ ಟ್ರೈನಿಂಗ್, ಡ್ಯಾನ್ಸ್ ಟ್ರೈನಿಂಗ್, ಪಾರ್ಲರ್, ಮ್ಯಾನಿಕ್ಯೂರ್, ಪೆಡಿಕ್ಯೂರ್ ಅಂತೆಲ್ಲಾ ಬಹಳ ಖರ್ಚಾಗುತ್ತದೆ" ಎಂದು ನಿಧಿ ಲೆಕ್ಕ ಕೊಟ್ಟಿದ್ದಾರೆ.

ಫೋಟೊಶೂಟ್ ಮಾಡಿಸುವಾಗ ಮೇಕಪ್, ಕಾಸ್ಟ್ಯೂಮ್ ಅಂತೆಲ್ಲಾ ಬಹಳ ಖರ್ಚಾಗುತ್ತೆ. ಕೆಲವೊಮ್ಮೆ ಈವೆಂಟ್‌ಗಳಲ್ಲಿ ಭಾಗವಹಿಸೋಕೆ ಲಕ್ಷ ರೂಪಾಯಿ ವ್ಯಯಿಸಬೇಕಾಗುತ್ತದೆ. ಕೆಲವೊಮ್ಮೆ ಈವೆಂಟ್‌ಗಳಿಗೆ ಹೋಗಲು ಆಯೋಜಕರು ಹಣ ಕೊಡ್ತಾರೆ.. ಕೆಲವೊಮ್ಮೆ ನಾವೇ ಖರ್ಚು ಮಾಡಬೇಕಾಗುತ್ತದೆ. ಸ್ಟೈಲಿಂಗ್, ಮೇಕಪ್, ಫೋಟೊಸ್ ಅಂತೆಲ್ಲಾ ಖರ್ಚಾಗುತ್ತೆ.. ಪಿಆರ್‌ ಮಾಡಿಸಲು ಹಣ ಕೊಡಬೇಕು. ನಾವು ಕೆಲಸ ಮಾಡಲಿ, ಮಾಡದೇ ಇರಲಿ ಜೊತೆಗಿರುವ ಸಿಬ್ಬಂದಿಗೂ ಸಂಬಳ ಕೊಡಬೇಕು ಎಂದು ನಿಧಿ ಅಗರ್‌ವಾಲ್ ವಿವರಿಸಿದ್ದಾರೆ.

ನಾನು ಹೈದರಾಬಾದ್‌ನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದೆ. ಚಿತ್ರರಂಗಕ್ಕೆ ಬರಬೇಕು ಅಂದಾಗ ಮುಂಬೈಗೆ ಹೋಗಿ 3 ವರ್ಷ ವಾಸ್ತವ್ಯ ಹೂಡಿದ್ದೆ. ಬಾಲಿವುಡ್‌ನಲ್ಲೇ ಮೊದಲ ಸಿನಿಮಾದಲ್ಲಿ ನಟಿಸಿದೆ. ನಿಧಿ ನಟಿಸಿದ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡದೇ ಇದ್ದರೂ ಪಡ್ಡೆ ಹುಡುಗರ ಫಾಲೋಯಿಂಗ್ ಚೆನ್ನಾಗಿದೆ. ಆಕೆಯ ಮೂರ್ತಿ ಪ್ರತಿಷ್ಠಾಪಿಸಿ ಹಾಲಿನ ಅಭಿಷೇಕ ಮಾಡಿದ್ದ ಘಟನೆ ಕೂಡ ನಡೆದಿತ್ತು.

Read more about: actress tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X