Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದುವೆ ಸಂಭ್ರಮದಲ್ಲಿ ನಿಹಾರಿಕಾ; ಸಂಗೀತ ಸಮಾರಂಭದಲ್ಲಿ ಮಿಂಚಿದ ಮೆಗಾಸ್ಟಾರ್ ಕುಟುಂಬ
ತೆಲುಗು ಸಿನಿಮಾರಂಗದ ಖ್ಯಾತ ನಟ ಮೆಗಾ ಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ವರ್ಷಗಳ ಬಳಿಕ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಂತಸ ಕಳೆಗಟ್ಟಿಗೆ. ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೇಲ ಮದುಮಗಳಾಗಿ ಮಿಂಚುತ್ತಿದ್ದಾರೆ.
ಈಗಾಗಲೇ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಿಹಾರಿಕಾ ಮತ್ತು ಚೈತನ್ಯ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿದ್ದು, ಈಗಾಗಲೇ ಇಡೀ ಮೆಗಾಸ್ಟಾರ್ ಕುಟುಂಬ ಖಾಸಗಿ ವಿಮಾನದಲ್ಲಿ ರಾಜಸ್ಥಾನಕ್ಕೆ ತೆರಳಿದ್ದಾರೆ. ಮುಂದೆ ಓದಿ..
ಅಮ್ಮನ ನಿಶ್ಚಿತಾರ್ಥದ ಸೀರೆಯಲ್ಲಿ ಮಿಂಚಿದ ಮದುಮಗಳು ನಿಹಾರಿಕಾ

ಸಂಗೀತ ಸಮಾರಂಭದ ವಿಡಿಯೋ ವೈರಲ್
ಮದುವೆ ಪೂರ್ವ ಶಾಸ್ತ್ರಗಳಲ್ಲಿ ನಿಹಾರಿಕಾ ಮಿಂಚುತ್ತಿದ್ದಾರೆ. ಇದೀಗ ಸಂಗೀತ ಸಮಾರಂಭದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. ನಿಹಾರಿಕಾ ಮತ್ತು ಭಾವಿ ಪತಿ ಚೈತನ್ಯ ಇಬ್ಬರು ಹಿಂದಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೀಲಿ ಬಣ್ಣದ ಗೌನ್ ಮಿಂಚಿದ ನಿಹಾರಿಕಾ
ನೀಲಿ ಬಣ್ಣದ ವಿ ನೆಕ್ ಗೌನ್ ಧರಿಸಿ ಕಂಗೊಳಿಸಿದ್ದಾರೆ. ಸ್ಟೈಲಿಶ್ ಚೋಕರ್ ನೆಕ್ಲೆಸ್ ಮತ್ತು ಕಿವಿಯೋಲೆ ಧರಿಸಿದ್ದಾರೆ. ಇನ್ನು ಮದುಮಗ ಚೈತನ್ಯ ಶ್ವೇತ ವರ್ಣದ ಶೇರ್ವಾನಿ ಧರಿಸಿದ್ದಾರೆ. ಸುಂದರವಾಗಿ ಕಾಣಿಸುತ್ತಿರುವ ನಿಹಾರಿಕಾ ಜೋಡಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ.
ಖಾಸಗಿ ವಿಮಾನದಲ್ಲಿ ಉದಯಪುರಕ್ಕೆ ಹೊರಟ ನವವಧು ನಿಹಾರಿಕಾ

ಅಮ್ಮನ ನಿಶ್ಚಿತಾರ್ಥದ ಸೀರೆ ಧರಿಸಿದ ನಿಹಾರಿಕಾ
ಮದುವೆ ಪೂರ್ವ ಶಾಸ್ತ್ರದಲ್ಲಿ ನಟಿ ನಿಹಾರಿಕಾ ಅವರ ಅಮ್ಮ ಪದ್ಮಜಾ ಅವರ ಸೀರೆ ಧರಿಸಿ ಮಿಂಚಿದ್ದರು. ನಿಹಾರಿಕಾ ತಾಯಿ ನಿಶ್ಚಿತಾರ್ಥದಲ್ಲಿ ಧರಿಸಿದ್ದ ಸೀರೆಯನ್ನು ನಿಹಾರಿಕಾ ತನ್ನ ಮದುವೆಗೆ ಧರಿಸಿ ಸಂತಸಪಟ್ಟಿದ್ದರು. ನೀಲಿ ಬಣ್ಣದ ಬನಾರಸ್ ಜರಿ ಸೀರೆ ಧರಿಸಿ ಫೋಟೋಗೆ ಪೋಸ್ ನೀಡಿದ್ದರು. 32 ವರ್ಷದ ಹಳೆಯ ಸೀರೆ ಇದಾಗಿದೆ. ನಿಹಾರಿಕಾ ತಾಯಿ ನಿಶ್ಚಿತಾರ್ಥದಲ್ಲಿ ಧರಿಸಿದ್ದ ಫೋಟೋ ಮತ್ತು ತನ್ನ ಫೋಟೋ ಎರಡನ್ನು ಶೇರ್ ಮಾಡಿದ್ದರು.

ಡಿಸೆಂಬರ್ 9ಕ್ಕೆ ಮದುವೆ
ಡಿಸೆಂಬರ್ 9ರಂದು ನಿಹಾರಿಕಾ ಮತ್ತು ಚೈತನ್ಯ ಮದುವೆ ನಡೆಯುತ್ತಿದೆ. ರಾಜಸ್ಥಾನದ ಉದಯಪುರದ ಉದಯ್ ವಿಲಾಸ ಅರಮನೆಯಲ್ಲಿ ಇಬ್ಬರ ಮದುವೆ ನಡೆಯಲಿದೆ. ಡಿಸೆಂಬರ್ 9 ಸಂಜೆ 7.15ರ ಮುಹೂರ್ತದಲ್ಲಿ ಚೈತನ್ಯ ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. 8.30ರ ಬಳಿಕ ಊಟದ ವ್ಯವಸ್ಥೆ ಮಾಡಲಾಗಿದೆ.