Just In
Don't Miss!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋಟೋಗಳು; ಚೈತನ್ಯ ಜೊತೆ ಹಸೆಮಣೆ ಏರಿದ ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾ
ಮೆಗಾ ಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾ ಮದುವೆ ಅದ್ದೂರಿಯಾಗಿ ನೆರವೇರಿತು. ಕಳೆದ ಐದಾರು ದಿನಗಳಿಂದ ಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿತ್ತು. ನಟಿ ನಿಹಾರಿಕಾ ಗೆಳೆಯ ಚೈತನ್ಯ ಜೊನ್ನಲಗಡ್ಡ ಜೊತೆ ರಾಜಸ್ಥಾನದ ಉದಯ್ ಪುರದ ಉದಯ್ ವಿಲಾಸ ಅರಮನೆಯಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ.
ಇಬ್ಬರ ಮದುವೆಗೆ ಇಡೀ ಕುಟುಂಬದವರು ಸಾಕ್ಷಿಯಾಗಿದ್ದಾರೆ. ಡಿಸಂಬರ್ 9 ಸಂಜೆ 7.15ರ ಮುಹೂರ್ತದಲ್ಲಿ ಚೈತನ್ಯ ನಟಿ ನಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಮೆಗಾಸ್ಟಾರ್ ಮತ್ತು ಚೈತನ್ಯ ಕುಟುಂಬ ಹಾಗೂ ಆಪ್ತರು ಸೇರಿದಂತೆ ಕೇವಲ 100 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮದುವೆಯ ಸಂಪೂರ್ಣ ಉಸ್ತುವಾರಿಯನ್ನು ನಿಹಾರಿಕಾ ಸಹೋದರ ವರುಣ್ ತೇಜ್ ವಹಿಸಿಕೊಂಡಿದ್ದರು.

ಖಾಸಗಿ ವಿಮಾದಲ್ಲಿ ಉದಯ್ ಪುರಕ್ಕೆ ಹಾಕಿದ್ದ ಕುಟುಂಬ
ಮೆಗಾಸ್ಟಾರ್ ಕುಟುಂಬ ಮೂರ್ನಾಲ್ಕು ದಿನಗಳ ಹಿಂದೆಯೆ ಉದಯ್ ಪುರಕ್ಕೆ ತೆರಳಿದ್ದರು. ಖಾಸಗಿ ವಿಮಾನದಲ್ಲಿ ಇಡೀ ಕುಟುಂಬ ರಾಜಸ್ಥಾನಕ್ಕೆ ತೆರಳಿತ್ತು. ಸಂಗೀತ ಸಮಾರಂಭ, ಅರಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ಹೀಗೆ ಮದುವೆಯ ಪ್ರತಿಯೊಂದು ಶಾಸ್ತ್ರವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

ಗೋಲ್ಡ್ ಬಣ್ಣದ ಸೀರಿಯಲ್ಲಿ ಕಂಗೊಳಿಸಿದ ನಿಹಾರಿಕಾ
ಗೋಲ್ಡ್ ಬಣ್ಣದ ಸೀರೆಯಲ್ಲಿ ಮದುಮಗಳು ನಿಹಾರಿಕಾ ಕಂಗೊಳಿಸುತ್ತಿದ್ದರು. ಮದುಮಗ ಚೈತನ್ಯ ಕಂದು ಮತ್ತು ಗೋಲ್ಡ್ ಬಣ್ಣದ ಶೇರ್ವಾನಿ ಧರಿಸಿದ್ದರು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮದುವೆಯಲ್ಲಿ ಮಿಂಚಿದ ಮೆಗಾ ಕುಟುಂಬದ ಹೀರೋಗಳು
ನಿಹಾರಿಕಾ ಮದುವೆಯಲ್ಲಿ ಇಡೀ ಕುಟುಂಬ ಸಂಭ್ರಮಿಸಿದೆ. ಚಿರಂಜೀವಿ ದಂಪತಿ, ಅಲ್ಲು ಅರ್ಜುನ್ ದಂಪತಿ, ರಾಮ್ ಚರಣ್ ದಂಪತಿ, ಪವನ್ ಕಲ್ಯಾಣ್, ಸಾಯಿ ಧರಮ್, ವೈಷ್ಣವ್ ತೇಜ್, ಕಲ್ಯಾಣ್ ದೇವ್ ಸೇರಿದಂತೆ ಮೆಗಾ ಕುಟುಂಬದ ಹೀರೋಗಳು ಸಹೋದರಿಯ ಮದುವೆಯನ್ನು ಸಖತ್ ಎಂಜಾಯ್ ಮಾಡಿದ್ದಾರೆ.

ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ದಂಪತಿ
ನಟ ರಾಮ್ ಚರಣ್ ಮತ್ತು ಉಪಾಸನ ದಂಪತಿ ನಿಹಾರಿಕಾ ಮದುವೆಯಲ್ಲಿ ಸಖತ್ ಮಿಂಚಿದ್ದಾರೆ. ರಾಮ್ ಚರಣ್ ಬಿಳಿ ಮತ್ತು ಸಿಲ್ವರ್ ಬಣ್ಣದ ಶೇರ್ವಾನಿ ಧರಿಸಿದ್ರೆ, ಪತ್ನಿ ಉಪಾಸನ ಕೆಂಪು ಬಣ್ಣದ ಎಂಬ್ರಾಯಿಡರಿ ಸೀರೆ ಧರಿಸಿದ್ದರು. ಇನ್ನು ಅಲ್ಲು ಅರ್ಜುನ್ ಸಹ ಬಿಳಿ ಮತ್ತು ಸಿಲ್ವರ್ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ಗುಲಾಬಿ ಬಣ್ಣದ ಜರಿ ಸೀರೆಯಲ್ಲಿ ಕಂಗೊಳಿಸಿದ್ದಾರೆ.

ಪವನ್ ಕಲ್ಯಾಣ್ ಮತ್ತು ಚಿರಂಜೀವಿ
ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಸಹೋದರನ ಮಗಳ ಮದುವೆಯಲ್ಲಿ ನೀಲಿ ಬಣ್ಣದ ಕುರ್ತ ಮತ್ತು ಬಿಳಿ ಬಣ್ಣದ ಪೈಜಾಮದಲ್ಲಿ ಧರಿಸಿ ಮಿಂಚಿದ್ದಾರೆ. ನಿಹಾರಿಕಾ ನಿಶ್ಚಿತಾರ್ಥಕ್ಕೆ ಗೈರಾಗಿದ್ದ ಪವನ್ ಕಲ್ಯಾಣ್ ಮದುವೆಗೆ ಎರಡು ದಿನಗಳ ಮುಂಚಿತವಾಗಿಯೇ ಉದಯ್ ಪುರಕ್ಕೆ ತೆರಳಿದ್ದರು. ಇನ್ನು ನಟ ಚಿರಂಜೀವಿ ದಂಪತಿ ತಮ್ಮನ ಮುದ್ದಿನ ಮಗಳು ನಿಹಾರಿಕಾ ಮದುವೆಗೆ ಕುಟುಂಬದ ಜೊತೆಯೆ ಉದಯ್ ಪುರಕ್ಕೆ ತೆರಳಿದ್ದಾರೆ. ಗ್ರ್ಯಾಂಡ್ ಶೇರ್ವಾನಿ ಧರಿಸಿ ಮಿಂತಿದ್ದಾರೆ.